ಆ್ಯಪ್ನಗರ

ಗಣಿಜಿಲ್ಲೆ ಬಳ್ಳಾರಿಯಲ್ಲಿ ಗರ್ಭಿಣಿ ಸೇರಿ 11 ಮಂದಿಗೆ ಕೊರೊನಾ ವೈರಸ್‌ ದೃಢ!

ಮುಂಬೈನಿಂದ ಬಳ್ಳಾರಿಗೆ ಬಂದಿದ್ದ ವಲಸಿಗರಲ್ಲಿ 8 ತಿಂಗಳ ಗರ್ಭಿಣಿ, ಮಂಗಳ ಮುಖಿ ಸೇರಿ 11ಜನಕ್ಕೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಸ್. ಎಸ್.ನಕುಲ್ ತಿಳಿಸಿದರು.

Vijaya Karnataka Web 21 May 2020, 11:26 am
ಬಳ್ಳಾರಿ: ಮುಂಬೈನಿಂದ ಬಳ್ಳಾರಿಗೆ ಬಂದಿದ್ದ ವಲಸಿಗರಲ್ಲಿ 8 ತಿಂಗಳ ಗರ್ಭಿಣಿ, ಮಂಗಳ ಮುಖಿ ಸೇರಿ 11ಜನಕ್ಕೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಸ್. ಎಸ್.ನಕುಲ್ ತಿಳಿಸಿದರು.
Vijaya Karnataka Web corona


ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಂಬೈನಿಂದ ಬಂದ ಮೂರು ಕುಟುಂಬಗಳ 11 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರಲ್ಲಿ ಏಳು ಮಹಿಳೆಯರು, ಮೂವರು ಪುರುಷರು ಮತ್ತು ಒಬ್ಬ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ.‌ ಮಹಿಳೆಯರ ಪೈಕಿ ಒಬ್ಬ ಗರ್ಭಿಣಿ ಮತ್ತು ಒಬ್ಬ ಬಾಣಂತಿ ಇದ್ದಾರೆ.

ಬಾಣಂತಿಯ ಒಂಭತ್ತು ತಿಂಗಳ‌ ಹಸುಗೂಸು ಅಜ್ಜ-ಅಜ್ಜಿ ಬಳಿ ಇದ್ದು, ಅದರ ಗಂಟಲ‌ ದ್ರವದ ಮಾದರಿಯನ್ನು ತೆಗೆದು ಪ್ರಯೋಗಾಲಯಕ್ಕೆ ಕಳಿಸಲಾಗುವುದು. 11 ಸೋಂಕಿತರೊಂದಿಗೆ ಮೊದಲ ಹಂತದ ಸಂಪರ್ಕ ಹೊಂದಿದ್ದ 49 ಮಂದಿ ಸೇರಿದಂತೆ 187 ಮಂದಿಯನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದೆ ಎಂದರು.

ಸುಮಾರು 2 ತಿಂಗಳ ಬಳಿಕ ರಾಜ್ಯದಲ್ಲಿ ರೈಲು ಸೇವೆ ಮತ್ತೆ ಆರಂಭ!

ಮುಂಬೈನಲ್ಲಿ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಇವರು ಮೇ 6 ರಂದು ಅನಂತಪುರದ ಜಿಲ್ಲಾಧಿಕಾರಿ‌ ನೀಡಿದ ಮಾಹಿತಿ ಅನ್ವಯ 65 ಮಂದಿಯನ್ನು ಗುಂತಕಲ್ ರೈಲು ನಿಲ್ದಾಣ ದಿಂದ ನೇರವಾಗಿ ಕ್ವಾರಂಟೈನ್ ಕೇಂದ್ರಗಳಿಗೆ ಕರೆತರಲಾಗಿತ್ತು ಎಂದರು.

ಸೋಂಕಿತರಲ್ಲಿ ಬಳ್ಳಾರಿ ನಗರದ 6, ಬಳ್ಳಾರಿ ತಾಲ್ಲೂಕಿನ ರೂಪನಗುಡಿಯ 3 ಮತ್ತು ಚಾಗನೂರಿನ ಇಬ್ಬರಿಗೆ ಸೋಂಕು ತಗುಲಿದೆ ಎಂದರು.

ಲಾಕ್‌ಡೌನ್‌ ಎಫೆಕ್ಟ್: ಜಾಗತಿಕ ಇಂಗಾಲಾಮ್ಲ ಹೊರಸೂಸುವಿಕೆ 17% ಇಳಿಕೆ!

ಎಸ್ಪಿ ಸಿ.ಕೆ.ಬಾಬ ಮಾತನಾಡಿ, ಕ್ವಾರಂಟೈನ್ ಕೇಂದ್ರಗಳಿಂದ ಕೆಲವರು ಪರಾರಿಯಾಗಿದ್ದ ಪ್ರಕರಣ ನಡೆದಿದ್ದ ಹಿನ್ನೆಲೆಯಲ್ಲಿ ಎಲ್ಲ ಕ್ವಾರಂಟೈನ್ ಕೇಂದ್ರಗಳಿಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಡಿಎಚ್ ಒ ಡಾ.ಜನಾರ್ದನ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ