ಆ್ಯಪ್ನಗರ

‘ನಿರ್ಭೀತಿಯಿಂದ ಹಕ್ಕು ಚಲಾಯಿಸಿ’

ದುರ್ಬಲ ವರ್ಗದವರು ತಮ್ಮತಮ್ಮ ಮತಗಟ್ಟೆಗಳಿಗೆ ನಿರ್ಭೀತಿಯಿಂದ ಬಂದು ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾತ್‌ ಮನೋಹರ್‌ ಹೇಳಿದರು.

Vijaya Karnataka Web 20 Apr 2018, 5:00 am
ಬಳ್ಳಾರಿ : ದುರ್ಬಲ ವರ್ಗದವರು ತಮ್ಮತಮ್ಮ ಮತಗಟ್ಟೆಗಳಿಗೆ ನಿರ್ಭೀತಿಯಿಂದ ಬಂದು ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾತ್‌ ಮನೋಹರ್‌ ಹೇಳಿದರು.
Vijaya Karnataka Web claim by fearlessness
‘ನಿರ್ಭೀತಿಯಿಂದ ಹಕ್ಕು ಚಲಾಯಿಸಿ’


ಗ್ರಾಮೀಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಇಬ್ರಾಹಿಂಪುರ, ಬಂಡಿಹಟ್ಟಿ, ರಾಮನಗರ, ಜಾಗೃತಿನಗರ, ಕೆ.ಕೆ.ಹಾಳು ಮತಗಟ್ಟೆ ಕೇಂದ್ರಗಳಿಗೆ ಬುಧವಾರ ಎಸ್ಪಿ ಅರುಣ್‌ ರಂಗರಾಜನ್‌ ಜತೆಯಲ್ಲಿ ಭೇಟಿ ನೀಡಿ ಮಾತನಾಡಿದರು. ದುರ್ಬಲ ವರ್ಗದ, ಹಿಂದುಳಿದ ಸಮುದಾಯದ ಕಾಲೊನಿ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾರರಿಗೆ ಧೈರ್ಯತುಂಬಿದರು.

ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಜೀವ ಬೆದರಿಕೆ, ಒತ್ತಡ, ಆಮಿಷವೊಡ್ಡುವ ಅಥವಾ ಪ್ರಭಾವ ಬೀರುವ ಅಭ್ಯರ್ಥಿಗಳ ಹಾಗೂ ಹಿಂಬಾಲಕರ ವಿರುದ್ಧ ನೇರವಾಗಿ ಚುನಾವಣೆ ಆಯೋಗದ ಅಧಿಕಾರಿಗಳಿಗೆ ದೂರು ನೀಡಬಹುದು. ದೂರು ಸ್ವೀಕಾರವಾದರೆ, ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮೀಣ ವಿಧಾನಸಭೆ ಕ್ಷೇತ್ರದ ಚುನಾವಣಾಧಿಕಾರಿ ಪ್ರವೀಣ ಪಿ.ಬಾಗೇವಾಡಿ, ಸಹಾಯಕ ಚುನಾವಣಾಧಿಕಾರಿ ಸಿ.ಎಸ್‌.ಭಂಗಿ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ