ಆ್ಯಪ್ನಗರ

ನಿನ್ನೆ ಬಿಜೆಪಿ ಮುಖಂಡರ ಜತೆ, ಇಂದು ಜೆಡಿಎಸ್‌ನಿಂದ ನಾಮಪತ್ರ!

ಉಪ ಚುನಾವಣೆಗೆ ಅಥಣಿ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಗುರಪ್ಪ ದಾಶ್ಯಾಳ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ...

Vijaya Karnataka 19 Nov 2019, 5:00 am
ತೆಲಸಂಗ (ಬೆಳಗಾವಿ): ಉಪ ಚುನಾವಣೆಗೆ ಅಥಣಿ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಗುರಪ್ಪ ದಾಶ್ಯಾಳ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಜಿಪಂ ಬಿಜೆಪಿ ಸದಸ್ಯರಾಗಿರುವ ದಾಶ್ಯಾಳ ಭಾನುವಾರವಷ್ಟೇ ಬಿಜೆಪಿ ಮುಖಂಡರ ಸಭೆಯಲ್ಲಿಭಾಗಿಯಾಗಿದ್ದರು. ಆದರೆ, ಸೋಮವಾರ ಜೆಡಿಎಸ್‌ನಿಂದ ಉಮೇದುವಾರಿಕೆ ಸಲ್ಲಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
Vijaya Karnataka Web 18TELSANG2_53
ಗುರಪ್ಪ ದಾಶ್ಯಾಳ.


ಈ ಕುರಿತು 'ವಿಕ'ದೊಂದಿಗೆ ಮಾತನಾಡಿದ ಅವರು, ''ಮಹೇಶ್‌ ಕುಮಠಳ್ಳಿ ಸೇರಿದಾಗಿನಿಂದ ಬಿಜೆಪಿ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ನಾನೊಬ್ಬ ಜಿಪಂ ಸದಸ್ಯ. ನನಗೇ ಪಕ್ಷದಲ್ಲಿಸ್ಪಂದನೆ ಸಿಗುತ್ತಿಲ್ಲ. ಇನ್ನು ಸಾಮಾನ್ಯ ಮೂಲ ಕಾರ್ಯಕರ್ತರ ಪಾಡು ಏನಾಗಿರಬೇಡ? ಕುಮಾರಸ್ವಾಮಿಯವರ ರೈತಪರ ಕಾಳಜಿ ನೋಡಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದೇನೆ'', ಎಂದು ತಿಳಿಸಿದರು.

ಮಹೇಶ್‌ ಕುಮಠಳ್ಳಿ ಹಾಗೂ ಗುರಪ್ಪ ದಾಶ್ಯಾಳ ಇಬ್ಬರೂ ಪಂಚಮಸಾಲಿ ಸಮುದಾಯದವರಾಗಿದ್ದು, ಇಬ್ಬರಿಗೂ ಮತ ವಿಭಜನೆಯ ಆತಂಕವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ