ಆ್ಯಪ್ನಗರ

ಕೈಗೆ ಎಚ್ಚರಿಕೆಯ ಗಂಟೆ

ರಾಜ್ಯದಲ್ಲಿ ಆಡಳಿತ ಪಕ್ಷ, ಕ್ಷೇತ್ರದಲ್ಲಿ ಸ್ವ ಪಕ್ಷದ ಶಾಸಕರಿದ್ದರೂ ಕಾಂಗ್ರೆಸ್ ತಾ.ಪಂ., ಜಿ.ಪಂ.ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಕಾಣದೇ ಮುಗ್ಗರಿಸಿದ್ದು, ಕಮಲ ಅಚ್ಚರಿ ರೀತಿಯಲ್ಲಿ ಅರಳಿದೆ.

ವಿಕ ಸುದ್ದಿಲೋಕ 24 Feb 2016, 4:58 am
ಸಿರುಗುಪ್ಪ; ರಾಜ್ಯದಲ್ಲಿ ಆಡಳಿತ ಪಕ್ಷ, ಕ್ಷೇತ್ರದಲ್ಲಿ ಸ್ವ ಪಕ್ಷದ ಶಾಸಕರಿದ್ದರೂ ಕಾಂಗ್ರೆಸ್ ತಾ.ಪಂ., ಜಿ.ಪಂ.ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಕಾಣದೇ ಮುಗ್ಗರಿಸಿದ್ದು, ಕಮಲ ಅಚ್ಚರಿ ರೀತಿಯಲ್ಲಿ ಅರಳಿದೆ.
Vijaya Karnataka Web
ಕೈಗೆ ಎಚ್ಚರಿಕೆಯ ಗಂಟೆ


ಹಿಂದಿನ ಆರು ಚುನಾವಣೆಯಲ್ಲಿ ಹಚ್ಚೊಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಚಿಗುರಿದ್ದಿಲ್ಲ. ಆದರೆ, ಈ ಬಾರಿ ಬಿಜೆಪಿ ಅಭ್ಯರ್ಥಿ ಬಿ.ಜಿ.ರವಿಗೆ ಗೆಲುವಾಗಿದೆ. 10 ವರ್ಷದಿಂದ ಬಿಜೆಪಿ ವಶದಲ್ಲಿದ್ದ ರಾರಾವಿ ಕ್ಷೇತ್ರ ಈ ಬಾರಿ ಕೈಗೆ ಒಲಿದಿದೆ.

ಹಳೇಕೋಟೆ ಕ್ಷೇತ್ರದಲ್ಲಿಯೂ ಸಹ ಇಲ್ಲಿಯವರಗೆ ಕೇವಲ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಈ ಬಾರಿ ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶ ಪಡೆದಿರುವ ಕಾಂತಪ್ಪ ಕುಟುಂಬ ಎಚ್.ಸಿ.ರಾಧ ಧರಪ್ಪನಾಯಕ ಗೆಲುವು ಸಾಧಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದೆ. ಸಿರಿಗೇರಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಮಾಜಿ ಶಾಸಕ ರೇವಣ್ಣಸಿದ್ದಯ್ಯ ಅವರ ಸೊಸೆ ಸಿ.ಎಂ.ಶಶಿಕಲಾ ಅವರನ್ನು 32 ಮತಗಳ ಅಂತರದಲ್ಲಿ ಮಣಿಸಿ, ರತ್ಮಮ್ಮ ಗೆದ್ದಿದ್ದಾರೆ. ತಾ.ಪಂ.ನಲ್ಲಿ ಸ್ಪಷ್ಟ ಬಹುಮತ ಒಲಿದಿರುವುದರಿಂದ ಬಿಜೆಪಿ ಕ್ಷೇತ್ರದಲ್ಲಿ ಮತ್ತೆ ತನ್ನ ಅಧಿಪತ್ಯ ಮೆರೆದಿದ್ದು, ಕಾಂಗ್ರೆಸ್‌ಗೆ ಮತದಾರ ಎಚ್ಚರಿಕೆ ನೀಡಿದಂತಿದೆ.’

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ