Please enable javascript.ರಂಗತೋರಣ ಶಿಬಿರ ಸಮಾರೋಪ - ರಂಗತೋರಣ ಶಿಬಿರ ಸಮಾರೋಪ - Vijay Karnataka

ರಂಗತೋರಣ ಶಿಬಿರ ಸಮಾರೋಪ

ವಿಕ ಸುದ್ದಿಲೋಕ 23 May 2016, 6:56 am
Subscribe

ರಂಗತೋರಣ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಚಂದಮಾಮ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ನಡೆಯಿತು.

ರಂಗತೋರಣ ಶಿಬಿರ ಸಮಾರೋಪ
ಬಳ್ಳಾರಿ; ರಂಗತೋರಣ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಚಂದಮಾಮ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ನಡೆಯಿತು.

ಶಿಬಿರದ ನಿರ್ದೇಶಕ ರಮೇಶ್ ಹ್ಯಾಟಿ ಮಾತನಾಡಿ, ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಬೇಕು.ಜತೆಗೆ ಪಠ್ಯದಷ್ಟೇ, ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು. ಬಾಸುಮ ಕೊಡುಗು ರಚಿಸಿರುವ ಬಣ್ಣದ ಬದುಕು ನಾಟಕ ಪ್ರದರ್ಶನಗೊಂಡಿತು. ಶಿವೇಶ್ವರಗೌಡ ಕಲ್ಲುಕಂಬ, ಜೆ.ದಿವಾಕರ, ಗಂಗಾಧರ ದುರ್ಗಂ, ಚೆನ್ನ, ಕಾರ್ತಿಕ್, ಎಂ.ಗಿರೀಶ್ ಕಾರ್ನಾಡ್, ಭವಾನಿ, ಸವಿತಾ, ಸಹನಾ, ಇಂದ್ರಕುಮಾರ್,ಜೆ.ರಾಘವ ಮಕ್ಕಳ ನಾಟಕಕ್ಕೆ ಸಹಕಾರ ನೀಡಿದರು. ಬಿಪಿಎಸ್ ಶಾಲೆ ಆಡಳಿತ ಮಂಡಳಿ ಸದಸ್ಯ ವಿ.ಜೆ.ವಿಕ್ರಮ್, ವಿಎಸ್‌ಕೆ ಕಾನೂನು ಕಾಲೇಜು ಅಧ್ಯಕ್ಷ ದರೂರು ಶಾಂತನಗೌಡ, ವಕೀಲ ಪಿ.ಯತಿರಾಜಲು, ರಂಗತೋರಣ ಕಾರ್ಯದರ್ಶಿ ಪ್ರಭುದೇವ್ ಕಪ್ಪಗಲ್ಲು, ಅಡವಿಸ್ವಾಮಿ ಇತರರಿದ್ದರು. ಕಲಾವಿದರಾದ ರಂಜಿತಾ, ಸಹನಾರಿಂದ ನೃತ್ಯ ಪ್ರದರ್ಶನ ನಡೆಯಿತು. ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ರಂಗ ಗೀತೆ ಪ್ರಸ್ತುತಪಡಿಸಿದರು. ಡಿ.ಎನ್. ಇಂದ್ರಕುಮಾರ್ ನಿರ್ವಹಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ