ಆ್ಯಪ್ನಗರ

ಬೆಂಕಿ ಆಕಸ್ಮಿಕ: ವೃದ್ಧೆ ಪಾರು

ಇಲ್ಲಿನ ಬಸವನಪೇಟೆಯ ಮನೆಗೆ ಶುಕ್ರವಾರ ಬೆಳಗ್ಗೆ ಬೆಂಕಿ ಆಕಸ್ಮಿಕವಾಗಿ ಹೊತ್ತಿಕೊಂಡಿದ್ದು, ಪತ್ರಿಕೆ ಹಂಚುವ ಕೆಲವು ಹುಡುಗರ ಸಮಯಪ್ರಜ್ಞೆಯಿಂದ ವೃದ್ಧೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಕ ಸುದ್ದಿಲೋಕ 26 Mar 2016, 8:18 am
ಎಮ್ಮಿಗನೂರು (ಬಳ್ಳಾರಿ); ಇಲ್ಲಿನ ಬಸವನಪೇಟೆಯ ಮನೆಗೆ ಶುಕ್ರವಾರ ಬೆಳಗ್ಗೆ ಬೆಂಕಿ ಆಕಸ್ಮಿಕವಾಗಿ ಹೊತ್ತಿಕೊಂಡಿದ್ದು, ಪತ್ರಿಕೆ ಹಂಚುವ ಕೆಲವು ಹುಡುಗರ ಸಮಯಪ್ರಜ್ಞೆಯಿಂದ ವೃದ್ಧೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Vijaya Karnataka Web
ಬೆಂಕಿ ಆಕಸ್ಮಿಕ: ವೃದ್ಧೆ ಪಾರು


ಬಸಮ್ಮ(70) ಅವರು, ಮನೆಯಲ್ಲಿ ಏಕಾಂಗಿಯಾಗಿ ನೀರು ಕಾಯಿಸುತ್ತಿದ್ದರು. ಒಲೆಯಲ್ಲಿದ್ದ ಬೆಂಕಿ ಕಿಡಿ, ಸಮೀಪದ ಕಟ್ಟಿಗೆ ಹಾಗೂ ಕುರುಳಿಗೆ ಹೊತ್ತಿಕೊಂಡಿದೆ. ದಟ್ಟವಾದ ಹೊಗೆ ಬರುತ್ತಿರುವುದನ್ನು ಕಂಡ ಪತ್ರಿಕೆ ವಿತರಕರಾದ ಬಸವರಾಜ, ಶೀನು ಹಾಗೂ ಸುರೇಶಕುಮಾರ ಅವರು ಮನೆಯ ಒಳನುಗ್ಗಿ, ಅಜ್ಜಿಯನ್ನು ಹೊರಗೆ ಎತ್ತಿಕೊಂಡು ಬಂದಿದ್ದಾರೆ. ನಂತರ ಸುತ್ತಲಿನ ಜನರು, ಬೆಂಕಿಯನ್ನು ಆರಿಸಿದರು. ಅಜ್ಜಿಯ ಜೀವ ಉಳಿಸಿದ ಈ ಹುಡುಗರ ಮಾನವೀಯತೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ