ಆ್ಯಪ್ನಗರ

‘ಎ.ಕೆ.ರಾಮಾನುಜನ್, ಇಂಡೋ-ಅಮೆರಿಕ ನಡುವಿನ ಸೇತುವೆ’

ಎ.ಕೆ.ರಾಮಾನುಜನ್ ಅವರು, ಇಂಡೋ-ಅಮೆರಿಕ ನಡುವಿನ ಸೇತುವೆಯಾಗಿರುವ ಜತೆಗೆ ಉಭಯ ದೇಶ ಸಂಸ್ಕೃತಿಗಳ ಕೂಡುಗೆರೆಯಾಗಿದ್ದರು ಎಂದು ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಹೇಳಿದರು.

ವಿಕ ಸುದ್ದಿಲೋಕ 30 Mar 2016, 7:59 am
ಹೊಸಪೇಟೆ; ಎ.ಕೆ.ರಾಮಾನುಜನ್ ಅವರು, ಇಂಡೋ-ಅಮೆರಿಕ ನಡುವಿನ ಸೇತುವೆಯಾಗಿರುವ ಜತೆಗೆ ಉಭಯ ದೇಶ ಸಂಸ್ಕೃತಿಗಳ ಕೂಡುಗೆರೆಯಾಗಿದ್ದರು ಎಂದು ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಹೇಳಿದರು.
Vijaya Karnataka Web
‘ಎ.ಕೆ.ರಾಮಾನುಜನ್, ಇಂಡೋ-ಅಮೆರಿಕ ನಡುವಿನ ಸೇತುವೆ’


ಹಂಪಿ ಕನ್ನಡ ವಿವಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಪ್ರೊ.ಎ.ಕೆ.ರಾಮಾನುಜನ್ ಅವರ ಸಮಗ್ರ ಸಾಹಿತ್ಯ’ ಕುರಿತ 2ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘‘ಎ.ಕೆ.ರಾಮಾನುಜನ್ ಅವರು ಉಭಯ ಭಾಷಾ ಕವಿ, ಕಥನಕಾರ ಹಾಗೂ ಅನುವಾದಕರಾಗಿದ್ದರು. ಅವರ ಬರವಣಿಗೆ ಹಾಗೂ ಬದುಕಿನಲ್ಲಿ ಹಾಸ್ಯ ಎದ್ದುಕಾಣುತ್ತಿತ್ತು. ಅವರ ಮೂರು ಕವನ ಸಂಕಲನಗಳು ಕನ್ನಡ, ತೆಲುಗು, ಸಂಸ್ಕೃತ ಸೇರಿ ಒಟ್ಟು 7 ಭಾಷೆಗಳಿಗೆ ಅನುವಾದಗೊಂಡಿವೆ. ಸಾಹಿತ್ಯ ರಮ್ಯತೆಯಿಂದ ಕೂಡಿದ್ದರೂ ಭಿನ್ನವಾಗಿರಬೇಕು ಎಂಬ ವಾದ ಅವರದಾಗಿತ್ತು. ಅವರು ಬದುಕಿದ್ದಾಗ, ಕನ್ನಡ ಸಾಹಿತ್ಯ ಅವರನ್ನು ಅಷ್ಟಾಗಿ ಪರಿಗಣಿಸಲಿಲ್ಲ’’ ಎಂದು ವಿಷಾದಿಸಿದರು.

ಕುಲಪತಿ ಪ್ರೊ.ಮಲ್ಲಿಕಾ ಎಸ್.ಘಂಟಿ ಅಧ್ಯಕ್ಷತೆ ವಹಿಸಿದ್ದರು. ಡಾ.ವೆಂಕಟೇಶ ಇಂದ್ವಾಡಿ, ಕುಲಸಚಿವ ಡಾ.ಡಿ.ಪಾಂಡುರಂಗಬಾಬು, ಡಾ.ಮಲ್ಲಿಕಾರ್ಜುನ ವಣೇನೂರು, ಸಂಶೋಧನಾ ವಿದ್ಯಾರ್ಥಿ ಗಾದೆಪ್ಪ ಇದ್ದರು. ‘ಎ.ಕೆ.ರಾಮಾನುಜನ್ ಅವರ ಫೋಕ್ ಟೇಲ್ಸ್ ಫ್ರಂ ಇಂಡಿಯಾ’ ಕುರಿತು ಪ್ರೊ.ಪುರುಷೋತ್ತಮ ಬಿಳಿಮಲೆ, ‘ಕನ್ನಡ ಕಾವ್ಯ’ ಕುರಿತು ಪ್ರೊ.ಸಿ.ನಾಗಣ್ಣ ಹಾಗೂ ‘ಇಂಗ್ಲಿಷ್ ಕಾವ್ಯ’ ಕುರಿತು ಪ್ರೊ.ವಿ.ಎಸ್.ಶ್ರೀಧರ್ ಅವರು ವಿಷಯ ಮಂಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ