ಆ್ಯಪ್ನಗರ

ಅಗ್ಗದ ಕಾರಿನಾಸೆಗೆ 94 ಸಾವಿರ ಕಳೆದುಕೊಂಡ ಆನ್‌ಲೈನ್ ಗ್ರಾಹಕ

ಅಗ್ಗದ ಕಾರಿನಾಸೆಗೆ ಇಲ್ಲಿನ ಆನ್‌ಲೈನ್ ಗ್ರಾಹಕರೊಬ್ಬರು, 94,500 ರೂ. ಕಳೆದುಕೊಂಡಿದ್ದಾರೆ.

ವಿಕ ಸುದ್ದಿಲೋಕ 9 Jun 2016, 7:08 am
ಸಿರುಗುಪ್ಪ (ಬಳ್ಳಾರಿ); ಅಗ್ಗದ ಕಾರಿನಾಸೆಗೆ ಇಲ್ಲಿನ ಆನ್‌ಲೈನ್ ಗ್ರಾಹಕರೊಬ್ಬರು, 94,500 ರೂ. ಕಳೆದುಕೊಂಡಿದ್ದಾರೆ.
Vijaya Karnataka Web  94
ಅಗ್ಗದ ಕಾರಿನಾಸೆಗೆ 94 ಸಾವಿರ ಕಳೆದುಕೊಂಡ ಆನ್‌ಲೈನ್ ಗ್ರಾಹಕ


ಹಣ ಕಳೆದುಕೊಂಡ ಎ.ಕೃಷ್ಣ, ಆನ್‌ಲೈನ್ ವಂಚಕರಾದ ಬೆಂಗಳೂರು ಮೂಲದ ಅರುಣ್ ಹಾಗೂ ಡಾಕ್ಟರ್ ಎನ್ನುವವರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ. ಓಎಲ್‌ಎಕ್ಷ್‌ನಲ್ಲಿ ಆಗಾಗ್ಗೆ ಕಾರಿಗಾಗಿ ಶೋಧಿಸುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನ ವಿವರ ತಿಳಿಯಲು ಅಲ್ಲಿ ತಮ್ಮ ಮಾಹಿತಿನೀಡಿದ್ದಾರೆ. ಇದನ್ನು ಆಧರಿಸಿ, ವ್ಯಕ್ತಿಯೊಬ್ಬರು ಬೆಂಗಳೂರು ಏರ್‌ಪೋರ್ಟ್‌ನಿಂದ ಮೇ 30ರಂದು ಮೊಬೈಲ್ ಸಂಖ್ಯೆ 89042-18460ರಿಂದ ಎ.ಕೃಷ್ಣ ಅವರಿಗೆ ಕರೆಮಾಡಿದ್ದಾನೆ. ತನ್ನನ್ನು ಡಾಕ್ಟರ್ ಎಂದು ಪರಿಚಯಿಸಿಕೊಂಡು, ಕೇವಲ 7 ಸಾವಿರ ಕಿ.ಮೀ. ಓಡಿದ ಎರಿಟಿಗಾ ಕಾರಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಕಸ್ಟಂ ಆಫೀಸರ್ ಅರುಣ್ ಅವರನ್ನು ಸಂಪರ್ಕಿಸುವಂತೆ ಸೂಚಿಸಿ, 89042-18448 ನಂಬರ್ ನೀಡಿದ್ದಾನೆ. ನಂತರ ಎ.ಕೃಷ್ಣ, ಆರುಣ್‌ಗೆ ಕರೆ ಮಾಡಿದ್ದಾರೆ. ಕಾರಿನ ವಿವರ ನೀಡುವ ಜತೆಗೆ ಕಾರಿನ ಫೋಟೊವನ್ನು ಓಎಲ್‌ಎಕ್ಸ್‌ನಲ್ಲಿ ಹಾಕಿದ್ದಾನೆ. ನಂತರ ಇಲ್ಲಿನ ಗ್ರಾಹಕ, ಕಾರು ಖರೀದಿಸಲು ಮುಂದಾಗಿದ್ದಾರೆ.

ಕಾರು ಪಾರ್ಕಿಂಗ್ ಚಾರ್ಜ್ 19,500 ರೂ.: ಆನ್‌ಲೈನ್ ವಂಚಕರ ಮಾತು ನಂಬಿದ ಎ.ಕೃಷ್ಣ, ಆರಂಭದಲ್ಲಿ ಕಾರಿನ ಪಾರ್ಕಿಂಗ್ ಚಾರ್ಚ್ ಭರಿಸಲು 19,500 ರೂ.ಗಳನ್ನು ಎಸ್‌ಬಿಎಂ ಖಾತೆ ಸಂಖ್ಯೆ 54059097515ಕ್ಕೆ ಸಂದಾಯಮಾಡಿದ್ದಾರೆ. ಕಾರಿನ ಮೇಲೆ ಬ್ಯಾಂಕಿನಲ್ಲಿ ಬಾಕಿಯಿರುವ 75ಸಾವಿರ ರೂ. ಭರಿಸಲು ಅದೇ ಖಾತೆಗೆ ಅವರು ಕೇಳಿದಷ್ಟು ಮೊತ್ತವನ್ನು ವರ್ಗಾವಣೆಮಾಡಿದ್ದಾರೆ. ಹಣ ಪಡೆಯುವವರೆಗೆ ಮಾತನಾಡಿದ್ದ ವಂಚಕರು, ಹಣ ಪಾವತಿಸಿದ ವೋಚರ್ ಪ್ರತಿಯನ್ನು ಐ್ಞಜಿಚ್ಚ್ಠಠಿಟಞಜ್ಞ್ಛಿಟ555ಃಜಞಜ್ಝಿ.್ಚಟಞ ಗೆ ಕಳಿಸುವಂತೆ ತಿಳಿಸಿದ್ದಾರೆ. ನಂತರ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ