ಆ್ಯಪ್ನಗರ

15 ಮಹಿಳೆಯರು ಅಸ್ವಸ್ಥ

ಸಂತಾನ ತಡೆ ಶಸ್ತ್ರಚಿಕಿತ್ಸೆಗೂ ಮುಂಚೆ ಆರೋಗ್ಯ ಸಿಬ್ಬಂದಿಯ ಎಡವಟ್ಟಿನಿಂದ ತಾಲೂಕಿನ ಕಮಲಾಪುರದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ದಾಖಲಾಗಿದ್ದ ಹದಿನೈದು ಮಹಿಳೆಯರು ಅಸ್ವಸ್ಥರಾಗಿದ್ದಾರೆ.

ವಿಕ ಸುದ್ದಿಲೋಕ 12 Jan 2017, 8:00 am
ಹೊಸಪೇಟೆ: ಸಂತಾನ ತಡೆ ಶಸ್ತ್ರಚಿಕಿತ್ಸೆಗೂ ಮುಂಚೆ ಆರೋಗ್ಯ ಸಿಬ್ಬಂದಿಯ ಎಡವಟ್ಟಿನಿಂದ ತಾಲೂಕಿನ ಕಮಲಾಪುರದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ದಾಖಲಾಗಿದ್ದ ಹದಿನೈದು ಮಹಿಳೆಯರು ಅಸ್ವಸ್ಥರಾಗಿದ್ದಾರೆ.
Vijaya Karnataka Web 15
15 ಮಹಿಳೆಯರು ಅಸ್ವಸ್ಥ


ತಾಲೂಕಿನ ಕಮಲಾಪುರದ ಪುಷ್ಪಾ , ಗಂಗಮ್ಮ , ಮಲ್ಲಮ್ಮ , ಲಕ್ಷ್ಮೀ, ಹೊಸ ಚಿನ್ನಾಪುರದ ಕಾಂತಮ್ಮ , ಶಾರದಮ್ಮ , ಹಂಪಿಯ ನೇತ್ರಾಬಾಯಿ, ಪಾಪಿನಾಯಕನಹಳ್ಳಿಯ ಮಂಜುಳಾ ಸೇರಿ 15 ಮಹಿಳೆಯರು ಅಸ್ವಸ್ಥರಾಗಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸುವ ಮುನ್ನ ಮಧ್ಯಾಹ್ನ 3ರ ಸುಮಾರಿಗೆ ಸ್ಟಾಫ್ ನರ್ಸ್ ಹುಲಿಗೆಮ್ಮ ಅವರು ಮಹಿಳೆಯರಿಗೆ ಆಡ್ರೆನೆಲಿನ್ ಎಂಬ ಇಂಜೆಕ್ಷನ್ ನೀಡಿದ್ದೇ ಎಡವಟ್ಟಿಗೆ ಕಾರಣ ಎನ್ನಲಾಗಿದೆ.

ಈ ಚುಚ್ಚುಮದ್ದಿನಿಂದ ಮಹಿಳೆಯರು ಅಸ್ವಸ್ಥರಾದರು. ಶಸ್ತ್ರಚಿಕಿತ್ಸಕ ಡಾ.ಪ್ರಕಾಶ್ ರೆಡ್ಡಿ ಅವರು ತಾಲೂಕು ವೈದ್ಯಾಧಿಕಾರಿಗೆ ಈ ಕುರಿತು ತಕ್ಷಣ ಮಾಹಿತಿ ರವಾನಿಸಿದರು. ಅಸ್ವಸ್ಥ ಮಹಿಳೆಯರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ನಗರದ ಉಪವಿಭಾಗ ಮಟ್ಟದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯ ಹಿನ್ನೆಲೆಯಲ್ಲಿ ಒಬ್ಬ ಮಹಿಳೆಯನ್ನು ಬಳ್ಳಾರಿ ವಿಮ್ಸ್‌ಗೆ ಕಳುಹಿಸಲಾಯಿತು.

‘‘ಚಿಕಿತ್ಸೆ ನಂತರ ಎಲ್ಲ ಮಹಿಳೆಯರು ಚೇತರಿಸಿಕೊಳ್ಳುತ್ತಿದ್ದಾರೆ. ಬಳ್ಳಾರಿ ವಿಮ್ಸ್‌ನ ಒಂದು ತಂಡ ಸೇರಿ ಸ್ಥಳೀಯ ಸರಕಾರಿ ಆಸ್ಪತ್ರೆಯ ತಂಡವೂ ಚಿಕಿತ್ಸೆ ನೀಡುತ್ತಿದೆ.
................
ಸಂತಾನಹರಣ ಶಸ್ತ್ರ ಚಿಕಿತ್ಸೆ ಸಮಯದಲ್ಲಿ ನೀಡಬೇಕಾದ ಚುಚ್ಚುಮದ್ದನ್ನು ಮೊದಲೇ ನೀಡಿದ್ದರಿಂದ; 15 ಮಹಿಳೆಯರು ಅಸ್ವಸ್ಥರಾಗಿದ್ದಾರೆ. ನಗರದ ಸರಕಾರಿ ಆಸ್ಪತ್ರೆಯಲ್ಲಿ 14 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಒಬ್ಬರಿಗೆ ಬಳ್ಳಾರಿ ವಿಮ್ಸ್‌ಗೆ ರವಾನಿಸಲಾಗಿದೆ.

-ಡಾ.ನಾಗೇಂದ್ರಕುಮಾರ್, ತಾಲೂಕು ಆರೋಗ್ಯಾಧಿಕಾರಿ, ಹೊಸಪೇಟೆ
..................


ಸಂತಾನ ಹರಣ ಶಸ್ತ್ರ ಚಿಕಿತ್ಸೆ ಸಮಯದಲ್ಲಿ ಒಂದು ಇಂಜೆಕ್ಷನ್ ನೀಡಿದ್ದರಿಂದ ನಿತ್ರಾಣಗೊಂಡಿದ್ದಾರೆ. ನಾವು ಹೊರಗಿದ್ದೇವು. ವೈದ್ಯರು ಹಾಗೂ ನರ್ಸ್‌ಗಳು ಎಲ್ಲರನ್ನೂ ಒಳ ಕರೆದುಕೊಂಡು ಹೋಗಿದ್ದರು. ನಮಗೆ ಹೆಚ್ಚಿನ ಮಾಹಿತಿ ಏನೂ ನೀಡಲಿಲ್ಲ. ಏಕಾಏಕಿ ನಿತ್ರಾಣಗೊಂಡಿದ್ದಾರೆ ಎಂದು ಹೇಳಿದರು. ಬಳಿಕ ಆ್ಯಂಬುಲೆನ್ಸ್‌ನಲ್ಲಿ ಹೊಸಪೇಟೆ ಆಸ್ಪತ್ರೆಗೆ ಕರೆತಂದಿದ್ದಾರೆ.

-ಅಸ್ವಸ್ಥಗೊಂಡ ಮಹಿಳೆಯರ ಸಂಬಂಧಿಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ