ಆ್ಯಪ್ನಗರ

ಜೈಲಿಗಟ್ಟುವ 'ಶಾ' ಬೆದರಿಕೆಗೆ ಹೆದರಿ ಆನಂದಸಿಂಗ್‍ ಬಿಜೆಪಿ ಹೊಕ್ಕಿದ್ದು: ಎಚ್‌ಡಿಕೆ ಲೇವಡಿ

ಆನಂದಸಿಂಗ್‍ರನ್ನು ಕೃಷ್ಣ ಜನ್ಮಸ್ಥಾನಕ್ಕೆ ಕಳುಹಿಸುತ್ತೇವೆ ಎಂದು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಹೇಳಿದ ಕಾರಣಕ್ಕಾಗಿ ಆನಂದಸಿಂಗ್ ಬಿಜೆಪಿ ಸೇರಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಲೇವಡಿ ಮಾಡಿದರು.

Vijaya Karnataka Web 25 Nov 2019, 11:04 pm
ಹೊಸಪೇಟೆ(ಬಳ್ಳಾರಿ): ಆನಂದಸಿಂಗ್‍ರನ್ನು ಕೃಷ್ಣ ಜನ್ಮಸ್ಥಾನಕ್ಕೆ ಕಳುಹಿಸುತ್ತೇವೆ ಎಂದು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಹೇಳಿದ ಕಾರಣಕ್ಕಾಗಿ ಆನಂದಸಿಂಗ್ ಬಿಜೆಪಿ ಸೇರಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಲೇವಡಿ ಮಾಡಿದರು.
Vijaya Karnataka Web HDk function


ನಗರದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಅಮಿತ್ ಶಾ, ಜೈಲಿಗೆ ಕಳಹಿಸುತ್ತೇವೆ ಎಂದ ಕಾರಣದಿಂದ ಆನಂದಸಿಂಗ್ ಬಿಜೆಪಿ ಸೇರುವಂತಾಗಿದೆ. ಪಕ್ಷಾಂತರ ಕಾಯ್ದೆಯನ್ನು ಕಾಲಕಸ ಮಾಡಿದ್ದಾರೆ. ಕಳೆದ 2006ರಲ್ಲಿ ಆನಂದಸಿಂಗ್ ತಮ್ಮ ನಿವಾಸಕ್ಕೆ ಚಹಾ ಕುಡಿಯಲು ಕರೆದಿದ್ದರೂ ಆಗ ಅವರ ಮನೆಯಲ್ಲಿ ಕುಳಿತುಕೊಳ್ಳಲು ಚೇರ್ ಕೂಡ ಇರಲ್ಲಿಲ್ಲ. ಇಂದು ಅವರ ಮನೆ ಮತ್ತು ಮನೆ ಕಾಂಪೌಂಡ್ ನೋಡಿ ಬೆರಗಾದೆ. ನನ್ನ ಉಪಕಾರದಿಂದ ಆನಂದಸಿಂಗ್‍ ಇಷ್ಟೊಂದು ಹಣ ಮಾಡಿದ್ದಾರೆ. ಅರಮನೆ ಕಟ್ಟಿಕೊಂಡು ಪಕ್ಕದಲ್ಲಿ ಲೇಔಟ್ ಮಾಡಿಕೊಂಡಿರುವ ಆನಂದಸಿಂಗ್, ಆ ಜಾಗದಲ್ಲಿ ಬಡಜನರಿಗೆ ಮನೆ ಕಟ್ಟಿಕೊಡಬಹುದಿತ್ತು. ತಮ್ಮ ಅರಮನೆಗೆ ಧೂಳು ಬರುತ್ತದೆ ಎಂದು ಅವರು, ಸ್ಥಳೀಯ ಸಕ್ಕರೆ ಕಾರ್ಖಾನೆ ಕೂಡ ಮುಚ್ಚಿದ್ದಾರೆ ಎಂದು ಆರೋಪಿಸಿದರು.

ಯಡಿಯೂರಪ್ಪನವರು ಚುನಾವಣೆ ಪ್ರಚಾರಕ್ಕೆ ಹೋದ ಎಲ್ಲ ಕ್ಷೇತ್ರಗಳನ್ನು ದತ್ತು ತಗೋತಿನಿ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ಅನರ್ಹರಿಗೆ ಕಾಮಧೇನು ಆಗಿದ್ದಾರೆ. ಬೆಟ್ಟಿಂಗ್ ಹಾಗೂ ನೈಟ್ ಕ್ಲಬ್ ಮಾಲೀಕರ ಹಣದಲ್ಲಿ ಅನರ್ಹರನ್ನು ಖರೀದಿ ಮಾಡಿದ್ದಾರೆ. ಅವರು ಸಿಎಂ ಆಗಲು ಎಲ್ಲಾ ಕುತಂತ್ರ ನಡೆಸಿದ್ದರು. ರಾಜ್ಯದಲ್ಲಿ ಈ ಚುನಾವಣೆ ನಡೆಯಲು 17 ಜನ ಅರ್ನಹರು ಮಾತ್ರ ಕಾರಣವಲ್ಲ ಯಡಿಯೂರಪ್ಪ ಕೂಡ ಕಾರಣವಾಗಿದ್ದಾರೆ ಎಂದು ದೂರಿದರು.

ರಾಷ್ಟ್ರೀಯ ಆರೋಗ್ಯ ತಪಾಸಣಾ ದಿನ: ಆರೋಗ್ಯ ತಪಾಸಣೆಯ ಪ್ರತಿಜ್ಞೆ ಮಾಡಿ...

ಸಚಿವ ಶ್ರೀರಾಮುಲು- ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಭೇಟಿ ವಿಚಾರ ಕುರಿತಂತೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಯಾರ್ಯಾರು ಯಾರಿಗೆ ಎಲ್ಲೆಲ್ಲಿ ಶಕ್ತಿ ಇರೊತ್ತೋ ಅವರನ್ನು ಭೇಟಿ ಆಗುವುದು ಸಾಮಾನ್ಯ. ಆದರೆ, ಜಿ.ಟಿ.ದೇವೇಗೌಡ ಅವರು ನನಗಿಂತ ಹಿರಿಯರು ಅನುಭವಿಗಳು, ಅವರ ನಡುವಳಿಕೆಗಳು ಸಾರ್ವಜನಿಕ ಜೀವನದಲ್ಲಿ ಜನರ ಸಂಶಯಕ್ಕೆ ಅವಕಾಶ ನೀಡಬಾರದು. ಈಗ ಬಿಜೆಪಿ- ಕಾಂಗ್ರೆಸ್‍ನ ಮೊದಲ ಸಾಲಿನಲ್ಲಿ ಇರುವ ನಾಯಕರು ಜೆಡಿಎಸ್‍ನವರು. ಪಕ್ಷದಲ್ಲಿ ಬೆಳೆಯುತ್ತಾರೆ ಬಳಿಕ ಬಿಟ್ಟು ಹೋಗುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ರಾಷ್ಟ್ರೀಯ ಸಂವಿಧಾನ ದಿನ : ನೀವು ತಿಳಿಯಲೇಬೇಕಾದ ಸ್ವಾರಸ್ಯಕರ ಅಂಶಗಳಿವು!

ಶಾಸಕ ಜಿ.ಟಿ.ದೇವೇಗೌಡ ನನ್ನನ್ನು ಕರೆತಂದಿದ್ದರು ಎಂಬ ವಿಶ್ವನಾಥ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗ ವಿಶ್ವನಾಥಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರ ಬಗ್ಗೆ ನಾನು ಏಕೆ ಮಾತಾಡಬೇಕು. ಅವರು ಚುನಾವಣೆ ನಂತರ ರಾಜಕೀಯ ನಗಣ್ಯವಾಗುತ್ತಾರೆ ಎಂದರು.

ಪಕ್ಷ ಅಭ್ಯರ್ಥಿ ಎನ್.ಎಮ್.ನಭಿ, ಶಾಸಕ ರಾಜವೆಂಕಟಪ್ಪ ನಾಯಕ, ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ, ವೀರಶಯ್ಯ, ಮೀನಹಳ್ಳಿ ತಾಯಣ್ಣ, ಮುನ್ನ, ಕೆ.ಕೊಟ್ರೇಶ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ