ಆ್ಯಪ್ನಗರ

ಯಕ್ಷಗಾನ ಮನಸ್ಸನ್ನು ಮುದಗೊಳಿಸುವ ಶ್ರೀಮಂತ ಕಲೆ

ಯರಗಟ್ಟಿ: ಯಕ್ಷಗಾನ ಮನಸ್ಸನ್ನು ಮುದಗೊಳಿಸುವ ಶ್ರೀಮಂತ ಕಲೆಯಾಗಿದ್ದು ...

Vijaya Karnataka 2 Aug 2019, 5:00 am
ಯರಗಟ್ಟಿ: ಯಕ್ಷ ಗಾನ ಮನಸ್ಸನ್ನು ಮುದಗೊಳಿಸುವ ಶ್ರೀಮಂತ ಕಲೆಯಾಗಿದ್ದು, ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ಎಲ್ಲರನ್ನೂ ಒಂದುಗೂಡಿಸುವ ಕೆಲಸವನ್ನು ಮಾಡುತ್ತದೆ. ಇಂತಹ ಕಲೆಯನ್ನು ಕುಂದಾಪುರದ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷ ಗಾನ ಮಂಡಳಿಯು ಎಲ್ಲೆಡೆ ಪಸರಿಸುವ ಕಾರ್ಯದಲ್ಲಿ ಮುನ್ನಡೆಯುತ್ತಿದ್ದು, ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ರಾಜು ಶೆಟ್ಟಿ ಹೇಳಿದರು.
Vijaya Karnataka Web BLG-0108-2-52-1YGT1


ಇಲ್ಲಿನ ರತ್ನ ಸಂಗಮ ಸಭಾಭವನದಲ್ಲಿ ಕರಾವಳಿ ಯಕ್ಷ ಗಾನ ಕಲಾಭಿಮಾನಿಗಳ ಬಳಗದ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷ ಗಾನ ಮಂಡಳಿಯಿಂದ ನಡೆದ 'ಸುಧನ್ವಾರ್ಜುನ ಚಂದ್ರವಳಿ' ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಕ್ಷಗಾನವು ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ ಭೂಷಣ ಹೀಗೆ ಎಲ್ಲವನ್ನು ಸಮಷ್ಟಿಯಾಗಿ ಒಳಗೊಂಡ ಶಾಸ್ತ್ರೀಯ ಕಲೆಯಾಗಿದೆ ಎಂದರು.

ಉದ್ಯಮಿ ಜೆ.ರತ್ನಾಕರ ಶೆಟ್ಟಿ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಮತ್ತಷ್ಟು ಗಟ್ಟಿಯಾಗಿ ಬೆಳೆಸುವ ಕೆಲಸವಾಗಬೇಕು. ಅದಕ್ಕೆ ಎಲ್ಲರ ಪ್ರೋತ್ಸಾಹ ಅತ್ಯಗತ್ಯ ಎಂದು ಹೇಳಿದರು. ರಾಘವೇಂದ್ರ ವಯ್ಯ ಹಾಲಾಡಿ ಮತ್ತು ಸದಾಶಿವ ಅಮೀನ್‌ ಕೊಕರ್ಣೆ ಅವರ ಸಾರಥ್ಯದಲ್ಲಿ ಮುದ್ದಳೆ ಸುಬ್ರಹ್ಮಣ್ಯ ಮೂರುರು, ಚಂಡೆ ರಮೇಶ ಭಂಡಾರಿ ಕಡತೋಕ, ಕ್ಯಾದಗಿ ಮಹಾಬಲೇಶ್ವರ ಭಟ್‌, ಉಳ್ಳೂರು ಶಂಕರ, ದ್ವಿತೇಶ ಕಾಮತ್‌, ಮಾಧವ ನಾಗೂರು, ಹಕ್ಲಾಡಿ ರವೀಂದ್ರ ಶೆಟ್ಟಿ, ಪ್ರದೀಪ ಶೆಟ್ಟಿ , ಖೀಡವಿಶ್ವನಾಥ ಗಾಣಿಗ, ಹೆನ್ನಾಬೈರ್‌ ವಿಶ್ವನಾಥ ಪೂಜಾರಿ, ಚಂದ್ರಹಾಸ ಗೌಡ, ಉಳ್ಳೂರು ನಾರಾಯಣ, ಪೇಕ್ರಿ ರಾಘವೇಂದ್ರ, ಸೀತಾರಾರಿ ಶೆಟ್ಟಿ ಯಕ್ಷ ಗಾನ ನಡೆಸಿಕೊಟ್ಟರು.

ಸಂಗನಗೌಡ ದ್ಯಾಮನಗೌಡ್ರ, ಸುಧಾಕರ ಶೆಟ್ಟಿ, ರವಿ ಶೆಟ್ಟಿ, ಪ್ರಭಾಕರ ಶೆಟ್ಟಿ, ಮಹೇಶ ಶೆಟ್ಟಿ, ವಸಂತ ಶೆಟ್ಟಿ, ನಿತೀನ ಶೆಟ್ಟಿ, ಪ್ರದೀಪ ಶೆಟ್ಟಿ, ಪ್ರಶಾಂತ ಶೆಟ್ಟಿ, ಮಹಾಬಲ ಶೆಟ್ಟಿ, ಮೋಹನ ಶೆಟ್ಟಿ, ಭೀಮಶಿ ತಡಸಲೂರ, ವಿಠ್ಠಲ ಬಂಟನೂರ, ಎಸ್‌.ಎಸ್‌.ಮುಗಳಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ