ಆ್ಯಪ್ನಗರ

ಜೈಲು ದುಷ್ಕೃತ್ಯ ತಡೆಯಲು ಶ್ರಮಿಸಿ

ಖಾನಾಪುರ: ''ನಾನಾ ಕಾರಣಗಳಿಂದ ಜೈಲು ...

Vijaya Karnataka 8 Jun 2019, 5:00 am
ಖಾನಾಪುರ : ''ನಾನಾ ಕಾರಣಗಳಿಂದ ಜೈಲು ಸೇರಿರುವ ಅಪರಾಧಿಗಳ ಮನಃಪರಿವರ್ತನೆಗೆ ಪ್ರಯತ್ನಿಸಬೇಕು. ಕೈದಿಗಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಬದಲಾಗುವಂತೆ ಮಾಡುವ ಜವಾಬ್ದಾರಿಯನ್ನು ಕಾರಾಗೃಹ ವೀಕ್ಷ ಕರು ಸಮರ್ಥವಾಗಿ ನಿಭಾಯಿಸಬೇಕು'' ಎಂದು ರಾಜ್ಯದ ಡಿಜಿ ಮತ್ತು ಕಾರಾಗೃಹ ಇಲಾಖೆಯ ಐಜಿಪಿ ಎನ್‌.ಎಸ್‌.ಮೇಘರಿಕ್‌ ಕರೆ ನೀಡಿದರು.
Vijaya Karnataka Web BEL-7KHANAPUR2


ಪಟ್ಟಣದಲ್ಲಿರುವ ಕರ್ನಾಟಕ ರಾಜ್ಯ ಪೊಲೀಸ್‌ ತರಬೇತಿ ಶಾಲೆಯಲ್ಲಿ ಶುಕ್ರವಾರ ಜರುಗಿದ ಕಾರಾಗೃಹ ವೀಕ್ಷ ಕರ ಎರಡನೇ ತಂಡದ ನಿರ್ಗಮನ ಪಥ ಸಂಚಲನದಲ್ಲಿ ಪ್ರಶಿಕ್ಷ ಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

''ಕಾರಾಗೃಹ ವೀಕ್ಷ ಕರು ಆತ್ಮಸಾಕ್ಷಿಯಿಂದ ಸೇವೆ ಸಲ್ಲಿಸಿ ಕಾರಾಗೃಹಗಳಲ್ಲಿ ನಡೆಯುವ ದುಷ್ಕೃತ್ಯಗಳನ್ನು ತಡೆಯಬೇಕು. ಕೈದಿಗಳ ಮಾನಸಿಕ ಖಿನ್ನತೆ ಹೋಗಲಾಡಿಸಲು ಯತ್ನಿಸಬೇಕು. ಜೈಲುಗಳಲ್ಲಿ ಅನಾರೋಗ್ಯ ಮತ್ತಿತರ ಕಾರಣಗಳಿಂದ ನರಳುವ ಕೈದಿಗಳ ಯೋಗಕ್ಷೇಮ ನೋಡಿಕೊಂಡು ಇಲಾಖೆಗೆ ಹೆಸರು ತರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು'' ಎಂದರು.

ಕಾರಾಗೃಹ ಇಲಾಖೆಯ ಐಜಿಪಿ ಎಚ್‌.ಎಸ್‌.ರೇವಣ್ಣ ಮಾತನಾಡಿ, ''ಈವರೆಗೆ ಕಾರಾಗೃಹದ ವಾರ್ಡರ್‌ಗಳಿಗೆ ತರಬೇತಿ ನೀಡುವ ಸಂಪ್ರದಾಯ ಇರಲಿಲ್ಲ. ಮೊದಲ ಬಾರಿಗೆ ಪೊಲೀಸ್‌ ತರಬೇತಿ ಶಾಲೆಯ ಮೂಲಕ 9 ತಿಂಗಳ ಬುನಾದಿ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯನ್ನು ಯಶಸ್ವಿಯಾಗಿ ನೀಡಿದ ಪೊಲೀಸ್‌ ತರಬೇತಿ ಶಾಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 1 ಲಕ್ಷ ನಗದು ಬಹುಮಾನವನ್ನು ಕಾರಾಗೃಹ ಇಲಾಖೆ ಘೋಷಿಸಿದೆ'' ಎಂದರು.

ಪರೇಡ್‌ ಕಮಾಂಡರ್‌ ಆನಂದಕುಮಾರ ನೇತೃತ್ವದಲ್ಲಿ 188 ಪ್ರಶಿಕ್ಷ ಣಾರ್ಥಿಗಳು ಪಥ ಸಂಚಲನ ನಡೆಸಿಕೊಟ್ಟರು. ತರಬೇತಿ ಅವಧಿಯಲ್ಲಿ ಉತ್ತಮ ಸಾಧನೆ ತೋರಿದ 10 ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ತರಬೇತಿ ಶಾಲೆಯ ಪ್ರಾಚಾರ್ಯ ಎಂ.ಕುಮಾರ ಮಾತನಾಡಿದರು. ಉತ್ತರ ವಲಯ ಐಜಿಪಿ ಎಚ್‌.ಜಿ.ರಾಘವೇಂದ್ರ ಸುಹಾಸ, ಬೆಳಗಾವಿ ಪೊಲೀಸ್‌ ಕಮಿಷನರ್‌ ಬಿ.ಎನ್‌.ಲೋಕೇಶಕುಮಾರ್‌, ಸಿಆರ್‌ಪಿಎಫ್‌ ಐಜಿಪಿ ಟಿ.ಶೇಖರ, ಕಾರಾಗೃಹ ಅಧೀಕ್ಷ ಕ ಟಿ.ಬಿ.ಶೇಷ, ಬೈಲಹೊಂಗಲ ಡಿಎಸ್‌ಪಿ ಕರುಣಾಕರ ರೆಡ್ಡಿ, ಸಿಪಿಐ ಮೋತಿಲಾಲ ಪವಾರ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಪ್ರಶಿಕ್ಷ ಣಾರ್ಥಿಗಳ ಪಾಲಕರು, ತರಬೇತಿ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.

ತರಬೇತಿ ಶಾಲೆಯ ಉಪ ಪ್ರಾಂಶುಪಾಲ ಶಿವಾನಂದ ಚನ್ನಬಸಪ್ಪನವರ ನಿರೂಪಿಸಿದರು. ಡಿಎಸ್‌ಪಿ ಸಿ.ಆರ್‌ ನೀಲಗಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ