ಆ್ಯಪ್ನಗರ

ಗಣಿ ಜಿಲ್ಲೆಯಲ್ಲಿ 14 ಸಾವಿರ ಗಡಿ ದಾಟಿದ ಕೊರೊನಾ..! 323 ಹೊಸ ಕೇಸ್‌; 704 ಜನ ಗುಣಮುಖ

ಗಣಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಅಬ್ಬರ ಮುಂದುವರೆದಿದ್ದು, ಭಾನುವಾರದ ಹೊತ್ತಿಗೆ ಬಳ್ಳಾರಿಯಲ್ಲಿ ಸೋಂಕಿತರ ಸಂಖ್ಯೆ 14 ಸಾವಿರದ ಗಡಿ ದಾಟಿದೆ. ಬೆಂಗಳೂರಿನ ನಂತರ ರಾಜ್ಯದಲ್ಲಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆಯಾಗಿದೆ.

Vijaya Karnataka Web 16 Aug 2020, 5:17 pm
ಬಳ್ಳಾರಿ: ಗಣಿ ಜಿಲ್ಲೆಯಲ್ಲಿ ಕೊರೊನಾ ವೈರಸ್‌ನ ಅಬ್ಬರ ಜೋರಾಗಿದ್ದು, ಭಾನುವಾರದ ಹೊತ್ತಿಗೆ ಬಳ್ಳಾರಿಯಲ್ಲಿ ಸೋಂಕಿತರ ಸಂಖ್ಯೆ 14 ಸಾವಿರದ ಗಡಿ ದಾಟಿದೆ. ಇದರೊಂದಿಗೆ ಬೆಂಗಳೂರಿನ ನಂತರ ರಾಜ್ಯದಲ್ಲಿ ಅತಿಹೆಚ್ಚು ಸೋಂಕಿತರನ್ನು ಜಿಲ್ಲೆ ಹೊಂದಿದೆ. ಆದರೆ, ಒಂದೇ ದಿನ 704 ಜನ ಗುಣಮುಖರಾಗಿರುವುದು ಜನತೆಗೆ ಸ್ವಲ್ಪ ಸಮಾಧಾನ ತಂದಿದೆ.
Vijaya Karnataka Web 323 new coronavirus positive cases reported in bellary and crossed 14000 mark
ಗಣಿ ಜಿಲ್ಲೆಯಲ್ಲಿ 14 ಸಾವಿರ ಗಡಿ ದಾಟಿದ ಕೊರೊನಾ..! 323 ಹೊಸ ಕೇಸ್‌; 704 ಜನ ಗುಣಮುಖ


ಭಾನುವಾರ ಕೂಡ 323 ಪಾಸಿಟಿವ್‌ ಕೇಸ್‌ಗಳು ಜಿಲ್ಲೆಯಲ್ಲಿ ಕಂಡುಬಂದಿದ್ದು, ಈ ಹೊಸ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,169ಕ್ಕೆ ಏರಿದೆ. ಇನ್ನು, ಮಾರಣಾಂತಿಕ ಸೋಂಕಿಗೆ 9 ಜನ ಬಲಿಯಾಗಿದ್ದು, ಕೊರೊನಾ ಸಾವಿನ ಸಂಖ್ಯೆ 163ಕ್ಕೇ ಏರಿದೆ.

ಒಂದೇ ದಿನ 704 ಜನರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಮೂಲಕ ಇದುವರೆಗೂ ಜಿಲ್ಲೆಯಲ್ಲಿ ಸೋಂಕಿನಿಂದ ಚೇತರಿಕೆ ಕಂಡವರ ಸಂಖ್ಯೆ 8615ಕ್ಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಇನ್ನೂ 5391 ಸಕ್ರಿಯ ಪ್ರಕರಣಗಳಿದ್ದು, ನಿಗದಿತ ಕೊರೊನಾ ಆಸ್ಪತ್ರೆ ಹಾಗೂ ಹೋಮ್‌ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಳ್ಳಾರಿ: ಬೆಡ್‌ಗಳಿಲ್ಲದೆ ನೆಲದ ಮೇಲೆ ಮಲಗಿರುವ ಸೋಂಕಿತರು!

ಭಾನುವಾರ ಬಳ್ಳಾರಿಯಲ್ಲಿ 128 ಸೋಂಕಿತರು ಕಂಡುಬಂದಿದ್ದರೆ, ಸಂಡೂರು ತಾಲೂಕಿನಲ್ಲಿ 08, ಸಿರುಗುಪ್ಪದಲ್ಲಿ 37, ಹೂವಿನ ಹಡಗಲಿ 50, ಹೊಸಪೇಟೆ 62, ಹಗರಿಬೊಮ್ಮನಹಳ್ಳಿ 06, ಹರಪನಹಳ್ಳಿ 31 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದರೆ, ಅಂತರ್ ಜಿಲ್ಲೆಯ ಒಂದು ಪ್ರಕರಣ ಬಳ್ಳಾರಿಯಲ್ಲಿ ಪತ್ತೆಯಾಗಿದೆ.

'ಬಳ್ಳಾರಿಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ': ಎಚ್ಚರವಿರುವಂತೆ ಸಚಿವ ಆನಂದ್‌ ಸಿಂಗ್‌ ಮನವಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ