ಆ್ಯಪ್ನಗರ

ಕೆಎಲ್‌ಇ ಅಂಗಸಂಸ್ಥೆಗಳಿಂದ ಯೋಗ ದಿನಾಚರಣೆ

ಇಂಗಳಿ: ಅಂಕಲಿಯ ಕೆಎಲ್‌ಇ ಅಂಗಸಂಸ್ಥೆಗಳಾದ ಶಾರದಾದೇವಿ ಕೋರೆ ಪ್ರೌಢಶಾಲೆ, ಪದವಿಪೂರ್ವ ಮಹಾವಿದ್ಯಾಲಯ, ಕೆಎಲ್‌ಇ ಪದವಿ ಮಹಾವಿದ್ಯಾಲಯ ಮತ್ತು ಎಸ್‌ಸಿ...

Vijaya Karnataka 22 Jun 2019, 5:00 am
ಇಂಗಳಿ: ಅಂಕಲಿಯ ಕೆಎಲ್‌ಇ ಅಂಗಸಂಸ್ಥೆಗಳಾದ ಶಾರದಾದೇವಿ ಕೋರೆ ಪ್ರೌಢಶಾಲೆ, ಪದವಿಪೂರ್ವ ಮಹಾವಿದ್ಯಾಲಯ, ಕೆಎಲ್‌ಇ ಪದವಿ ಮಹಾವಿದ್ಯಾಲಯ ಮತ್ತು ಎಸ್‌.ಸಿ. ಪಾಟೀಲ ಕನ್ನಡ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ 5ನೇ ವಿಶ್ವ ಯೋಗ ದಿನ ಆಚರಿಸಲಾಯಿತು.
Vijaya Karnataka Web BEL-21INGALI1


ಯೋಗಾ ದಿನದ ನಿಮಿತ್ತ ಬುಧವಾರದಿಂದ ಶುಕ್ರವಾರದವರೆಗೆ ನಡೆದ ವಿಶೇಷ ಶಿಬಿರದಲ್ಲಿ ಆರೋಗ್ಯ ವೃದ್ಧಿಸುವಲ್ಲಿ ಯೋಗದ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. 2,500 ವಿದ್ಯಾರ್ಥಿಗಳು ಮತ್ತು ಅಂಗಸಂಸ್ಥೆಯ ಸಮಸ್ತ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿ ಹಾಜರಿದ್ದರು.

ಯೋಗ ಕಾರ್ಯಕ್ರಮ ನಡೆಸಿಕೊಟ್ಟ ಸಂಜಯ ಕುಸ್ತಿಗಾರ, ಪ್ರಭಾವತಿ ಕುಸ್ತಿಗಾರ, ಭಾರತಿ ಮೋರೆ ಮತ್ತು ತೃಪ್ತಿ ಕುಸ್ತಿಗಾರವರನ್ನು ಶುಕ್ರವಾರದ ಕಾರ್ಯಕ್ರಮದಲ್ಲಿ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿ.ಎಸ್‌. ಅಂಬಿ, ಜೆ.ಎಸ್‌. ತಮಗೊಂಡ, ಎಂ.ಬಿ. ವಾಲಿ, ಪ್ರೊ. ಎಸ್‌.ಎಸ್‌. ಕೋಠಿವಾಲೆ ಸೇರಿದಂತೆ ಸಂಸ್ಥೆಯ ಸಮಸ್ತ ಸಿಬ್ಬಂಧಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಸಿ.ಬಿ. ಚೌಗುಲೆ ಸ್ವಾಗತಿಸಿದರು. ಪ್ರೊ. ಬಿ.ಜಿ. ಜಾವೂರ ನಿರೂಪಿಸಿದರು. ಪ್ರೊ. ವೈ.ಬಿ. ಮಾಚಕನೂರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ