ಆ್ಯಪ್ನಗರ

‘ಸಹಪಠ್ಯ ಚಟುವಟಿಕೆಯಿಂದ ಶಿಕ್ಷಕರಲ್ಲಿ ಆತ್ಮಸ್ಥೈರ್ಯ’

'Spirituality in Teachers with Coaching Activity'

Vijaya Karnataka 21 Nov 2018, 5:00 am
ಹೊಸಪೇಟೆ : ಸಹಪಠ್ಯ ಚಟುವಟಿಕೆಯಿಂದ ಶಿಕ್ಷ ಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿ, ವಿದ್ಯಾರ್ಥಿಗಳ ಕಲಿಸುವಿಕೆಗೆ ಸಹಾಯವಾಗಲಿದೆ. ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಗುರುರಾಜ್‌ ಹೇಳಿದರು.
Vijaya Karnataka Web
‘ಸಹಪಠ್ಯ ಚಟುವಟಿಕೆಯಿಂದ ಶಿಕ್ಷಕರಲ್ಲಿ ಆತ್ಮಸ್ಥೈರ್ಯ’


ನಗರದ ಚಿತ್ತವಾಡ್ಗಿಯ ಪಿ.ಬಿ.ಎಸ್‌.ಸ.ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷ ಣ ಇಲಾಖೆ, ಶಿಕ್ಷ ಕರ ಕಲ್ಯಾಣ ಪ್ರತಿಷ್ಠಾನ, ಶಿಕ್ಷ ಕರ ಕಲ್ಯಾಣ ನಿಧಿ, ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಕ್ಷೇತ್ರ ಶಿಕ್ಷ ಣಾಧಿಕಾರಿ ಕಚೇರಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2018-19ನೇ ಸಾಲಿನ ಪ್ರಾಥಮಿಕ -ಪ್ರೌಢಶಾಲೆ ಶಿಕ್ಷ ಕರ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷ ಕರು ಅವರಿಗಾಗಿಯೇ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುತ್ತಿಲ್ಲ. ಇದನ್ನು ಹೋಗಲಾಡಿಸಬೇಕಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಇಲಾಖೆಯು ಸದಾ ಸಮ್ಮತಿ ನೀಡುತ್ತದೆ. ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಮಾತನಾಡಿ, ಸಹಪಠ್ಯ ಚಟುವಟಿಕೆಯಿಂದ ಶಿಕ್ಷ ಕರಿಗೆ ತಿಳಿವಳಿಕೆ ಮಟ್ಟ ಹೆಚ್ಚಲಿದೆ. ಶಿಕ್ಷ ಕರಲ್ಲಿ ಪ್ರತಿಭಾವಂತರಿದ್ದು, ಇಂಥ ಕಾರ್ಯಕ್ರಮಗಳ ಪ್ರಯೋಜನೆ ಪಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ನೋಡಲ್‌ ಅಧಿಕಾರಿ, ಶಿಕ್ಷ ಣ ಸಂಯೋಜಕ ಎಚ್‌.ಶಿವರಾಮಪ್ಪ , ಬಡ್ತಿ ಮುಖ್ಯ ಶಿಕ್ಷ ಕರ ಸಂಘದ ಅಧ್ಯಕ್ಷ ಧನರಾಜ್‌, ಪ್ರಾಥಮಿಕ ಶಾಲಾ ಮುಖ್ಯಶಿಕ್ಷ ಕರ ಸಂಘದ ಅಧ್ಯಕ್ಷ ಸಣ್ಣ ವೀರಣ್ಣ ಮಾತನಾಡಿದರು.

ಶಿಕ್ಷ ಣ ಸಂಯೋಜಕ ಮಲ್ಲೇಶಪ್ಪ, ಬಸವರಾಜ, ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಜಿಲ್ಲಾ ಖಜಾಂಚಿ ವಿಠೋಬ ಗುಂಟಾಪುರ, ಉಪಾಧ್ಯಕ್ಷೆ ಪ್ರೇಮಕುಮಾರಿ, ಗುರುಬಸವರಾಜ, ಕಾರ್ಯದರ್ಶಿ ಅಕ್ರಂ, ಪ್ರಕಾಶ್‌, ಕೆ.ಬಸವರಾಜ, ವಿಶ್ವನಾಥ, ಎಚ್‌.ವಿ.ಬಿ.ಶಿವಶಂಕರಪ್ಪ ಇದ್ದರು. ಸಾಮಾನ್ಯ ಜ್ಞಾನ, ಪ್ರಬಂಧ, ಸ್ಥಳದಲ್ಲೇ ಚಿತ್ರಬಿಡಿಸುವುದು, ವಿಜ್ಞಾನ ರಸಪ್ರಶ್ನೆ, ಆಶು ಭಾಷಣ, ಗಾಯನ ಸೇರಿದಂತೆ 7ಸ್ಪರ್ಧೆಗಳು ನಡೆದವು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ