ಆ್ಯಪ್ನಗರ

ಮಹಿಳೆಯರು ಸಂಸ್ಕೃತಿಯ ಪ್ರತಿಬಿಂಬ

ಬೈಲಹೊಂಗಲ: ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ...

Vijaya Karnataka 25 Sep 2018, 5:00 am
ಬೈಲಹೊಂಗಲ: ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ. ದೇಶದ ಸಂಸ್ಕೃತಿ-ಪರಂಪರೆ ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಕೊಡುಗೆ ಅಪಾರ ಎಂದು ಪತ್ರಕರ್ತೆ, ಮಹಿಳಾ ಚಿಂತಕಿ ಡಾ.ವಿಜಯಾ ಹೇಳಿದರು.
Vijaya Karnataka Web BEL-24HTP3


ಪಟ್ಟಣದ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಬೈಲಹೊಂಗಲದ ಅಕ್ಕಮಹಾದೇವಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ''ಶಕ್ತಿ ಸಂಭ್ರಮ'' ಅಂತರ್‌ ಮಹಾವಿದ್ಯಾಲಯಗಳ ಮಹಿಳಾ ಯುವಜನೋತ್ಸವದ ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕು. ಮಹಿಳೆಯರು ತಾವು ಪುರುಷರಿಗೆ ಸಮಾನವೆಂಬ ಭಾವನೆ ಬೆಳೆಸಿಕೊಂಡು ಗುರಿ, ಸಾಧನೆಯತ್ತ ಗಮನಹರಿಸಬೇಕು. ಇಂದಿನ ವೈಜ್ಞಾನಿಕ ಯುಗದಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲೂ ಮುಂಚೂಣಿ ಪಾತ್ರ ವಹಿಸುತ್ತಿದ್ದಾಳೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾಳೆ ಎಂದರು.

ಸಾಹಿತಿ, ಕಲಾವಿದ ಡಾ.ಡಿ.ಎಸ್‌.ಚೌಗಲೆ ಮಾತನಾಡಿ, ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿ ತೋರಬೇಕು. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಸಮಾಜಮುಖಿ ಕೆಲಸ ಮಾಡಬೇಕು. ಯುವಕರು ಲವಲವಿಕೆಯಿಂದ ಇದ್ದು ನಿರಂತರ ಚಿಂತನೆ ಮಾಡಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮಾತನಾಡಿದರು.

ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಓಂಕಾರ ಕಾಕಡೆ, ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ, ಉಪನ್ಯಾಸಕ ಎಸ್‌.ಆರ್‌.ಕಲಹಾಳ, ಪ್ರೊ.ಆರ್‌.ಸುನಂದಮ್ಮಾ, ರೇವಯ್ಯಾ ವಸ್ತ್ರದಮಠ, ತಾಂತ್ರಿಕ ಸಮಿತಿಯ ಡಾ.ಪಿ.ಜಿ.ತಡಸಲ, ಡಾ.ಎಂ.ಪಿ.ಬಳಿಗಾರ, ಸಿಆರ್‌ಸಿ ಎಂ.ಬಿ.ಗಣಾಚಾರಿ, ಡಾ.ಸಂಜೀವಕುಮಾರ ಗಿರಿ, ಡಾ.ವಿಕ್ರಮ ಹಿರೇಮಠ, ಪ್ರೊ.ಸವಿತಾ ರೊಟ್ಟಿ, ಪ್ರೊ.ವಿನೋದಾ ಅಂಗಡಿ ಇತರರು ಉಪಸ್ಥಿತರಿದ್ದರು.

ಪ್ರೊ.ರೇಣುಕಾ, ವಿದ್ಯಾರ್ಥಿನಿಯರಾದ ಪ್ರೇಮಾ ಪೂಜಾರಿ, ಪೂಜಾ ಕುಂದಗೋಳ ಅನಿಸಿಕೆ ವ್ಯಕ್ತಪಡಿಸಿದರು. ಯು.ಕೆ.ಕುಲಕರ್ಣಿ ಸ್ವಾಗತಿಸಿದರು. ಡಾ.ವಿಷ್ಣು ಶಿಂಧೆ ನಿರೂಪಿಸಿದರು. ಎಂ.ಹೆಚ್‌.ಪೆಂಟೇದ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ