ಆ್ಯಪ್ನಗರ

‘ಬೌದ್ಧಿಕ ಬೆಳವಣಿಗೆಗೆ ಕಲೆ, ಸಾಹಿತ್ಯ, ಸಂಸ್ಕೃತಿ ಪೂರಕ’

ಮನುಷ್ಯನ ಬೌದ್ಧಿಕ ಬೆಳವಣಿಗೆಗೆ ಕಲೆ ಸಾಹಿತ್ಯ ಸಂಸ್ಕೃತಿ ಪೂರಕವಾಗಿದ್ದು ಅವುಗಳನ್ನು ಆರಾಧಿಸಿ ಆಸ್ವಾದಿಸುವ ಕಲಾಸಕ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿ.ಪಂ.ಸದಸ್ಯ ಎಂ.ಎಂ.ಜೆ.ಹರ್ಷವರ್ಧನ ಹೇಳಿದರು.

Vijaya Karnataka 19 Dec 2018, 5:00 am
ಕೊಟ್ಟೂರು : ಮನುಷ್ಯನ ಬೌದ್ಧಿಕ ಬೆಳವಣಿಗೆಗೆ ಕಲೆ ಸಾಹಿತ್ಯ ಸಂಸ್ಕೃತಿ ಪೂರಕವಾಗಿದ್ದು ಅವುಗಳನ್ನು ಆರಾಧಿಸಿ ಆಸ್ವಾದಿಸುವ ಕಲಾಸಕ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿ.ಪಂ.ಸದಸ್ಯ ಎಂ.ಎಂ.ಜೆ.ಹರ್ಷವರ್ಧನ ಹೇಳಿದರು.
Vijaya Karnataka Web art literature and culture supplement for intellectual development
‘ಬೌದ್ಧಿಕ ಬೆಳವಣಿಗೆಗೆ ಕಲೆ, ಸಾಹಿತ್ಯ, ಸಂಸ್ಕೃತಿ ಪೂರಕ’


ಪಟ್ಟಣದ ಪೆನ್‌ ಫ್ರೆಂಡ್ಸ್‌ನಿಂದ ಎಪಿಎಂಸಿ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹಾಸ್ಯೋತ್ಸವ ಉದ್ಘಾಟಿಸಿ ಮಾತನಾಡಿದರು. ನಮ್ಮ ಸಂಸ್ಕೃತಿಯನ್ನು ನಾವೇ ಆಸ್ವಾದಿಸದಿದ್ದಲ್ಲಿ ನಮ್ಮಷ್ಟಕ್ಕೆ ನಾವೇ ಬೌದ್ಧಿಕ ದಿವಾವಳಿತವನ್ನು ಆಹ್ವಾನಿಕೊಂಡಂತಾಗುತ್ತದೆ. ನಮ್ಮ ನಾಡಿನ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳದಿದ್ದರೆ ಮತ್ತೆ ಹೊಸ ಇತಿಹಾಸ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಇತ್ತೀಚೆಗೆ ದೃಶ್ಯ ಮಾಧ್ಯಮಗಳ ಹಾವಳಿಯಿಂದ ನೈಜ ಕಲೆ ನಶಿಸುತ್ತಿದೆ. ಇಂತಹ ಆತಂಕದ ನಡುವೆಯೂ ಪೆನ್‌ ಫ್ರೆಂಡ್ಸ್‌ ತಂಡ ಹಾಸ್ಯೋತ್ಸವದಂತಹ ಕಾರ್ಯಕ್ರಮ ಆಯೋಜಿಸಿ ಕಲಾವಿದರ ಕಲೆಗೆ ಪ್ರಾಮುಖ್ಯತೆ ಇರುವುದನ್ನು ತೋರಿಸಿದ್ದಾರೆ ಎಂದರು.

ಕಲಾವಿದ ಜಿ. ಗೋವಿಂದೇಗೌಡ ಮಾತನಾಡಿ, ನಗೆಯಲ್ಲಿ ಬದುಕು ಬೆಳಕನ್ನು ಅರಳಿಸಿಕೊಳ್ಳುತ್ತ ಚಿಂತಿಸಬೇಕು. ನಮ್ಮನ್ನು ಒತ್ತಡಗಳು ಕಾಡುತ್ತಿದ್ದರೂ ನಗೆಯ ಹವ್ಯಾಸ ರೂಡಿಸಿಕೊಳ್ಳಬೇಕು. ಇದರಿಂದ ದೈಹಿಕ ಮಾನಸಿಕ ಯಾತನೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.

ಎ.ಪಿ.ಎಂ.ಸಿ ಅಧ್ಯಕ್ಷ ಬೂದಿ ಶಿವಕುಮಾರ ಅಧ್ಯಕ್ಷ ತೆ ವಹಿಸಿದ್ದರು. ಜಿ.ಪಂ.ಸದಸ್ಯೆ ಪಿ.ಎಚ್‌.ಉಮಾದೇವಿ ಕೊಟ್ರೇಶ್‌, ಶಿಕ್ಷ ಣ ಸಂಸ್ಥೆ ಕಾರ್ಯದರ್ಶಿ ಬಿ.ಪಂಪಾಪತಿ, ಮುಖಂಡರಾದ ಪಿ.ಎಚ್‌.ದೊಡ್ಡರಾಮಣ್ಣ, ಪಿ.ಸುಧಾಕರ್‌ ಗೌಡ, ಪ್ರಾಭಾರಿ ತಹಸೀಲ್ದಾರ್‌ ಎನ್‌.ಕೆ.ಮಂಜುನಾಥ, ಟಿವಿ ಹಾಸ್ಯ ಕಲಾವಿದರಾದ ಅನೀಶ್‌, ದಿವ್ಯಶ್ರೀ, ವಣೆನೂರು ಮನು, ಸೂರ್ಯ, ಪೆನ್‌ ಪ್ರೆಂಡ್ಸ್‌ ಉತ್ತಂಗಿ ಹೇಮಣ್ಣ ಇದ್ದರು.

ಸಾಮಾಜಿಕ ಸೇವೆಯಲ್ಲಿ ತೊಡಿಗಿಸಿಕೊಂಡಿರುವ ಅನಾಥಾಶ್ರಮದ ರುದ್ರಮ್ಮ ಕೊಟ್ರಸ್ವಾಮಿ, ತಹಸೀಲ್ದಾರ್‌ ಎಚ್‌.ತಿಮ್ಮಣ್ಣ ಉಜ್ಜಯಿನಿ, ಎಂಜಿನಿಯರಿಂಗ್‌ ವರ್ಕ್ಸ್‌ನ ವಿಜಯಕುಮಾರ ಚೌಹಾಣ್‌, ರಕ್ತದಾನಿ ರಾಜೇಶ್‌ ಕಾರ್ವ ಅವರನ್ನು ಸನ್ಮಾನಿಸಲಾಯಿತು. ಪೆನ್‌ ಪ್ರೆಂಡ್ಸ್‌ ಅಧ್ಯಕ್ಷ ಜಿ.ಸೋಮಶೇಖರ ಪ್ರಾಸ್ತಾವಿಕ ಮಾತನಾಡಿದರು. ಎಸ್‌.ಎಂ.ಮರುಳಸಿದ್ದಯ್ಯ, ಸಿ.ಎಂ.ಸಿಂಧು ಗಿರೀಶ್‌, ನಿರ್ವಹಿಸಿದರು. ನಂತರ ಕಾಮಿಡಿ ಕಿಲಾಡಿ ಕಲಾವಿದರು ನಾನಾ ಹಾಸ್ಯ ಪ್ರಸಂಗಗಳನ್ನು ಪ್ರದರ್ಶಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ