ಆ್ಯಪ್ನಗರ

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2,72,765 ಕ್ಯೂಸೆಕ್‌ ನೀರು ಬಿಡುಗಡೆ

ಕೃಷ್ಣಾ ಕಣಿವೆ ಹಾಗೂ ಮಲಪ್ರಭಾ ಮತ್ತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಗಳಲ್ಲಿಎಡೆಬಿಡದೇ ಕಳೆದ ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಆಲಮಟ್ಟಿಯ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅಣೆಕಟ್ಟು ಭರ್ತಿಯಾಗಿದ್ದು,ಬಸವಸಾಗರ ಜಲಾಶಯಕ್ಕೆ ಸುಮಾರು 2 ಲಕ್ಷ 70 ಸಾವಿರ ಕ್ಯೂಸೆಕ್‌ ನೀರು ಒಳಹರಿವು ಹೆಚ್ಚಿದೆ.

Vijaya Karnataka Web 20 Aug 2020, 6:56 pm
ಬಳ್ಳಾರಿ: ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಭೀತಿ ಉಂಟಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಜನರು ಮತ್ತೆ ಪ್ರವಾಹ ಭೀತಿಯನ್ನು ಎದುರಿಸುತ್ತಿದ್ದಾರೆ.
Vijaya Karnataka Web Basavasagar


ತುಂಗಭದ್ರೆಯಿಂದ 80 ಸಾವಿರ ಕ್ಯುಸೆಕ್‌ ನೀರು ನದಿಗೆ: ಹಂಪಿ ಕೆಲವು ಸ್ಮಾರಕಗಳು ಜಲಾವೃತ

ಧಾರಾಕರ ಮಳೆಯಾಗುತ್ತಿರುವ ಹಿನ್ನೆಲೆ ರಾಯಚೂರಿನ ಬಸವಸಾಗರ ಜಲಾಶಯಕ್ಕೆ ದಿನದಿಂದ ದಿನಕ್ಕೆ ಒಳಹರಿವು ಜಾಸ್ತಿಯಾಗುತ್ತಿದೆ. ಹೀಗಾಗಿ ಬಸವಸಾಗರ ಜಲಾಶಯದ 27 ಕ್ರಸ್ಟ್‌ ಗೇಟ್‌ಗಳ ಮೂಲಕ ಗುರುವಾರ 2,72,765 ಕ್ಯೂಸೆಕ್‌ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ ಎಂದು ಜಲಾಶಯದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ರಂಗರಾಮ ತಿಳಿಸಿದ್ದಾರೆ.

ಬಳ್ಳಾರಿ: ಜಿಲ್ಲೆಯಲ್ಲಿ 16 ಸಾವಿರ ಗಡಿ ದಾಟಿದ ಸೋಂಕು

ಕೃಷ್ಣಾ ಕಣಿವೆ ಹಾಗೂ ಮಲಪ್ರಭಾ ಮತ್ತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಗಳಲ್ಲಿಎಡೆಬಿಡದೇ ಕಳೆದ ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಆಲಮಟ್ಟಿಯ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅಣೆಕಟ್ಟು ಭರ್ತಿಯಾಗಿದ್ದು,ಬಸವಸಾಗರ ಜಲಾಶಯಕ್ಕೆ ಸುಮಾರು 2 ಲಕ್ಷ 70 ಸಾವಿರ ಕ್ಯೂಸೆಕ್‌ ನೀರು ಒಳಹರಿವು ಹೆಚ್ಚಿದೆ. ಹಾಗಾಗಿ ಬಸವಸಾಗರ ಜಲಾಶಯದಿಂದ ಸುಮಾರು 2 ಲಕ್ಷ 72 ಸಾವಿರ 765 ಕ್ಯೂಸೆಕ್‌ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ. ಈ ಜಲಾಶಯದ ಗರಿಷ್ಠ ನೀರಿನ ಮಟ್ಟ 492.252 ಮೀಟರ್‌ ಸಂಗ್ರಹ ಸಾಮರ್ಥ್ಯದಲ್ಲಿ, ಪ್ರಸ್ತುತ 491.350 ಮೀಟರ್‌ ಇದೆ.

ಕೊರೊನಾಗಿಂತಲೂ ಹಸಿವು ಕ್ರೂರಿ..! ಐಸೋಲೇಷನ್‌ನಲ್ಲಿದ್ದ ವೃದ್ಧ ಹೆಚ್ಚು ಮಾತ್ರೆ ಸೇವಿಸಿ ಸಾವು..!

ಇನ್ನು ಲಿಂಗಸುಗೂರು ತಾಲೂಕಿನ ನಾಗರಹಾಳ ಸಮೀಪದ ಬಸವಸಾಗರ ಜಲಾಶಯದ ಸೇತುವೆ ಬಳಿ ಬಸವಸಾಗರ ಜಲಾಶಯದ ನೀರು ಅಪಾಯ ಮಟ್ಟದಲ್ಲಿಹರಿಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ