ಆ್ಯಪ್ನಗರ

ನಾಯಿ ಅಡ್ಡ ಬಂದು ಬೈಕ್‌ ಅಪಘಾತ: ಮಹಿಳೆ ಸಾವು

ಸಮೀಪದ ಬೆಲ್ಲದ ಬಾಗೇವಾಡಿ-ಕಬ್ಬೂರ ರಸ್ತೆಯಲ್ಲಿ ಶನಿವಾರ ಬೈಕ್‌ನಿಂದ ಬಿದ್ದು ...

Vijaya Karnataka 28 Jul 2019, 5:00 am
ಕಬ್ಬೂರ: ಸಮೀಪದ ಬೆಲ್ಲದ ಬಾಗೇವಾಡಿ-ಕಬ್ಬೂರ ರಸ್ತೆಯಲ್ಲಿ ಶನಿವಾರ ಬೈಕ್‌ನಿಂದ ಬಿದ್ದು ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಹುಕ್ಕೇರಿ ತಾಲೂಕು ಕೋಟಬಾಗಿ ಗ್ರಾಮದ ಮಹಾದೇವಿ ದಶರಥ ಹತ್ತರಗಿ (42) ಮೃತ ಮಹಿಳೆ.
Vijaya Karnataka Web woman dies after bike accident occurred by a dog
ನಾಯಿ ಅಡ್ಡ ಬಂದು ಬೈಕ್‌ ಅಪಘಾತ: ಮಹಿಳೆ ಸಾವು


ಅವರು ಶನಿವಾರ ಮಗನೊಂದಿಗೆ ಬೈಕ್‌ ಮೂಲಕ ಕಬ್ಬೂರ ಪಟ್ಟಣದ ತಮ್ಮ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ನಾಯಿಗಳು ಅಡ್ಡ ಬಂದಿದ್ದರಿಂದ ಬೈಕ್‌ ನಿಯಂತ್ರಣ ತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ