ಆ್ಯಪ್ನಗರ

ನರೇಂದ್ರ ಮೋದಿಯವರ ಅಲೆಯಿಂದ 25 ಸಂಸದರ ಆಯ್ಕೆ

ನರೇಂದ್ರ ಮೋದಿ ಅವರ ಅಲೆಯಿಂದ ರಾಜ್ಯದಲ್ಲಿ 25 ಸಂಸದರು ಆಯ್ಕೆಯಾಗಿದ್ದಾರೆ. ಅದರಲ್ಲಿ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ನಮ್ಮವರೇ. ಮೈತ್ರಿ ಸರಕಾರವನ್ನು ಜನರು ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದಾರೆ.

Vijaya Karnataka 28 May 2019, 5:00 am
ಹೊಸಪೇಟೆ : ನರೇಂದ್ರ ಮೋದಿ ಅವರ ಅಲೆಯಿಂದ ರಾಜ್ಯದಲ್ಲಿ 25 ಸಂಸದರು ಆಯ್ಕೆಯಾಗಿದ್ದಾರೆ. ಅದರಲ್ಲಿ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ನಮ್ಮವರೇ. ಮೈತ್ರಿ ಸರಕಾರವನ್ನು ಜನರು ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದಾರೆ. ರಾಜ್ಯ ಸರಕಾರಕ್ಕೆ ಮುಂದುವರಿಯುವುದಕ್ಕೆ ನೈತಿಕತೆ ಇಲ್ಲ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮಲು ಹೇಳಿದರು.
Vijaya Karnataka Web 25 mps elected by modis waves
ನರೇಂದ್ರ ಮೋದಿಯವರ ಅಲೆಯಿಂದ 25 ಸಂಸದರ ಆಯ್ಕೆ


ಪಟ್ಟಣ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನ ಕಮಲಾಪುರದ ನಾನಾ ವಾರ್ಡ್‌ಗಳಲ್ಲಿ ಸೋಮವಾರ ಮತಯಾಚನೆ ಮಾಡಿ ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ನೀರಿನ ಸಮಸ್ಯೆ ಇದೆ. ಜನರು ವಲಸೆ ಹೋಗುತ್ತಿದ್ದಾರೆ. ರಾಜ್ಯ ಸರಕಾರ ಮೂರು ಬಿಟ್ಟಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರಾಜೀನಾಮೆಗೆ ಬಲವಂತ ಮಾಡುವುದಿಲ್ಲ. ಅವರಾಗಿಯೇ ನೈತಿಕ ಹೊಣೆ ಹೊತ್ತು ಹೊತ್ತು ರಾಜೀನಾಮೆ ನೀಡಬೇಕು ಎಂದರು.

ಕಾಂಗ್ರೆಸ್‌ ಶಾಸಕರು ಹೊರಗಡೆ ಕಾಲಿಟ್ಟಿದ್ದಾರೆ. ಅಲ್ಲದೇ, ಸಚಿವರು ಬಿಜೆಪಿ ಜತೆ ಬರಲು ಸಿದ್ಧರಿದ್ದಾರೆ. ಈಗ ಮತ್ತೊಮ್ಮೆ ಚುನಾವಣೆಯಾದರೆ, ದೊಡ್ಡ ನಷ್ಟವಾಗಲಿದೆ. ಹಾಗಾಗಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬೇರೆ ಪಕ್ಷ ದ ಶಾಸಕರು ಬೆಂಬಲ ನೀಡಲಿದ್ದಾರೆ. ಅಲ್ಲದೇ, ಅಪರೇಶನ್‌ ಕಮಲ ಹಾಗೂ ಯಾವ ಶಾಸಕರು ಬರುತ್ತಾರೆ ಎಂಬುದನ್ನು ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಲಿದ್ದಾರೆ ಎಂದರು.

100 ರಿಂದ 150 ಕೋಟಿ ರೂ. ವಿಶೇಷ ಪ್ಯಾಕೇಜ್‌ ಪಡೆದುಕೊಂಡು ಕಾಶಿ ಮಾದರಿಯಲ್ಲಿ ಹಂಪಿಯನ್ನು ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೇ, ಕಂಪ್ಲಿ ಹಾಗೂ ಹೊಸಪೇಟೆ ಭಾಗದಲ್ಲಿ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲಾಗುವುದು ಎಂದರು. ನೂತನ ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ರಾಜ್ಯ ಸರಕಾರಕ್ಕೆ ಎಳ್ಳಷ್ಟು ಧಮ್‌ ಇಲ್ಲ. ಪಾಶ್ರ್ವವಾಯು ಹೊಡೆದಂಗೆ ಆಗಿದೆ. ನೀರಿನ ಸಮಸ್ಯೆ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ಆಡಳಿತ ಸರಿಯಾಗಿ ನಡೆಸುತ್ತಿಲ್ಲ. ಈ ಸರಕಾರ ಮೊದಲು ಹೋಗಬೇಕು ಎಂದರು. ಪಕ್ಷ ದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ, ಮಂಡಳದ ಅಧ್ಯಕ್ಷ ಅನಂತಪದ್ಮನಾಭ, ಮುಖಂಡರಾದ ಕವಿರಾಜ್‌ ಅರಸ್‌, ಗೋಸಲ ಭರ್ಮಪ್ಪ, ಫಯಾಜ್‌ ಅಹ್ಮದ್‌, ಜಲೀಲ, ಗುಜ್ಜಲ್‌ ರಾಮಪ್ಪ, ಬಸವರಾಜ ನಾಲತ್ವಾಡ, ಶಂಕರ ಮೇಟಿ, ರಾಣಿ ಸಂಯುಕ್ತಾ, ಗುದ್ಲಿ ಪರಶುರಾಮಪ್ಪ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ