ಆ್ಯಪ್ನಗರ

ಅಕ್ರಮ ಆಸ್ತಿ: ನಾನಾ ಕಡೆ ಎಸಿಬಿ ದಾಳಿ

ಗದಗ, ಬಳ್ಳಾರಿ, ರಾಯಚೂರುಗಳಲ್ಲಿ ಆದಾಯ ಮೀರಿದ ಆಸ್ತಿ ಹೊಂದಿರುವ ಅಧಿಕಾರಿಗಳ ನಿವಾಸಗಳು ಮತ್ತು ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅವರ ಸರಕಾರಿ ನಿವಾಸದ ಮೇಲೆ ದಾಳಿ ಕಡತಗಳ ಪರಿಶೀಲನೆ ನಡೆಸಿದರು.

Vijaya Karnataka Web 4 Jan 2018, 1:44 pm
ಬಳ್ಳಾರಿ/ ಚಿತ್ರದುರ್ಗ: ಗದಗ, ಬಳ್ಳಾರಿ,ಬಾಗಲಕೋಟ, ರಾಯಚೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಆದಾಯ ಮೀರಿದ ಆಸ್ತಿ ಹೊಂದಿರುವ ಅಧಿಕಾರಿಗಳ ನಿವಾಸಗಳು ಮತ್ತು ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅವರ ಸರಕಾರಿ ನಿವಾಸದ ಮೇಲೆ ದಾಳಿ ಕಡತಗಳ ಪರಿಶೀಲನೆ ನಡೆಸಿದರು.
Vijaya Karnataka Web acb raid on corrupt officers house
ಅಕ್ರಮ ಆಸ್ತಿ: ನಾನಾ ಕಡೆ ಎಸಿಬಿ ದಾಳಿ


ಬೆಂಗಳೂರಿನಲ್ಲಿ ನಾಲ್ವರು ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿಯಾಗಿದೆ. ರಾಯಚೂರು ನಗರಸಭೆ ಸ್ಯಾನಿಟರಿ ಇನ್ಸಪೆಕ್ಟರ್ ಅಮರೇಶ ಅವರ ಗಂಗಾ ಪರಮೇಶ್ವರಿ ಕಾಲೊನಿಯಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ. ಬಳ್ಳಾರಿ ಉಪವಿಭಾಗಧಿಕಾರಿ ಕುಮಾರಸ್ವಾಮಿ ಅವರಿಗೆ ಸೇರಿರುವ ಚಿತ್ರದುರ್ಗ ನಗರದ ಧವಳಗಿರಿ ಬಡಾವಣೆಯ ನಿವಾಸದ ಮೇಲೂ ಎಸಿಬಿ ದಾಳಿ ನಡೆದಿದೆ. ಬಾಗಲಕೋಟ ಜಿಲ್ಲೆಯ ಮುಧೋಳದಲ್ಲೂ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ಜತೆಗೆ ಗದಗದ ನರಗುಂದ ತಾ.ಪಂ. ಇಒ ನಿವಾಸದಲ್ಲಿ ದಾಖಲೆ ಪರಿಶೀಲನೆ ನಡೆಸಲಾಗಿದೆ.

ವಿಜಯಪುರದ ಜಿಪಂ ಪಂಚಾಯತ್ ರಾಜ್ ಎಂಜಿನೀಯರಿಂಗ್ ಇಲಾಖೆಯ ಅಧೀಕ್ಷಕ ಸೋಮಪ್ಪ ನಾಯಕ್ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ. ಬೆಳಗ್ಗೆ ಬಾರಾಕುಟ್ರಿ ತಾಂಡಾದಲ್ಲಿನ ಮನೆ ಮೇಲೆ ದಾಳಿಯಾಗಿತ್ತು.

ದಾವಣಗೆರೆ ಬೆಸ್ಕಾಂ ನ ಎಇಇ ಜಗದೀಶಪ್ಪ ಅವರ ಮನೆಗಳ ಮೇಲೆ ಎಸಿಬಿ ದಾಳಿ ನಡೆದಿದೆ. ದಾವಣಗೆರೆಯ ಮೂರು ಮನೆಗಳು , ಧಾರವಾಡದಲ್ಲಿ ಎರಡು ಸೈಟ್ ,ತುಮಕೂರು 1 ಸೈಟ್, ಬೆಂಗಳೂರು 1 ಸೈಟ್, ಹೊಸದುರ್ಗ ತಾಲೂಕು ಚಿಕ್ಕಮ್ಮನಹಳ್ಳಿಯಲ್ಲಿ 5 ಎಕರೆ ಜಮೀನು, ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರಿನಲ್ಲಿ 20 ಎಕರೆ ಜಮೀನು ಸೇರಿದಂತೆ ಕೋಟ್ಯಾಂತರ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ದಾಳಿ ಕೈಗೊಳ್ಳಲಾಗಿದೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ದೂರಿನ ಆಧಾರದ ಮೇಲೆ ಎಸಿಬಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಸನದದಲ್ಲಿ ಲೋಕೋಪಯೋಗಿ ಇಲಾಖೆ ಸಕಲೇಶಪುರ ವಿಭಾಗದ ಎಇಇ ವೆಂಕಟೇಶ್ ಮನೆ ಮೇಲೆ ದಾಳಿಯಾಗಿದ್ದು, ,ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದೆ. ವೆಂಕಟೇಶ್ ಹೆಸರಲ್ಲಿ 1 ಮನೆ, 4 ಸೈಟ್, 2ಬೈಕ್,ಅರ್ಧ ಕೆಜಿಗೂ ಹೆಚ್ಚು ಚಿನ್ನ ಪತ್ತೆಯಾಗಿದೆ.

ಹುಬ್ಬಳ್ಳಿಯಲ್ಲಿ ಕೆ. ಪಿ ನಂಜುಂಡಿ ಒಡೆತನದ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ಮೇಲೆ ಐಟಿ ದಾಳಿ ನಡೆದಿದ್ದು, ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ