ಆ್ಯಪ್ನಗರ

ಅಪ್ಪಂದಿರ ಆಣೆ, ಪ್ರಮಾಣಗಳು ಎಲ್ಲಿ ಹೋದವು?

ಚನ್ನಮ್ಮನ ಕಿತ್ತೂರು: ಚುನಾವಣೆ ಪೂರ್ವದಲ್ಲಿ, ಕುಮಾರಸ್ವಾಮಿ ಅವರಪ್ಪನ ಆಣೆಯಾಗಿಯೂ ಸಿ ಎಮ್‌ ಆಗುವದಿಲ್ಲ ಎಂದು ...

Vijaya Karnataka 24 May 2018, 5:00 am
ಚನ್ನಮ್ಮನ ಕಿತ್ತೂರು: ಚುನಾವಣೆ ಪೂರ್ವದಲ್ಲಿ, ಕುಮಾರಸ್ವಾಮಿ ಅವರಪ್ಪನ ಆಣೆಯಾಗಿಯೂ ಸಿ ಎಮ್‌ ಆಗುವದಿಲ್ಲ ಎಂದು ಸಿದ್ದರಾಮಯ್ಯ ಗುಡುಗಿದ್ದರು. ಅದರಂತೆ ಅದರಂತೆ ಜೆಡಿಎಸ್‌ ಕೂಡ, ಕಾಂಗ್ರೆಸ್‌ ಸರಕಾರ ಅವರಪ್ಪರಾಣೆಯಾಗಿಯೂ ಸರಕಾರ ರಚಿಸೊಲ್ಲ ಎಂದು ವ್ಯಂಗ್ಯವಾಡಿದ್ದರು. ಈಗ ನೋಡಿದರೆ ಎರಡೂ ಪಕ್ಷ ಗಳು ಕೂಡಿ ಕಿಚಡಿ ಸರಕಾರ ರಚಿಸಿದ್ದು, ಇವರ ಆಣೆ ಪ್ರಮಾಣಗಳು ಎಲ್ಲಿ ಹೋದವು ಎಂದು ಶಾಸಕ ಮಹಾಂತೇಶ ದೊಡಗೌಡರ ಹೊಸ ಸರಕಾರವನ್ನು ಪ್ರಶ್ನಿಸಿದರು.
Vijaya Karnataka Web BEL-23 KITTUR PHOTO 2


ಅವರು ಬುಧವಾರ ಇಲ್ಲಿನ ಚನ್ನಮ್ಮನ ವೃತ್ತದಲ್ಲಿ ಮೈತ್ರಿ ಸರಕಾರ ರಚನೆಯ ವಿರುದ್ಧ ಕರಾಳ ದಿನ ಆಚರಣೆ ಸಂದರ್ಭದಲ್ಲಿ ಮಾತನಾಡಿದರು. ಇನ್ನೂ ಸರಕಾರ ರಚನೆ ಆಗುವ ಮುನ್ನವೇ ಕೃಷ್ಣಾ ಬಲದಂಡೆ ಕಾಲುವೆ ಟೆಂಡರನ್ನು ತಮಗೆ ಬೇಕಾದವರಿಗೆ ನೀಡಿದ್ದಾರೆ. ಈ ಮೂಲಕ ಪ್ರಾಥಮಿಕ ಹಂತದಲ್ಲಿಯೇ ಭ್ರಷ್ಟಾಚಾರ ಆರಂಭಿಸಿದ್ದಾರೆ. ಇನ್ನು ಈ ರಾಜ್ಯವನ್ನು ಆ ದೇವರೇ ಕಾಪಾಡಬೇಕು ಎಂದರು.

ಅಪವಿತ್ರ ಮೈತ್ರಿ ಸರಕಾರ ರಾಜ್ಯಕ್ಕೇ ಅವಮಾನಕರ. ಜೆಡಿಎಸ್‌ ವಿರುದ್ಧ ಹರಿಹಾಯುತ್ತಿದ್ದ ಸಿದ್ದರಾಮಯ್ಯ ಈಗ ಅವರ ಜತೆಯೇ ಹೆಜ್ಜೆ ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ. ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವುದಾಗಿ ಆಶ್ವಾಸನೆ ನೀಡಿ ಈಗ ಮುಖ್ಯಮಂತ್ರಿ ಗದ್ದುಗೆ ಏರಿದ್ದು ಈಗ ಸಾಲದ ಬಗ್ಗೆ ಕೈಚೆಲ್ಲಿದ್ದಾರೆ. ಇವರಿಗೇನು ಎರಡು ನಾಲಿಗೆ ಇವೆಯೇ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಬ್ಲಾಕ್‌ ಅಧ್ಯಕ್ಷ ಚಿನ್ನಪ್ಪ ಮುತ್ನಾಳ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸನಗೌಡ ಸಿದ್ರಾಮಣಿ, ಶಿವಾನಂದ ಹನುಮಸಾಗರ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಶಿವನಗೌಡಾ ಪಾಟೀಲ, ನಿಜಲಿಂಗಯ್ಯಾ ಹಿರೇಮಠ, ಸರಸ್ವತಿ ಹೈಬತ್ತಿ, ಪಪಂ ಸದಸ್ಯರು, ಹಾಗೂ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಪ್ರತಿಕೃತಿ ದಹಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ