ಆ್ಯಪ್ನಗರ

ಬಿಎಸ್‌ವೈ ರಾಜ್ಯ ರಾಜಕಾರಣದ ಚಾಣಕ್ಯ: ಬಳ್ಳಾರಿಯಲ್ಲಿ ಸಚಿವ ಆನಂದ್‌ ಸಿಂಗ್‌ ಬಣ್ಣನೆ

ಬಿ.ಎಸ್‌.ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ವಿಜಯನಗರ ಭವಿಷ್ಯ ಬರೆಯುವ ಏಕೈಕ ವ್ಯಕ್ತಿಯಾಗಿದ್ದಾರೆ ಅವರು ರಾಜ್ಯ ರಾಜಕಾರಣದ ಚಾಣಕ್ಯ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಬಣ್ಣಿಸಿದ್ದಾರೆ.

Vijaya Karnataka Web 27 Nov 2020, 4:11 pm
ಹೊಸಪೇಟೆ: ಬೃಹತ್‌ ನೀರಾವರಿ ಯೋಜನೆ ಜಾರಿಗೆ ತರುವ ಮೂಲಕ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಅವರು ರಾಜ್ಯ ರಾಜಕಾರಣದ ಚಾಣಕ್ಯರಾಗಿದ್ದಾರೆ. ವಿಜಯನಗರ ಭವಿಷ್ಯ ಬರೆಯುವ ಏಕೈಕ ವ್ಯಕ್ತಿಯಾಗಿದ್ದಾರೆ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಬಣ್ಣಿಸಿದರು.
Vijaya Karnataka Web Anand singh


ತಾಲೂಕಿನ ಪಾಪಿನಾಯಕನ ಹಳ್ಳಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೃಹತ್‌ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ವರ್ಚುವಲ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ''ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದ ನಮ್ಮೆಲ್ಲ ಶಾಸಕರಿಗೆ ಈ ಮುಂಚೆ ನೀಡಿದ ಭರವಸೆಗಳನ್ನೆಲ್ಲ ಈಡೇರಿಸಿದ್ದಾರೆ. ಈ ನೀರಾವರಿ ಯೋಜನೆ ಜಾರಿಗೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ಇಡೀ ದೇಶ ಕೋವಿಡ್‌ನಿಂದ ನಲುಗುತ್ತಿದೆ. ಆದರೂ ರಾಜ್ಯದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿಲ್ಲ. ಇನ್ನೂ ಎರಡೂವರೆ ವರ್ಷ ಬಿ.ಎಸ್‌.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ಮುಂದಿನ ಚುನಾವಣೆಯಲ್ಲೂಅವರ ಮಾರ್ಗದರ್ಶನದಲ್ಲಿಪಕ್ಷವನ್ನು ಗೆಲ್ಲಿಸಿಕೊಡುತ್ತೇವೆ. ವಿಜಯನಗರದ ಭವಿಷ್ಯ ಅವರ ಕೈಯಲ್ಲಿದೆ. ಪಿಚ್ಚರ್‌ ಅಭಿ ಬಾಕಿ ಹೈ'' ಎಂದ ಅವರು, ಭಾಷಣದ ಕೊನೆಯಲ್ಲಿ''ಜೈ ವಿಜಯನಗರ ಜೈಜೈ ವಿಜಯನಗರ'' ಎಂದರು.

ವದಂತಿಗೆ ಕಿವಿಗೊಡಬೇಡಿ
ಹೋಸಪೇಟೆ: ''ಬಳ್ಳಾರಿ ವಿಭಜನೆಯಾಗಿ ವಿಜಯನಗರ ಹೊಸ ಜಿಲ್ಲೆಯಾದರೆ ಕಲ್ಯಾಣ ಕರ್ನಾಟಕ ಭಾಗದ 371ಜೆ ವಿಶೇಷ ಸೌಲಭ್ಯಕ್ಕೆ ಧಕ್ಕೆ ಬರಲಿದೆ. ಬಳ್ಳಾರಿಯಿಂದ ಹಂಪಿ, ತುಂಗಾಭದ್ರಾ ಜಲಾಶಯ ಹೋಗಿಬಿಡುತ್ತವೆ. ರೈತರಿಗೆ ತೊಂದರೆಯಾಗುತ್ತದೆ ಎಂಬುದೆಲ್ಲಸುಳ್ಳು. ಭಾವನಾತ್ಮಕವಾಗಿ ನಾವೆಲ್ಲರೂ ಒಂದೇ. ಸಾಮಾಜಿಕ ಜಾಲತಾಣದ ವದಂತಿಗಳಿಗೆ ಯಾರೂ ಕಿವಿಗೊಡಬಾರದು'' ಎಂದು ಸಚಿವ ಆನಂದ್‌ ಸಿಂಗ್‌ ಕೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ