ಆ್ಯಪ್ನಗರ

ಬಳ್ಳಾರಿ: ತಿಂಗಳ ಮಗು ಸೇರಿ 28 ಜನರಿಗೆ ಕೊರೊನಾ, 470ಕ್ಕೇರಿದ ಸೋಂಕಿತರ ಸಂಖ್ಯೆ

ಗಣಿ ನಾಡಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಸೋಮವಾರ ತಿಂಗಳ ಮಗು ಸೇರಿ 28 ಜನಕ್ಕೆ ಕೊರೊನಾ ಸೋಂಕು ದೃಢವಾಗಿದೆ. ಹೊಸ ಪ್ರಕರಣಗಳ ಪೈಕಿ 20 ಜಿಂದಾಲ್‌ ಕಾರ್ಖಾನೆಯ ನಂಟನ್ನು ಹೊಂದಿವೆ. ಇದುವರೆಗೂ 140 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Vijaya Karnataka Web 22 Jun 2020, 8:10 pm
ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಮುಂದುವರಿದಿದ್ದು, ಸೋಮವಾರ ಒಂದು ತಿಂಗಳ ಹೆಣ್ಣು ಮಗುವಿಗೆ ಸೇರಿ ಒಟ್ಟು 28 ಜನರಲ್ಲಿ ಸೋಂಕು ದೃಢವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 470ಕ್ಕೇರಿದೆ.
Vijaya Karnataka Web Coronavirus
ಸಾಂದರ್ಭಿಕ ಚಿತ್ರ


ಸೋಮವಾರ ಗುಣಮುಖರಾಗಿ ಬಿಡುಗಡೆಯಾದ 28 ಜನ ಸೇರಿ ಒಟ್ಟು 140 ಜನ ಇದುವರೆಗೂ ಗುಣಮುಖರಾಗಿ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನುಳಿದ 327 ಜನ ಜಿಲ್ಲೆಯ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸದಾಗಿ ಪತ್ತೆಯಾದ 28 ಪ್ರಕರಣಗಳಲ್ಲಿ ಜಿಂದಾಲ್‌ ಕಾರ್ಖಾನೆಯ ಕಾರ್ಮಿಕರ ಕೊರೊನಾ ಸೋಂಕಿತರ ಸಂಪರ್ಕಿತ 20 ಜನರಲ್ಲಿ ಸೋಂಕು ದೃಢವಾಗಿದೆ. ಇನ್ನು, ಬಳ್ಳಾರಿಯ ನಾಲ್ವರಲ್ಲಿ, ಸಿರುಗುಪ್ಪ ಹಾಗೂ ಹಗರಿಬೊಮ್ಮನಹಳ್ಳಿಯ ತಲಾ ಒಬ್ಬರು ಐಎಲ್‌ಐ ಹಿನ್ನೆಲೆಯಿಂದ ಪಾಸಿಟಿವ್‌ ಬಂದಿದೆ. ಸಂಡೂರಿನ ಇಬ್ಬರು ಸೋಂಕಿತರ ಟ್ರಾವೆಲ್‌ ಹಿಸ್ಟರಿ ಪರಿಶೀಲನೆ ಕಾರ್ಯ ನಡೆದಿದೆ.

ಜಿಂದಾಲ್‌ ಹೆಸರು ಕೇಳಿದ್ರೆ ಎದೆ ಜಲ್..! ಕಾರ್ಖಾನೆಯ 248 ಕಾರ್ಮಿಕರಿಗೆ ಸೋಂಕು..!

ಒಂದು ತಿಂಗಳ ಮಗುವಿಗೆ ಸೋಂಕು
ಬಳ್ಳಾರಿಯ ಐಎಲ್‌ಐ ಪ್ರಕರಣದ ಒಂದು ತಿಂಗಳ ಹೆಣ್ಣು ಮಗು ಸೇರಿ ತಂದೆ, ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದಲ್ಲದೆ, ಜಿಂದಾಲ್‌ ಪಾಸಿಟಿವ್‌ ವ್ಯಕ್ತಿಯ ಸಂಪರ್ಕಿತ ಒಂದು ವರ್ಷದ ಹೆಣ್ಣು ಮಗು, ಬಳ್ಳಾರಿಯ ನಾಲ್ಕು ವರ್ಷದ ಬಾಲಕಿಗೆ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಚಿಕಿತ್ಸೆ ನೀಡುವುದು ವೈದ್ಯರಿಗೆ ಸವಾಲಿನ ಕೆಲಸವಾಗಿದೆ.

ಬಳ್ಳಾರಿಯಲ್ಲಿ ಮತ್ತೆ ಕೊರೊನಾ ಸ್ಫೋಟ..! ಒಂದೇ ದಿನ 65 ಕೇಸ್‌‌, 400 ದಾಟಿದ ಸೋಂಕಿತರ ಸಂಖ್ಯೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ