ಆ್ಯಪ್ನಗರ

ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ: ಬಳ್ಳಾರಿಯ ನಡುಗಡ್ಡೆಯೊಂದರಲ್ಲಿ ಸಿಲುಕಿದ 4 ಕುರಿಗಾಹಿಗಳು

ಮುಂಗಾರು ಬಳಿಕ ಹಿಂಗಾರು ಮಳೆ ಸಹ ರಾಜ್ಯದಲ್ಲಿ ಹೆಚ್ಚಾಗಿ ಸುರಿಯುತ್ತಿದ್ದು, ಈ ಹಿನ್ನೆಲೆ ಬಳ್ಳಾರಿ ಜಿಲ್ಲೆಯ ನಡುಗಡ್ಡೆಯೊಂದರಲ್ಲಿ ನಾಲ್ವರು ಕುರಿಗಾಹಿಗಳು ಸಿಲುಕಿದ್ದಾರೆ. ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ನೀರು ಹರಿಬಿಟ್ಟ ಕಾರಣ ಈ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಉಪ್ಪಳಗಡ್ಡೆಯ ನಡುಗಡ್ಡೆಯಲ್ಲಿ ಈ ಘಟನೆ ನಡೆದಿದೆ.

Vijaya Karnataka 22 Oct 2019, 3:53 pm
ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ನೀರು ಹರಿಬಿಟ್ಟಿದ್ದರಿಂದ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದ ಉಪ್ಪಳಗಡ್ಡೆಯಲ್ಲಿ ನಾಲ್ಕು ಮಂದಿ ಕುರಿಗಾಹಿ ಸಿಲುಕಿಕೊಂಡಿದ್ದಾರೆ. ಅಲ್ಲದೆ, 600ಕ್ಕೂ ಹೆಚ್ಚು ಕುರಿಗಳ ಹಿಂಡು ಸಹ ಮೃತಪಟ್ಟಿವೆ.
Vijaya Karnataka Web bellary kurigahi


ಕುರಿ ಮೈತೊಳೆಯಲು ಹೋಗಿ ತಂದೆ, ತಾಯಿ, ಮಗ ಸಾವು

ಉಪ್ಪಳಗಡ್ಡೆಯ ನಡುಗಡ್ಡೆಯಲ್ಲಿ ಸಿಲುಕಿರುವ ಕುರಿಗಾಹಿಗಳಾದ ವೀರೇಶ, ಹನುಮಪ್ಪ, ಮುದಿಯಪ್ಪ, ಮೂಕಯ್ಯ ಎಂದು ಗುರುತಿಸಲಾಗಿದೆ. ತುಂಗಭದ್ರಾ ಜಲಾಶಯದಿಂದ 1.50 ಲಕ್ಷ ಕ್ಯೂಸೆಕ್ಸ್ ನೀರು ದಿಢೀರ್ ನದಿಗೆ ನೀರು ಬಿಟ್ಟ ಹಿನ್ನೆಲೆ ನಡುಗಡ್ಡೆಯಲ್ಲಿ ಆ ಕುರಿಗಾಹಿಗಳು ಸಿಲುಕಿದ್ದಾರೆ.

ಬಂಡೆ ಕುಸಿತದ ಭಯದಲ್ಲಿ ಜನ

ಭಾನುವಾರವಷ್ಟೇ ಬಾಗೇವಾಡಿ ಗ್ರಾಮದ ನಿವಾಸಿ ನಾಗಪ್ಪ ಎಂಬುವರ ನಾಲ್ಕು ಮಂದಿ ಪುತ್ರರು ಹಾಗೂ ಆರು ನೂರಕ್ಕೂ ಅಧಿಕ ಕುರಿಗಳ ಹಿಂಡನ್ನು ಹೊಡೆದುಕೊಂಡು ಹೋಗಿದ್ದರು. ಈ ದಿನ ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಬಿಟ್ಟಿದ್ದರಿಂದ ಆ ನಾಲ್ವರು ನಡುಗಡ್ಡೆಯಲ್ಲೇ ಸಿಲುಕಿಕೊಂಡಿದ್ದಾರೆ.

ಮುಂದುವರಿದ ಮಳೆಗೆ ಜನಜೀವನ ತತ್ತರ

ಬಾಗೇವಾಡಿ ಗ್ರಾಮದಲ್ಲಿ ಹನುಮಪ್ಪನ ಗಡ್ಡೆ ಹಾಗೂ ಉಪ್ಪಳಗಡ್ಡೆ ಎಂಬ ಎರಡು ನಡುಗಡ್ಡೆಗಳು ಇವೆ. ಅಲ್ಲದೇ, ವೇದಾವತಿ- ತುಂಗಭದ್ರಾ ಎರಡು ನದಿಗಳ ಸಂಗಮ ಇಲ್ಲಿ ಆಗೋದರಿಂದ ಪ್ರತಿ ವರ್ಷವೂ ಇಲ್ಲಿ ಇಂಥಹದ್ದೆ ಪರಿಸ್ಥಿತಿ ಎದುರಾಗುತ್ತೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಇನ್ನು, ಘಟನೆ ಸಂಬಂಧ ಸ್ಥಳಕ್ಕೆ ಸಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಎಸಿ ರಮೇಶ ಕೋನರೆಡ್ಡಿ ಭೇಟಿ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ