ಆ್ಯಪ್ನಗರ

ಕಂಪ್ಲಿ: ಪಲ್ಸ್ ಪೋಲಿಯೊ

ಪಟ್ಟಣ ಸೇರಿದಂತೆ ಸಮೀಪದ ಗ್ರಾಮಗಳಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಸಂಘ, ಸಂಸ್ಥೆಗಳ ನೆರವಿನಿಂದ ತೆರೆದ ಕೇಂದ್ರಗಳಲ್ಲಿ ಎರಡನೇ ಹಂತದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ನಿಮಿತ್ತ ಭಾನುವಾರ ಮಕ್ಕಳಿಗೆ ಲಸಿಕೆ ಹಾಕಲಾಯಿತು.

ವಿಕ ಸುದ್ದಿಲೋಕ 26 Feb 2016, 6:41 am
ಕಂಪ್ಲಿ; ಪಟ್ಟಣ ಸೇರಿದಂತೆ ಸಮೀಪದ ಗ್ರಾಮಗಳಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಸಂಘ, ಸಂಸ್ಥೆಗಳ ನೆರವಿನಿಂದ ತೆರೆದ ಕೇಂದ್ರಗಳಲ್ಲಿ ಎರಡನೇ ಹಂತದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ನಿಮಿತ್ತ ಭಾನುವಾರ ಮಕ್ಕಳಿಗೆ ಲಸಿಕೆ ಹಾಕಲಾಯಿತು.
Vijaya Karnataka Web
ಕಂಪ್ಲಿ: ಪಲ್ಸ್ ಪೋಲಿಯೊ


ಇಲ್ಲಿನ ನಡುಲ ಮಸೀದಿ ಬಳಿ ಜನ ಸೇವಾ ಸಂಘದಿಂದ ತೆರೆದ ಪಲ್ಸ್ ಪೋಲಿಯೊ ಲಸಿಕಾ ಕೇಂದ್ರದಲ್ಲಿ, ಜೈನ್ ಸಮಾಜದ ಸಾದ್ವಿ ದರ್ಶನ ಪ್ರಭಾಜಿ ಮಕ್ಕಳಿಗೆ ಲಸಿಕೆ ಹನಿ ಹಾಕಿ ಚಾಲನೆ ನೀಡಿದರು. ಜನ ಸೇವಾ ಸಂಘದ ಮೋಹನ ರಾಂಕ, ಆತ್ಮರಾಮ್ ಖಂಡೇಲವಾಲ್ ಇತರರಿದ್ದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ವೈದ್ಯಾಧಿಕಾರಿ ಡಾ.ಚಂದ್ರಮೋಹನ್ ಮಕ್ಕಳಿಗೆ ಲಸಿಕೆ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಎರಡನೇ ಹಂತದಲ್ಲಿ ಪಟ್ಟಣದಲ್ಲಿ 5796 ಹಾಗೂ ಗ್ರಾಮೀಣ ಭಾಗದ 3297 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ. ಫೆ.22ರಿಂದ ಮೂರು ದಿನಗಳವರೆಗೆ ಮನೆ, ಮನೆಗೆ ತೆರಳಿ ಪೋಲಿಯೊ ಹನಿ ಹಾಕಲಾಗುವುದು ಎಂದರು. ಆಯುಷ್ ವೈದ್ಯ ಡಾ.ಮಲ್ಲೇಶಪ್ಪ, ಡಾ.ಯೋಗೀಶ್, ದಂತ ವೈದ್ಯಾಧಿಕಾರಿ ಡಾ.ಶ್ರೀನಿವಾಸರಾವ್, ಕಿರಿಯ ಆರೋಗ್ಯ ಸಹಾಯಕರಾದ ಚನ್ನಬಸವರಾಜ, ಪ್ರಶಾಂತ್ ಕುಮಾರ್, ರಾಜಶೇಖರ್, ಸಣ್ಣ ರುದ್ರಪ್ಪ, ವಿದ್ಯಾವತಿ, ಸುಲೋಚನಾ, ದಾಸರ ಲಕ್ಷ್ಮಿ, ಸುನೀತಾ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ