ಆ್ಯಪ್ನಗರ

ಬಳ್ಳಾರಿ: ಮತ್ತೆ 66 ಮಂದಿಗೆ ಕೊರೊನಾ ದೃಢ‌; 1,500 ಗಡಿ ದಾಟಿದ ಸೋಂಕಿತರ ಸಂಖ್ಯೆ

ಗಣಿ ಜಿಲ್ಲೆ ಬಳ್ಳಾರಿ ಕೊರೊನಾ ವೈರಸ್‌ ಪ್ರಭಾವಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಶುಕ್ರವಾರ ಮತ್ತೆ 66 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದು, ಸೋಂಕಿತರ ಸಂಖ್ಯೆ 1500ರ ಗಡಿ ದಾಟಿದೆ. ಮತ್ತೊಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

Vijaya Karnataka Web 10 Jul 2020, 7:17 pm
ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಅಬ್ಬರ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಶುಕ್ರವಾರ ಮತ್ತೆ 66 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿಗೆ ಜಿಲ್ಲೆಯಲ್ಲಿ ಮತ್ತೊಬ್ಬರು ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ.
Vijaya Karnataka Web 66 new coronavirus positive cases reported in last 24 hours
ಬಳ್ಳಾರಿ: ಮತ್ತೆ 66 ಮಂದಿಗೆ ಕೊರೊನಾ ದೃಢ‌; 1,500 ಗಡಿ ದಾಟಿದ ಸೋಂಕಿತರ ಸಂಖ್ಯೆ


ಹೊಸ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1500ರ ಗಡಿ ಮೀರಿದೆ. ಇಲ್ಲಿಯವರೆಗೂ 1,554 ಜನಕ್ಕೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ 41 ಜನ ಸಾವನ್ನಪ್ಪಿದ್ದಾರೆ. ಒಟ್ಟು 1008 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇನ್ನೂ 505 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿದ್ದು, ಹೋಮ್ ಐಸೋಲೇಶನ್‌ನಲ್ಲಿ 46 ಜನರಿದ್ದಾರೆ. ಶುಕ್ರವಾರ ಸಹ 79 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿ 41 ಮೃತರೊಂದಿಗೆ ಬಳ್ಳಾರಿ ಮೂರನೇ ಸ್ಥಾನದಲ್ಲಿದ್ದು, ಮೊದಲೆರಡು ಸ್ಥಾನಗಳಲ್ಲಿ ಬೆಂಗಳೂರು ನಗರ ಹಾಗೂ ಬೀದರ್‌ ಜಿಲ್ಲೆಗಳಿವೆ.

ಬೆಂಗಳೂರಿಂದ ಗುಳೆ ಹೊರಟ ಉದ್ಯೋಗಸ್ಥರು, ಹಳ್ಳಿ ಜನರಿಗೆ ಕೊರೊನಾ ಭೀತಿ

ಇನ್ನು, ಗುರುವಾರ ಕೂಡ ಬಳ್ಳಾರಿಯಲ್ಲಿ 41 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದವು. ಜೊತೆಗೆ ರಾಜ್ಯದಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಶುಕ್ರವಾರ 2313 ಜನರಿಗೆ ಸೋಂಕು ದೃಢವಾಗಿದ್ದು, ಸೋಂಕಿತರ ಸಂಖ್ಯೆ 33,418ಕ್ಕೆ ಏರಿಕೆಯಾಗಿದ್ದರೆ, 57 ಜನ ಕೊರೊನಾಗೆ ಶುಕ್ರವಾರ ಬಲಿಯಾಗುವುದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 541ಕ್ಕೆ ಏರಿದೆ.

ಹಂಪಿ ಸ್ಮಾರಕ ನೋಡುವ ಆಸೆಯೇ..? ಆಧಾರ್‌ ಕಾರ್ಡ್ ಇಲ್ಲದಿದ್ರೆ ನೋ ಎಂಟ್ರಿ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ