ಆ್ಯಪ್ನಗರ

ವಿಜ್ಞಾನಕ್ಕಾಗಿ ನಡಿಗೆ: ಸಹಿ ಸಂಗ್ರಹ ಅಭಿಯಾನ

ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಶನ್(ಎಐಡಿವೈಒ)ನಿಂದ ನಗರದ ವಿಜಯನಗರ ಕಾಲೇಜಿನ ಬಳಿ ಬುಧವಾರ ‘ವಿಜ್ಞಾನಕ್ಕಾಗಿ ನಡಿಗೆ’ ಕಾರ್ಯಕ್ರಮ ನಿಮಿತ್ತ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ವಿಕ ಸುದ್ದಿಲೋಕ 10 Aug 2017, 6:05 am
ಹೊಸಪೇಟೆ: ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಶನ್(ಎಐಡಿವೈಒ)ನಿಂದ ನಗರದ ವಿಜಯನಗರ ಕಾಲೇಜಿನ ಬಳಿ ಬುಧವಾರ ‘ವಿಜ್ಞಾನಕ್ಕಾಗಿ ನಡಿಗೆ’ ಕಾರ್ಯಕ್ರಮ ನಿಮಿತ್ತ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
Vijaya Karnataka Web
ವಿಜ್ಞಾನಕ್ಕಾಗಿ ನಡಿಗೆ: ಸಹಿ ಸಂಗ್ರಹ ಅಭಿಯಾನ


ಎಐಡಿವೈಒ ಸಂಘಟನೆಯ ಜಿಲ್ಲಾಧ್ಯಕ್ಷ ರಾಧಾಕಷ್ಣ ಉಪಾಧ್ಯ ಮಾತನಾಡಿ, ವೈಜ್ಞಾನಿಕ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಮೂಲಭೂತ ವಿಜ್ಞಾನದ ಕಡೆಗೆ ಗಮನ ಹರಿಸಬೇಕು. ಮೂಢನಂಬಿಕೆ ಹಾಗೂ ಮೌಢ್ಯತೆಯನ್ನು ತೊಡೆದು ಹಾಕುವಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರ ಪಾತ್ರ ಬಹುಮುಖ್ಯ. ಸರಕಾರ ಶಿಕ್ಷಣಕ್ಕೆ ಹೆಚ್ಚು ನಿಧಿಯನ್ನು ಮೀಸಲಿಡುವ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಆದ್ಯತೆ ನೀಡಬೇಕು ಎಂದರು. ಎಐಡಿವೈಒ ಸಂಘಟನೆಯ ಪ್ರಶಾಂತ್, ರವಿ, ಪಂಪಾಪತಿ, ಅಭಿಷೇಕ್, ಅಂಜಿನಿ, ಸಣ್ಣನಿಂಗಪ್ಪ, ಮಾಬಿ ಸೇರಿದಂತೆ ಇತರರು ಇದ್ದರು. ನೂರಾರು ವಿದ್ಯಾರ್ಥಿಗಳು ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ