ಆ್ಯಪ್ನಗರ

ಡಾಂಬರ್ ಕಾರ್ಖಾನೆ ರದ್ದುಪಡಿಸಲು ಆಗ್ರಹ

ಇಲ್ಲಿಗೆ ಸಮೀಪದ ಕುಡಿತಿನಿ ವಲಯದಲ್ಲಿ ಸ್ಥಾಪನೆಯಾಗಿರುವ ಡಾಂಬರ್ ಕಾರ್ಖಾನೆ ರದ್ದುಪಡಿಸಲು ಆಗ್ರಹಿಸಿ ಪಟ್ಟಣದಲ್ಲಿ ಬುಧವಾರ ಸಮಾಜ ವಿಜ್ಞಾನ ವೇದಿಕೆ ಘಟಕ ಹಾಗೂ ಸಿಪಿಐ(ಎಂ)ನಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ವಿಕ ಸುದ್ದಿಲೋಕ 2 Feb 2017, 6:13 am
ಕುರುಗೋಡು: ಇಲ್ಲಿಗೆ ಸಮೀಪದ ಕುಡಿತಿನಿ ವಲಯದಲ್ಲಿ ಸ್ಥಾಪನೆಯಾಗಿರುವ ಡಾಂಬರ್ ಕಾರ್ಖಾನೆ ರದ್ದುಪಡಿಸಲು ಆಗ್ರಹಿಸಿ ಪಟ್ಟಣದಲ್ಲಿ ಬುಧವಾರ ಸಮಾಜ ವಿಜ್ಞಾನ ವೇದಿಕೆ ಘಟಕ ಹಾಗೂ ಸಿಪಿಐ(ಎಂ)ನಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
Vijaya Karnataka Web
ಡಾಂಬರ್ ಕಾರ್ಖಾನೆ ರದ್ದುಪಡಿಸಲು ಆಗ್ರಹ


ಜಿಲ್ಲಾ ಘಟಕದ ಮುಖಂಡ ವಿ.ಎಸ್.ಶಿವಶಂಕರ್ ಮಾತನಾಡಿ, ಈಗಾಗಲೇ ಕುಡಿತನಿ ಭಾಗದಲ್ಲಿ ಪರಿಸರ ಸಂಪೂರ್ಣ ನಾಶವಾಗಿದ್ದು, ಡಾಂಬರ್ ಕಾರ್ಖಾನೆಯಿಂದ ವಿಷಾನಿಲ ಅನಿಲ ಹೊರಬರುತ್ತಿದೆ. ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.

ಸಮಾಜ ವಿಜ್ಞಾನ ವೇದಿಕೆ ಅಧ್ಯಕ್ಷ ಕೆ.ವೀರಭದ್ರಗೌಡ ಮಾತನಾಡಿ, ಡಾಂಬರ್ ಕಾರ್ಖಾನೆ ಸ್ಥಾಪನೆಯಿಂದ ಸುಮಾರು 32 ಗ್ರಾಮಗಳು ಶುದ್ಧಗಾಳಿ, ನೀರು ಇಲ್ಲದಂತಾಗುತ್ತದೆ. ನಾನಾ ರೋಗ ಹೆಚ್ಚುತ್ತವೆ. ಶ್ವಾಸಕೋಶ ಕ್ಯಾನ್ಸರ್‌ನಿಂದ ಹಲವರು ಬಳಲಿದ್ದಾರೆ. ಇದನ್ನೆಲ್ಲ ತಡೆಯಲು ಕಾರ್ಖಾನೆ ರದ್ದುಪಡಿಸಬೇಕು. ಜನಪ್ರತಿನಿಧಿಗಳು ಡಾಂಬರ್ ಕಾರ್ಖಾನೆ ಪರ ಇರುವುದರಿಂದ, ಹೋರಾಟ ತೀವ್ರಗೊಳ್ಳಬೇಕಿದೆ ಎಂದರು. ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್ ಶೇಷಾವಲಿ, ಜಿಲ್ಲಾಧಿಕಾರಿಗೆ ರವಾನಿಸುವ ಭರವಸೆ ನೀಡಿದರು. ಮುಖಂಡರಾದ ಗಾಳಿ ಬಸವರಾಜ್, ಎ.ಮಂಜುನಾಥ, ಎನ್.ಸೋಮಯ್ಯ, ಹುಲೆಪ್ಪ, ಎನ್.ಹುಲುಗಪ್ಪ, ಯಂಕಮ್ಮ, ಚಂದ್ರ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ