ಆ್ಯಪ್ನಗರ

ಕೊರೊನಾ ವಾರಿಯರ್ಸ್‌ಗಳಿಗೆ ಸಿಗದ ಸಂಬಳ; ವಿಮ್ಸ್‌ ಆಸ್ಪತ್ರೆ ನಿರ್ದೇಶಕರ ಕಚೇರಿ ಮುಂದೆ ಧರಣಿ

ಕೊರೊನಾ ವಾರಿಯರ್ಸ್‌ಗಳಿಗೆ ಸಂಬಳ ನೀಡದೆ ಸತಾಯಿಸುತ್ತಿರುವ ಘಟನೆಯೂ ನಮ್ಮ ರಾಜ್ಯದಲ್ಲೇ ನಡೆಯುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿರುವ ವಿಮ್ಸ್ ಆಸ್ಪತ್ರೆಯಲ್ಲಿ ಸಂಬಳ ಸಿಗದ ಕಾರಣ ಕೊರೊನಾ ವಾರಿಯರ್ಸ್ ಪ್ರತಿಭಟನೆಗೆ ಇಳಿದಿದ್ದಾರೆ. ವಿಮ್ಸ್‌ನಲ್ಲಿ ಹೊರಗುತ್ತಿಗೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನರ್ಸ್‌ಗಳಿಗೆ ಕಳೆದ ಆರು ತಿಂಗಳುಗಳಿಂದ ಸಂಬಳ ಸಿಕ್ಕಿಲ್ಲ.

Vijaya Karnataka Web 7 Jul 2020, 11:50 am
ಬಳ್ಳಾರಿ: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಅಂತಾನೇ ಕರೆಯಲಾಗುತ್ತಿದೆ. ಮಾರಣಾಂತಿಕ ಕಾಯಿಲೆಯ ವಿರುದ್ಧ ಹೋರಾಡ್ತಿರೋ ಜನರನ್ನು ಆರೈಕೆ ಮಾಡುತ್ತಿರುವ ಅವರು ನಿಜಕ್ಕೂ ವಾರಿಯರ್ಸ್‌ಗಳೇ ಆಗಿದ್ದಾರೆ. ಆದ್ರೆ ಅದೇ ವಾರಿಯರ್ಸ್‌ಗಳಿಗೆ ಸಂಬಳ ನೀಡದೆ ಸತಾಯಿಸುತ್ತಿರುವ ಘಟನೆಯೂ ನಮ್ಮ ರಾಜ್ಯದಲ್ಲೇ ನಡೆಯುತ್ತಿದೆ.
Vijaya Karnataka Web Corona Warriors in Bellary


ಬಳ್ಳಾರಿ ಸಂಡೇ ಲಾಕ್‌ಡೌನ್‌: ಗಡಿ ಚೆಕ್‌ಪೋಸ್ಟ್‌ಗಳಿಗೆ ಎಸ್‌ಪಿ ದಿಢೀರ್‌‌ ಸೈಕಲ್‌ ವಿಸಿಟ್‌

ಬಳ್ಳಾರಿ ಜಿಲ್ಲೆಯಲ್ಲಿರುವ ವಿಮ್ಸ್ ಆಸ್ಪತ್ರೆಯಲ್ಲಿ ಸಂಬಳ ಸಿಗದ ಕಾರಣ ಕೊರೊನಾ ವಾರಿಯರ್ಸ್ ಪ್ರತಿಭಟನೆಗೆ ಇಳಿದಿದ್ದಾರೆ. ವಿಮ್ಸ್‌ನಲ್ಲಿ ಹೊರಗುತ್ತಿಗೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನರ್ಸ್‌ಗಳು ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ಕಳೆದ ಆರು ತಿಂಗಳುಗಳಿಂದ ಸಂಬಳ ಸಿಕ್ಕಿಲ್ಲ. ಹೀಗಾಗಿ ಬೇಸರಗೊಂಡಿರುವ ನರ್ಸ್‌ಗಳು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಕೊರೊನಾ ಸಂಕಷ್ಟ: ಪಪ್ಪಾಯಿ ಬೆಳೆದ ರೈತ ಬಡಪಾಯಿಯಾದ

ಇನ್ನೊಂದೆಡೆ ವಿಮ್ಸ್‌ನಲ್ಲಿ ನರ್ಸ್‌ಗಳಿಗೆ ಕೊರೊನಾ ಪಾಸಿಟಿವ್ ಕಂಡು ಬಂದರೂ ಅವರ ಪ್ರಾಥಮಿಕ ಸಂಪರ್ಕ ಹೊಂದಿವರಿಂದ ಕೆಲಸ ಮಾಡಿಸಲಾಗ್ತಿದೆ ಎಂದು ಆರೋಪಿಸಲಾಗಿದ್ದು, ವಿಮ್ಸ್‌ ಆಸ್ಪತ್ರೆಯ ಆಡಳಿತ ಮಂಡಳಿ ಕೊರೊನಾ ಕಿಟ್‌ಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಹೇಳಲಾಗ್ತಿದೆ.

'ಕೊರೊನಾ ಟೆಸ್ಟ್‌ಗೆ ವೇಗ ನೀಡಲು ಬಳ್ಳಾರಿಗೆ 10 ಸಾವಿರ ಆಂಟಿಜೆನ್‌ ಕಿಟ್': ಆರೋಗ್ಯ ಸಚಿವ

ಬಾಕಿ ಉಳಿಸಿರುವ ಸಂಬಳವನ್ನು ಕೂಡಲೇ ನೀಡಬೇಕೆಂದು ಪ್ರತಿಭಟನಾ ನಿರತ ನರ್ಸ್‌ಗಳು ಆಗ್ರಹಿಸಿದ್ದು, ದುಡ್ಡಿಲ್ಲದೆ ಜೀವನ ನಡೆಸೋಕೆ ಕಷ್ಟ ಆಗ್ತಿದೆ. ಕಳೆ ಆರು ತಿಂಗಳಿಂದ ಸಂಬಳವಿಲ್ಲದೆ ಕೆಲಸ ಮಾಡುತ್ತಾ ಬಂದಿದ್ದೇವೆ. ಇಂತಹ ಸಂಕಷ್ಟದ ಸಮಯದಲ್ಲಿ ನಮಗೆ ಸಂಬಳ ನೀಡಲೇಬೇಕೆಂದು ವಿಮ್ಸ್‌ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆಗೆ ಕುಳಿತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ