ಆ್ಯಪ್ನಗರ

ಕ್ವಾರಂಟೈನ್‌ನಲ್ಲಿದ್ದ ಯುವಕನಿಗೆ ಸೋಂಕು ದೃಢ

ಕೌಜಲಗಿ: ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ...

Vijaya Karnataka 4 Jun 2020, 5:00 am
ಕೌಜಲಗಿ: ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್‌ ಕೇಂದ್ರದಲ್ಲಿಒಂದು ದಿನ ಕ್ವಾರಂಟೈನ್‌ ಮಾಡಲಾಗಿದ್ದ ಶಿಲ್ತಿಭಾವಿ ಗ್ರಾಮದ 23 ವರ್ಷದ ಯುವಕನಿಗೆ ಕೋವಿಡ್‌-19 ದೃಢಪಟ್ಟ ಹಿನ್ನೆಲೆಯಲ್ಲಿಕೌಜಲಗಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
Vijaya Karnataka Web youth infected who was in quarantine
ಕ್ವಾರಂಟೈನ್‌ನಲ್ಲಿದ್ದ ಯುವಕನಿಗೆ ಸೋಂಕು ದೃಢ


ಈ ಯುವಕನನ್ನು ಮೇ 15ರಂದು ಗ್ರಾಮದಲ್ಲಿಕ್ವಾರಂಟೈನ್‌ ಮಾಡಲಾಗಿತ್ತು. ನಂತರ ಮೇ 16ರಂದು ಐವರು ಯುವಕರೊಂದಿಗೆ ಗೋಕಾಕ ದೇವರಾಜ ಅರಸ್‌ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಯಿತು. ಒಂದು ದಿನ ಕೌಜಲಗಿಯಲ್ಲಿದ್ದಾಗ ಈ ಶಿಲ್ತಿಭಾವಿ ಯುವಕನಿಗೆ ಕೊರೊನಾ ಸೋಂಕು ತಗಲಿರುವ ಸಂಶಯಗಳು ಗ್ರಾಮಸ್ಥರನ್ನು ಕಾಡುತ್ತಿವೆ.

ಸುಮಾರು 20 ಗಂಟೆಗಳ ಕಾಲ ಕೌಜಲಗಿ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ಅವಧಿಯಲ್ಲಿಬಳಸಲ್ಪಟ್ಟ ಕೊಠಡಿ, ಮೂತ್ರಾಲಯ, ಶೌಚಾಲಯಗಳನ್ನು ಇತರರು ಬಳಸಿದ್ದಾರೆನ್ನಲಾಗಿದೆ. ಇದರ ಜೊತೆ ಶಾಲೆಯ ಸಿಬ್ಬಂದಿಗಳು ಶಾಲೆಯಲ್ಲಿದ್ದು, ಅವರು ಊರಿನ ಜನರೊಂದಿಗೆ ಬೆರೆಯುತ್ತಿದ್ದರೆಂದು ಹೇಳಲಾಗುತ್ತಿದೆ. ಹೀಗಾಗಿ ಆತಂಕ ಇನ್ನೂ ಹೆಚ್ಚಾಗಿದೆ.

ಪರೀಕ್ಷಾ ಕೇಂದ್ರ ಸ್ಥಳಾಂತರಕ್ಕೆ ಆಗ್ರಹ:

ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವಾಗಿದೆ. ಈಗ ಕ್ವಾರಂಟೈನ್‌ ಕೇಂದ್ರವಾಗಿ ಹಲವಾರು ಸಂಶಯಗಳಿಗೆ ಕಾರಣವಾಗಿರುವುದರಿಂದ ಪಾಲಕರು ಭಯಭೀತರಾಗಿದ್ದಾರೆ. ಪರೀಕ್ಷಾ ಕೇಂದ್ರವನ್ನು ಸರಕಾರಿ ಪ್ರೌಢ ಶಾಲೆಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಸಂಪೂರ್ಣ ಔಷಧ ಸಿಂಪಡಣೆ ಆಗಿಲ್ಲ:

ಕ್ವಾರಂಟೈನ್‌ ಕೇಂದ್ರ ರದ್ದಾದ ಮೇಲೆ ವಸತಿ ಶಾಲೆಗೆ ಸಂಪೂರ್ಣವಾಗಿ ಔಷಧ ಸಿಂಪಡಣೆ ಮಾಡಿಲ್ಲವೆಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ