ಆ್ಯಪ್ನಗರ

ಬಳ್ಳಾರಿ: ಕೇಂದ್ರ ಕಾರಾಗೃಹದ 16 ಕೈದಿಗಳಿಗೆ ಕೊರೊನಾ ಪಾಸಿಟಿವ್, ಕೆಜಿ ಹಳ್ಳಿ ಆರೋಪಿಗಳಿಗೂ ಕೊರೊನಾ ಟೆಸ್ಟ್‌!

ಬಳ್ಳಾರಿಯ ಕೇಂದ್ರ ಕಾರಾಗೃಹದ 6 ಜನ ಜೈಲು ಕೈದಿಗಳಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಪೆರೋಲ್ ಮೇಲೆ ಹೊರಗಿದ್ದ 7 ಜನರು ಮತ್ತು ಇತ್ತೀಚಿನ ಬಳ್ಳಾರಿ ನಗರದಲ್ಲಿ ನಡೆದ ಕೊಲೆಯೊಂದರ ಪ್ರಕರಣದಲ್ಲಿ ಬಂಧಿತರಾದ 9 ಜನರಿಗೆ ಕೊವೀಡ್ ಧೃಡಪಟ್ಟಿದೆ.

Vijaya Karnataka Web 14 Aug 2020, 11:27 am
ಬಳ್ಳಾರಿ: ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳಿಗೂ ಕೊರೊನಾ ಪಾಸಿಟಿವ್ ಧೃಡಪಟ್ಟಿದೆ. ಇಲ್ಲಿನ 16 ಜನ ಜೈಲು ಕೈದಿಗಳಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಪೆರೋಲ್ ಮೇಲೆ ಹೊರಗಿದ್ದ 7 ಜನರು ಮತ್ತು ಇತ್ತೀಚಿನ ಬಳ್ಳಾರಿ ನಗರದಲ್ಲಿ ನಡೆದ ಕೊಲೆಯೊಂದರ ಪ್ರಕರಣದಲ್ಲಿ ಬಂಧಿತರಾದ 9 ಜನರಿಗೆ ಕೊವೀಡ್ ಧೃಡವಾಗಿದೆ.
Vijaya Karnataka Web MRA1Uh6i


ಎಲ್ಲರನ್ನ ಸದ್ಯ ಐಸೋಲೇಷನ್ ವಾರ್ಡ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕೆಜಿ ಹಳ್ಳಿ ಗಲಭೆಗೆ ಸಂಬಂಧಪಟ್ಟಂತೆ ಬೆಂಗಳೂರಿನಿಂದ ಬಂದ ಆರೋಪಿಗಳಿಗೂ ಸಹ ಕೊರೊನಾ ತಪಾಸಣೆ ನಡೆಸಿದ್ದು, ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ. ಯಾವುದೇ ಆತಂಕವಿಲ್ಲ ಎಂದು ಕಾರಗೃಹದ ಅಧೀಕ್ಷಕರು ತಿಳಿಸಿದ್ದಾರೆ.

ಇನ್ನು ಪಾಸಿಟಿವ್‌ ದೃಢಪಟ್ಟವರೊಂದಿಗೆ ಯಾರು ಕೂಡ ಸಂಪರ್ಕ ಸಾಧಿಸಿಲ್ಲ. ಯಾಕಂದರೆ ಹೊರಗಡೆಯಿಂದ ಬಂದ ಕೈದಿಗಳನ್ನ ಮೊಲದು ಕೊರೊನಾ ಪರೀಕ್ಷೆ ನಡೆಸಿ ನಂತರ ಐಸೋಲೇಶನ್‌ನಲ್ಲಿಟ್ಟು ನಂತರ ಒಳಗೆ ಬಿಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜೈಲಿನಲ್ಲಿ ಈ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ.
ಬಳ್ಳಾರಿ ಜೈಲಿಗೆ ಡಿಜೆ ಹಳ್ಳಿ ಗಲಭೆ ಆರೋಪಿಗಳು ಶಿಫ್ಟ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ