ಆ್ಯಪ್ನಗರ

ಸಮಾಜ ಸುಧಾರಣೆಯಲ್ಲಿ ಮಠಗಳ ಕಾರ್ಯ ಮಹತ್ತರ

ಚಿಕ್ಕೋಡಿ : ಉತ್ತರ ಕರ್ನಾಟಕದಲ್ಲಿ ಸಮಾಜ ಸುಧಾರಣೆಯಲ್ಲಿ ಸರಕಾರಗಳಿಗಿಂತ ಹೆಚ್ಚಾಗಿ ಮಠಮಾನ್ಯಗಳು ಮಹತ್ತರ ಕಾರ್ಯ ನಿರ್ವಹಿಸುತ್ತಿವೆ ಎಂದು ನಿಡಸೋಸಿ ಜಗದ್ಗುರು ...

Vijaya Karnataka 22 Mar 2019, 5:00 am
ಚಿಕ್ಕೋಡಿ : ಉತ್ತರ ಕರ್ನಾಟಕದಲ್ಲಿ ಸಮಾಜ ಸುಧಾರಣೆಯಲ್ಲಿ ಸರಕಾರಗಳಿಗಿಂತ ಹೆಚ್ಚಾಗಿ ಮಠಮಾನ್ಯಗಳು ಮಹತ್ತರ ಕಾರ್ಯ ನಿರ್ವಹಿಸುತ್ತಿವೆ ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ಹೇಳಿದರು.
Vijaya Karnataka Web BEL-21CKD5


ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ಮಹಾಂತೇಶ್ವರ ವಿರಕ್ತಮಠದಲ್ಲಿ ನಡೆದ ಲಿಂ. ಮಹಾಂತ ಶಿವಯೋಗಿಗಳ 40ನೇ ಪುಣ್ಯಸ್ಮರಣೋತ್ಸವ ಹಾಗೂ ಪೀಠಾಧಿಪತಿ ಶಿವಾನಂದ ಸ್ವಾಮಿಗಳ ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮುದ್ರದಲ್ಲಿ ಮೀನು, ಮೊಸಳೆಗಳು ಮಾತ್ರವಲ್ಲದೆ ಮುತ್ತು, ರತ್ನಗಳು ಸಹ ಇರುತ್ತವೆ. ಧರ್ಮ, ದಾನದ ಮೂಲಕ ಮಠಮಾನ್ಯಗಳು ಮುತ್ತು, ರತ್ನ ಹುಡುಕಿಕೊಡುವ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.

ಮದರಖಂಡಿಯ ಬಸವಜ್ಞಾನ ಗುರುಕುಲದ ಡಾ. ಈಶ್ವರ ಮಂಟೂರ ಮಾತನಾಡಿ, ಒಳ್ಳೆಯ ಕಾರ್ಯ, ಭಕ್ತಿ, ಶಿವಾನುಭವ, ನಿತ್ಯ ಲಿಂಗ ಪೂಜೆ, ನಾವೆಲ್ಲರೂ ಒಂದೇ ಎಂಬ ಭಾವನೆವುಳ್ಳವರೆಲ್ಲರೂ ಶರಣರಾಗುತ್ತಾರೆ. ಈ ಐದು ತತ್ವಗಳು ಶರಣ ಸಂಸ್ಕೃತಿಯ ಮೇಲೆ ನಿಂತಿವೆ ಎಂದರು.

ಶೇಗುಣಸಿಯ ಮಹಾಂತ ದೇವರು ಮಾತನಾಡಿ, ಹೊಟ್ಟೆ ಹಸಿವಿಗಿಂತ ಜ್ಞಾನದ ಹಸಿವು ಮುಖ್ಯವಾಗಿದ್ದು, ಪ್ರವಚನ ಚಿಂತನಗೋಷ್ಠಿಗಳ ಮೂಲಕ ಜ್ಞಾನದ ಹಸಿವನ್ನು ನೀಗಿಸಿಕೊಳ್ಳಬಹುದಾಗಿದೆ ಎಂದರು.

ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮಿಗಳು, ಕನಕಗಿರಿಯ ಡಾ. ಚನ್ನಮಲ್ಲ ಸ್ವಾಮಿಗಳು ಮಾತನಾಡಿದರು. ಕಮತೇನಟ್ಟಿಯ ಶಿವಪ್ರಭು ಸ್ವಾಮಿಗಳು, ಗುಬ್ಬಲಗುಡ್ಡ ಮಠದ ಮಲ್ಲಿಕಾರ್ಜುನ ಸ್ವಾಮಿಗಳು, ತುಬಚಿಯ ಸಾವಳಗೀಶ್ವರ ದೇವರು ಉಪಸ್ಥಿತರಿದ್ದರು. ಗದುಗಿನ ಶಂಕರಯ್ಯ ಗುರುವಿನಮಠ ಸಂಗೀತ ಸೇವೆ ಸಲ್ಲಿಸಿದರು. ಬೆಂಗಳೂರಿನ ಅಡವೇಶಕುಮಾರ ತಬಲಾ ಸಾಥ್‌ ನೀಡಿದರು.

ಜಿಪಂ ಸದಸ್ಯರಾದ ಪವನ ಕತ್ತಿ, ಪೃಥ್ವಿ ಕತ್ತಿ, ಆರ್‌.ಟಿ. ಶಿರಾಳಕರ, ಜಯಸಿಂಗ ಸನದಿ, ಅಪ್ಪಾಸಾಹೇಬ ಖೇಮಲಾಪುರೆ, ಮಲ್ಲಿಕಾರ್ಜುನ ಬೆಲ್ಲದ, ಸಿದ್ದಲಿಂಗಯ್ಯ ಕಡಹಟ್ಟಿ, ಸುಧೀರ ಕತ್ತಿ, ಡಾ.ಮೋಹನ ಮುನ್ನೋಳಿ, ಮಹಾನಿಂಗ ಶೆಟ್ಟಿ, ದೀಪಕ ಮಾಳಗಿ, ದೀಪಕ ಮುರಗಾಲಿ, ಜಡೆಪ್ಪ ಬಂಬಲವಾಡ, ಅ.ಮ.ಮುಂಡಾಸಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ