ಆ್ಯಪ್ನಗರ

‘ಏಡ್ಸ್‌ ಜಾಗೃತಿ ಜಾಥಾದಲ್ಲಿ ಎನ್‌ಜಿಒಗಳು ಪಾಲ್ಗೊಳ್ಳಲಿ’

ರಾಜ್ಯಮಟ್ಟದ ವಿಶ್ವ ಏಡ್ಸ್‌ ದಿನಾಚರಣೆ ನಿಮಿತ್ತ ಡಿ.1ರಂದು ನಗರದಲ್ಲಿ ನಡೆಯುವ ಬೃಹತ್‌ ಜಾಥಾದಲ್ಲಿ ಏಡ್ಸ್‌ ಸೋಂಕಿತರ ಪರವಾಗಿ ದುಡಿಯುತ್ತಿರುವ ಎಲ್ಲ ಎನ್‌ಜಿಒಗಳು ಪಾಲ್ಗೊಳ್ಳಬೇಕು. ಏಡ್ಸ್‌ ಜಾಗೃತಿಗೆ ಸಂಬಂಧಿಸಿದ ಪರಿಣಾಮಕಾರಿ ಸಂದೇಶ ಸಾರುವಂತೆ ನೋಡಿಕೊಳ್ಳಬೇಕು ಎಂದು ಜಿ.ಪಂ. ಸಿಇಒ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ವಿಕ ಸುದ್ದಿಲೋಕ 29 Nov 2016, 9:00 am

ಬಳ್ಳಾರಿ: ರಾಜ್ಯಮಟ್ಟದ ವಿಶ್ವ ಏಡ್ಸ್‌ ದಿನಾಚರಣೆ ನಿಮಿತ್ತ ಡಿ.1ರಂದು ನಗರದಲ್ಲಿ ನಡೆಯುವ ಬೃಹತ್‌ ಜಾಥಾದಲ್ಲಿ ಏಡ್ಸ್‌ ಸೋಂಕಿತರ ಪರವಾಗಿ ದುಡಿಯುತ್ತಿರುವ ಎಲ್ಲ ಎನ್‌ಜಿಒಗಳು ಪಾಲ್ಗೊಳ್ಳಬೇಕು. ಏಡ್ಸ್‌ ಜಾಗೃತಿಗೆ ಸಂಬಂಧಿಸಿದ ಪರಿಣಾಮಕಾರಿ ಸಂದೇಶ ಸಾರುವಂತೆ ನೋಡಿಕೊಳ್ಳಬೇಕು ಎಂದು ಜಿ.ಪಂ. ಸಿಇಒ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿಯ ನಜೀರ್‌ಸಾಬ್‌ ಸಭಾಂಗಣದಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಏಡ್ಸ್‌ ದಿನಾಚರಣೆಗೆ ಸಂಬಂಧಿಸಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಏಡ್ಸ್‌ ಜಾಗೃತಿ ಜಾಥಾದಲ್ಲಿ ಎಲ್ಲ ಸಂಘ-ಸಂಸ್ಥೆಗಳ ಮತ್ತು ನಾನಾ ಶಾಲಾ-ಕಾಲೇಜುಗಳ ಭಾಗವಹಿಸಬೇಕು. ಏಡ್ಸ್‌ ಸೋಂಕಿತರಿಗೆ ಸರಕಾರ ಕಲ್ಪಿಸಲಾದ ಔಷಧ ಮತ್ತು ಇನ್ನಿತರ ಸೌಲಭ್ಯಗಳು, ಏಡ್ಸ್‌ ಜಾಗೃತಿಗೆ ಕೈಗೊಂಡ ಕ್ರಮಗಳು, ಏಡ್ಸ್‌ ಬರದಂತೆ ಎಚ್ಚರವಹಿಸುವ ಬಗೆ, ಸುರಕ್ಷಿತ ಲೈಂಗಿಕತೆಯ ವಿಧಾನಗಳು ಜಾಥಾದಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಏಡ್ಸ್‌ ಜಾಗೃತಿಗೆ ಸಂಬಂಧಿಸಿದಂತೆ ಆಟೊ, ಬಸ್‌ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಪ್ರಚಾರ ಮೂಡಿಸುವುದರ ಜತೆಗೆ ಲೈಂಗಿಕ ಸುರಕ್ಷ ತೆಗೆ ಸಂಬಂಧಿಸಿದಂತೆ ಎಲ್ಲ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಬೇಕು. ಜಾಗೃತಿ ನಡೆಸಿದ ಪ್ರಕಟಣೆಗಳನ್ನು ನಿರಂತರ ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು. ಈ ಮೂಲಕವೂ ಜಾಗೃತಿಯಾಗಬೇಕು ಎಂದರು.

ಡಿ.1ರಂದು ಬೆಳಗ್ಗೆ 10.30ಕ್ಕೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಕೆ.ಆರ್‌.ರಮೇಶಕುಮಾರ ಅವರು ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್‌.ಲಾಡ್‌, ವೈದ್ಯಕೀಯ ಶಿಕ್ಷ ಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಸೇರಿದಂತೆ ಶಾಸಕರು, ನಾನಾ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಶಾಸಕ ಅನಿಲ್‌ ಲಾಡ್‌ ಅವರು ಅಧ್ಯಕ್ಷ ತೆ ವಹಿಸಲಿದ್ದಾರೆ ಎಂದು ವಿವರಿಸಿದರು.

ಡಿ.1ರಂದು ಬೆಳಗ್ಗೆ 9ಕ್ಕೆ ನಗರದ ಜಿಲ್ಲಾಸ್ಪತ್ರೆ ಆವರಣದಿಂದ ಆರಂಭವಾಗುವ ಜಾಗೃತಿ ಜಾಥಾವು ಸಂಗಂ ವೃತ್ತ, ರಾಯಲ್‌ ಸರ್ಕಲ್‌, ಡಿಸಿ ಕಚೇರಿ, ಮೋತಿ ಸರ್ಕಲ್‌ ಮುಖಾಂತರ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ತಲುಪಲಿದೆ. ಜಾಥಾದಲ್ಲಿ ಪ್ರೌಢ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳು, ಕೂಲಿಕಾರ್ಮಿಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ನರ್ಸಿಂಗ್‌ ವಿದ್ಯಾರ್ಥಿಗಳು, ಏಡ್ಸ್‌ ಸೋಂಕಿತರ ಪರವಾಗಿ ಹೋರಾಟ ನಡೆಸುತ್ತಿರುವ ನಾನಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ 1000ಕ್ಕೂ ಹೆಚ್ಚು ಜನರು ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಮೇಶಬಾಬು ಮತ್ತು ಜಿಲ್ಲಾ ಕ್ಷ ಯರೋಗ ನಿಯಂತ್ರಣಾಧಿಕಾರಿ ಡಾ.ನಿಜಾಮುದ್ದೀನ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್‌.ಬಸರೆಡ್ಡಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ