ಆ್ಯಪ್ನಗರ

ಸಾರ್ವಜನಿಕ ಶೌಚಾಲಯ ತೆರವು ಖಂಡಿಸಿ ಮಹಿಳೆಯರ ಪ್ರತಿಭಟನೆ

ಸವದತ್ತಿ: ಪಟ್ಟಣದ ದನದ ಮಾರುಕಟ್ಟೆ ಬಳಿಯಿರುವ ಮಹಿಳೆಯರ ...

Vijaya Karnataka 13 Mar 2020, 5:00 am
ಸವದತ್ತಿ: ಪಟ್ಟಣದ ದನದ ಮಾರುಕಟ್ಟೆ ಬಳಿಯಿರುವ ಮಹಿಳೆಯರ ಸಾರ್ವಜನಿಕ ಶೌಚಾಲಯವನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಬೇವಿನಗಿಡದ ಓಣಿ ಮತ್ತು ಕುಂಬಾರ ಓಣಿಯ ನಾಗರಿಕರು, ಮಹಿಳೆಯರು ಪುರಸಭೆ ಬಾಗಿಲ ಮುಂದೆ ಉಪಹಾರ ತಯಾರಿಸಿ ಗುರುವಾರ ವಿಶೇಷ ಪ್ರತಿಭಟನೆ ದಾಖಲಿಸಿದರು.
Vijaya Karnataka Web 12SDT3_53
ಸವದತ್ತಿಯ ದನದ ಮಾರುಕಟ್ಟೆಯ ಬಳಿಯ ಸಾರ್ವಜನಿಕ ಮಹಿಳಾ ಶೌಚಾಲಯ ತೆರವುಗೊಳಿಸಿರುವದನ್ನು ಖಂಡಿಸಿ ಓಣಿಯ ನಾಗರಿಕರು ಪುರಸಭೆ ಎದುರು ಪ್ರತಿಭಟನೆ ನಡೆಸಿದರು.


ಸ್ಥಳೀಯ ಮಹಿಳೆಯರಿಗೆ ಅನುಕೂಲಕರವಾಗಿದ್ದ ಸಾರ್ವಜನಿಕ ಶೌಚಾಲಯವನ್ನು ಪುರಸಭೆಯವರು ಏಕಾಏಕಿ ಕೆಡವಿರುವುದರಿಂದ ಮಹಿಳೆಯರಿಗೆ ಸಮಸ್ಯೆ ಉಂಟಾಗಿದೆ. ಶೀಘ್ರ ಓಣಿಯ ಮಹಿಳೆಯರಿಗೆ ಪ್ರತ್ಯೇಕ, ವ್ಯವಸ್ಥಿತ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಧರಣಿನಿರತ ಮಹಿಳೆಯರು ಆಗ್ರಹಿಸಿದರು.

ಪುರಸಭೆ ಮುಖ್ಯಾಧಿಕಾರಿ ಕೆ.ಐ. ನಾಗನೂರ ಮತ್ತು ಆರೋಗ್ಯ ನಿರೀಕ್ಷಕ ಪ್ರಕಾಶ ಮಠದ ಪ್ರತಿಭಟನಾಕಾರರ ಬಳಿ ಆಗಮಿಸಿ, ಈಗಿದ್ದ ಶೌಚಾಯಲ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದುದರಿಂದ ತೆರವುಗೊಳಿಸಲಾಗಿದೆ. ಕೂಡಲೇ ಇದನ್ನು ವೈಜ್ಞಾನಿಕ ರೀತಿಯಲ್ಲಿನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಮಹಿಳೆಯರು ಪ್ರತಿಭಟನೆ ಹಿಂಪಡೆದರು.

ನಿರ್ಮಲಾ ಹನಸಿ, ಶಾಂತಮ್ಮ ಹಾದಿಮನಿ, ಈರವ್ವ ಉಳ್ಳಿಗೇರಿ, ಗಿರಿಜಾ ಯಕ್ಕುಂಡಿ, ನಾಗಮ್ಮ ಚಿಕ್ಕುಂಬಿ, ಮಲ್ಲಿಕಾರ್ಜುನ ಹವಾಲ್ದಾರ, ಸಿದ್ದಪ್ಪ ಹಾದಿಮನಿ, ಮಹೇಶ ಗೌಡರ, ಬಸವರಾಜ ಬೇವಿನಗಿಡದ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ