ಆ್ಯಪ್ನಗರ

ಹಂಪಿಯಲ್ಲಿ ಪಾರಂಪರಿಕ ಮ್ಯಾರಥಾನ್

ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಗೋ ಹೆರಿಟೇಜ್ ರನ್ ಮ್ಯಾರಥಾನ್’ದಲ್ಲಿ ದೇಶದ 700 ಓಟಗಾರರು ಭಾಗವಹಿಸಿದ್ದರು.

ವಿಕ ಸುದ್ದಿಲೋಕ 30 Jan 2017, 8:09 am
ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಗೋ ಹೆರಿಟೇಜ್ ರನ್ ಮ್ಯಾರಥಾನ್’ದಲ್ಲಿ ದೇಶದ 700 ಓಟಗಾರರು ಭಾಗವಹಿಸಿದ್ದರು.
Vijaya Karnataka Web
ಹಂಪಿಯಲ್ಲಿ ಪಾರಂಪರಿಕ ಮ್ಯಾರಥಾನ್


ಬೆಂಗಳೂರು ಮೂಲದ ಗೋ ಯುನೆಸ್ಕೊ ಹಾಗೂ ಸ್ಥಳೀಯ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಈ ಮ್ಯಾರಥಾನ್ ಆಯೋಜಿಸಲಾಗಿತ್ತು. ಹಂಪಿ ಡಿವೈಎಸ್ಪಿ ಹೊನವಾಡ್ಕರ್ ಚಾಲನೆ ನೀಡಿದರು. ಹೊಸದಿಲ್ಲಿ, ಮುಂಬಯಿ, ಚೆನ್ನೈ, ಹೈದರಾಬಾಬಾದ್, ಬೆಂಗಳೂರು, ಬಳ್ಳಾರಿ, ಹುಬ್ಬಳ್ಳಿ ಸೇರಿ ದೇಶದ ನಾನಾ ಭಾಗಗಳ ಓಟಗಾರರು, ತಮ್ಮ ಓಟದ ಮೂಲಕ ಸ್ಮಾರಕಗಳ ಪರಂಪರೆ ಸ್ಮರಣೀಯಗೊಳಿಸಿದರು.

5 ಕಿ.ಮೀ., ಹಾಗೂ 12 ಕಿ.ಮೀ. ಮತ್ತು 21ಕಿ.ಮೀ. ಉದ್ದದ ಮ್ಯಾರಥಾನ್ ಆಯೋಜಿಸಲಾಗಿತ್ತು. ಎದುರು ಬಸವಣ್ಣ ಮಂಟಪದಿಂದ ಅಚ್ಚುತ ಬಜಾರ್, ವಿಜಯ ವಿಠ್ಠಲ ದೇವಸ್ಥಾನದಿಂದ ಪುನಃ ವಾಪಸ್ ಬರುವುದು 12 ಕಿ.ಮೀ., ಎದುರು ಬಸವಣ್ಣದಿಂದ ಕಮಲಾಪುರ, ಶ್ರೀರಾಮ ನಗರ, ವಿಜಯ ವಿಠ್ಠಲ ದೇವಸ್ಥಾನ, ಕೋದಂಡರಾಮ ದೇವಸ್ಥಾನ ಮಾರ್ಗವಾಗಿ ತಲುಪುವುದು 21ಕಿ.ಮೀ. ಓಟದ ಸ್ಪರ್ಧೆಯನ್ನು ಈ ಮ್ಯಾರಥಾನ್ ಒಳಗೊಂಡಿತ್ತು. ಈ ಓಟದಲ್ಲಿ ನಾಲ್ಕು ವರ್ಷದ ಆಶ್ವಿನ್‌ನಿಂದ ಹಿಡಿದು 74 ವರ್ಷದ ವಾಸುದೇವ್ ರಾವ್ ಭಾಗವಹಿಸಿದ್ದು ವಿಶೇಷ ಎನ್ನುತ್ತಾರೆ ಕಾರ್ಯಕ್ರಮದ ಆಯೋಜಕ ಅಜಯ್ ರೆಡ್ಡಿ. ಈ ಸಂದರ್ಭದಲ್ಲಿ ಪಾರಂಪರಿಕ ಓಟದ ಸದಸ್ಯರಾದ ಎಕ್ಸ್‌ಫ್ಲೋರ್ ಹಂಪಿಯ ಬಸವರಾಜ್, ತಾನಿಯಾ, ಆಶ್ವಿನ್, ಆದಿ, ಹರಿಪ್ರಸಾದ್ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ