ಆ್ಯಪ್ನಗರ

ಸಚಿವರೊಂದಿಗೆ ಸಮಾಲೋಚನಾ ಸಭೆ

ಪಟ್ಟಣದಲ್ಲಿನ ಅಕ್ಕಿ ಗಿರಣಿ ಮಾಲೀಕರು ಸಣ್ಣ ಕೈಗಾರಿಕೆ ಸಚಿವ ಎಸ್‌.ಆರ್‌.ಶ್ರೀನಿವಾಸ ಜತೆ ಬುಧವಾರ ಸಮಾಲೋಚನಾ ಸಭೆ ನಡೆಸಿದರು.

Vijaya Karnataka 27 Jul 2018, 5:00 am
ಕಂಪ್ಲಿ : ಪಟ್ಟಣದಲ್ಲಿನ ಅಕ್ಕಿ ಗಿರಣಿ ಮಾಲೀಕರು ಸಣ್ಣ ಕೈಗಾರಿಕೆ ಸಚಿವ ಎಸ್‌.ಆರ್‌.ಶ್ರೀನಿವಾಸ ಜತೆ ಬುಧವಾರ ಸಮಾಲೋಚನಾ ಸಭೆ ನಡೆಸಿದರು.
Vijaya Karnataka Web conference meeting with the minister
ಸಚಿವರೊಂದಿಗೆ ಸಮಾಲೋಚನಾ ಸಭೆ


ಅಕ್ಕಿಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ಹೊಸ ಮತ್ತು ಹಳೆ ಅಕ್ಕಿಗಿರಣಿಗಳಿಗೆ ಅಕ್ಕಿ ಮಾರಾಟದ ಮೇಲೆ ಏಕರೂಪದ ಸೇವಾಶುಲ್ಕ ವಿಧಿಸಬೇಕು. ಅಕ್ಕಿಗಿರಣಿಗಳಿಗೆ ಕನಿಷ್ಠ ನಿಗದಿತ ವಿದ್ಯುತ್‌ ಶುಲ್ಕ ಪದ್ಧತಿ ಕೈಬಿಡಬೇಕು. ಇದರಿಂದ ಚಾಲನೆ ಇಲ್ಲದಿದ್ದರೂ ಹೆಚ್ಚು ವಿದ್ಯುತ್‌ ಬಿಲ್‌ ಪಾವತಿಸುವಂತಾಗಿದೆ. ಬಳಸಿದ ವಿದ್ಯುತ್‌ಗೆ ಶುಲ್ಕ ವಿಧಿಸುವಂತಾಗಬೇಕು ಎಂದರು. ಸಭೆಯಲ್ಲಿ ಸಚಿವರನ್ನು ಹಾಗೂ ಶಾಸಕ ಜೆ.ಎನ್‌.ಗಣೇಶ್‌ ಅವರನ್ನು ಗೌರವಿಸಿದರು. ಅಕ್ಕಿಗಿರಣಿ ಮಾಲೀಕರಾದ ಡಿ.ವಿ.ಸುಬ್ಬಾರಾವ್‌, ಗರಡಿ ಈರಣ್ಣ, ಜಿ.ರಾಜಾರಾವ್‌, ಎಂ.ಬಾಲ ವೆಂಕಟೇಶ್‌, ಉಬಾಳೆ ತುಳಸಿರಾಮ್‌, ಜಿ.ವಿ.ಸತ್ಯನಾರಾಯಣಬಾಬು, ಕೇದಾರೇಶ್ವರ, ತಹಸೀಲ್ದಾರ್‌ ಶರಣಮ್ಮ, ಪುರಸಭೆ ಅಧ್ಯಕ್ಷ ಎಂ.ಸುಧೀರ್‌, ಜಿ.ಪಂ ಸದಸ್ಯ ಕೆ.ಶ್ರೀನಿವಾಸರಾವ್‌, ಎಂ.ಸಿ.ಮಾಯಪ್ಪ, ಅಯೋದಿ ವೆಂಕಟೇಶ, ಕೊಟ್ಟೂರು ರಮೇಶ, ಬಿ.ಚನ್ನಬಸವ ಇತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ