Please enable javascript.ಪುರಂದರ ಉತ್ಸವ ಜ.30ರಿಂದ - ಪುರಂದರ ಉತ್ಸವ ಜ.30ರಿಂದ - Vijay Karnataka

ಪುರಂದರ ಉತ್ಸವ ಜ.30ರಿಂದ

Vijaya Karnataka Web 30 Jan 2014, 4:00 am
Subscribe

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ಜಿಲ್ಲಾಡಳಿತ ನೇತೃತ್ವದಲ್ಲಿ ಶ್ರೀ ಪುರಂದರ ಉತ್ಸವ, ಜ.30 ಮತ್ತು 31ರಂದು ಜರುಗಲಿದೆ.

 30
ಪುರಂದರ ಉತ್ಸವ ಜ.30ರಿಂದ
ಹೊಸಪೇಟೆ; ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ಜಿಲ್ಲಾಡಳಿತ ನೇತೃತ್ವದಲ್ಲಿ ಶ್ರೀ ಪುರಂದರ ಉತ್ಸವ, ಜ.30 ಮತ್ತು 31ರಂದು ಜರುಗಲಿದೆ.

ಜ.30ರ ಬೆಳಗ್ಗೆ 8 ಗಂಟೆಗೆ ಹಂಪಿ ನದಿ ತೀರದ ಬಳಿ ಶ್ರೀ ಪುರಂದರ ಮಂಟಪದಲ್ಲಿ ಬಳ್ಳಾರಿಯ ಕಲಾವಿದೆ ಬಿ.ವಿ.ಸರೋಜಾ ಮತ್ತು ತಂಡದವರಿಂದ ಪೂಜೆ ಹಾಗೂ ದಾಸ ಕೀರ್ತನೆಗಳ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಅಂದು ಸಂಜೆ 5ಕ್ಕೆ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದ ಶ್ರೀ ಪುರಂದರ ವೇದಿಕೆಯಲ್ಲಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜ.31ರಂದು ಸಂಜೆ 5ಕ್ಕೆ ಜರುಗಲಿರುವ ಸಮಾರೋಪ ಸಮಾರಂಭದಲ್ಲಿ ಸಂಶೋಧಕ ಡಾ.ಕಷ್ಣ ಕೊಲ್ಹಾರ ಕುಲಕರ್ಣಿ ಸಮಾರೋಪ ಭಾಷಣ ಮಾಡಲಿದ್ದಾರೆ. ಎರಡು ದಿನಗಳ ಉತ್ಸವದಲ್ಲಿ ನಾಡಿನ ಪ್ರಸಿದ್ಧ ಕಲಾವಿದರು, ನೃತ್ಯ, ಗಾಯನ, ನಾಟಕ ಪ್ರದರ್ಶನ ನಡೆಸಿಕೊಡಲಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ