ಆ್ಯಪ್ನಗರ

ಕೊರೊನಾ ಎಫೆಕ್ಟ್‌: ಕೊಳ್ಳುವವರಿಲ್ಲದೆ ಕೊಳೆಯುತ್ತಿವೆ ಅಂಜೂರ, ದಾಳಿಂಬೆ, ಕಲ್ಲಂಗಡಿ!

ಕೊರೊನಾ ಸೋಂಕು ಹಿನ್ನೆಲೆ ಬೆಳೆಯಲಾದ ಪಪ್ಪಾಯ, ಅಂಜೂರ, ದಾಳಿಂಬೆ, ಕಲ್ಲಂಗಡಿ ಸೇರಿ ನಾನಾ ತೋಟಗಾರಿಕೆ ಬೆಳೆಗಳು ನಷ್ಟವಾಗಿದ್ದು, ರೈತರನ್ನು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ, ಸಾಗಣೆ ಸೌಲಭ್ಯವಿಲ್ಲದೆ ರೈತರು ನಾನಾ ಸಂಕಷ್ಟ ಅನುಭವಿಸುವಂತಾಗಿದೆ.

Vijaya Karnataka Web 30 Mar 2020, 9:08 am
ಮಾರುತಿ ಸುಣಗಾರ
Vijaya Karnataka Web Fruits and vegetables


ಬಳ್ಳಾರಿ: ಕೊರೊನಾ ವೈರಸ್ ಸೋಂಕು, ಜನರ ಮೇಲಷ್ಟೇ ಅಲ್ಲ ತೋಟಗಾರಿಕೆ ಬೆಳೆಗಳಾದ ಪಪ್ಪಾಯ, ಅಂಜೂರ, ದಾಳಿಂಬೆ, ಕಲ್ಲಂಗಡಿ ಸೇರಿ ನಾನಾ ಬೆಳೆಗಳ ಮೇಲೂ ಕೆಟ್ಟ ಪರಿಣಾಮಬೀರಿದೆ. ಫಸಲು ಉಳಿಸಿಕೊಳ್ಳಲಾಗದ ರೈತರು, ತೀವ್ರ ನಷ್ಟದ ಭೀತಿಗೆ ಸಿಲುಕಿದ್ದಾರೆ.

ಜಿಲ್ಲೆಯಲ್ಲಿ ಬೆಳೆಯಲಾದ ನಾನಾ ತೋಟಗಾರಿಕೆ ಬೆಳೆಗಳು ಸದ್ಯ ಕಟಾವು ಹಂತಕ್ಕೆ ಬಂದಿವೆ. ಇಲ್ಲಿನ ಬೆಳೆಗಳಿಗೆ ಜಿಲ್ಲೆ, ರಾಜ್ಯ ಸೇರಿ ದೇಶ, ವಿದೇಶಕ್ಕೂ ರಫ್ತುಮಾಡಲಾಗುತ್ತಿತ್ತು. ಉತ್ತಮ ಇಳುವರಿ, ಬೆಲೆಯಿದ್ದರೂ ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಪರಿಣಾಮದಿಂದ ಇಡೀ ದೇಶವೇ ಸ್ತಬ್ಧವಾಗಿದೆ. ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ, ಸಾಗಣೆ ಸೌಲಭ್ಯವಿಲ್ಲದೆ ರೈತರು ನಾನಾ ಸಂಕಷ್ಟ ಅನುಭವಿಸುವಂತಾಗಿದೆ.

ಕೊಳೆಯುತ್ತಿರುವ ಬೆಳೆ:

ಜಿಲ್ಲೆಯ ಕುರುಗೋಡು, ಸಿರುಗುಪ್ಪ, ಕೂಡ್ಲಿಗಿ, ಕಂಪ್ಲಿ, ಬಳ್ಳಾರಿ ತಾಲೂಕು ಸೇರಿ ನಾನಾ ಭಾಗಗಳಲ್ಲಿಬೆಳೆದ ಪಪ್ಪಾಯ, ದಾಳಿಂಬೆ, ಕಲ್ಲಂಗಡಿ, ಅಂಜೂರ ಸೇರಿ ವಿವಿಧ ಬೆಳೆಗಳು ಕಳೆದ ಒಂದು ವಾರದಿಂದ ಕಟಾವು ಹಂತಕ್ಕೆ ಬಂದಿವೆ. ಈ ಹಿಂದೆ ಕೊಯ್ಲುಮಾಡಿದ ಹಣ್ಣುಗಳನ್ನು ವರ್ತಕರು ಹೊಲದಲ್ಲಿಯೇ ಖರೀದಿಸಿ ಒಯ್ಯುತ್ತಿದ್ದರು. ಆದರೆ ಈ ಬಾರಿ ಖರೀದಿಗೆ ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಮಾರುಕಟ್ಟೆಗೆ ಸಾಗಿಸಲು ವಾಹನಗಳು ಸಿಗುತ್ತಿಲ್ಲ. ಹೀಗಾಗಿ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಫಸಲು ಹೊಲದಲ್ಲಿಯೇ ನಾಶವಾಗುವ ಭೀತಿ ಎದುರಾಗಿದೆ. ದಿನದಿಂದ ದಿನಕ್ಕೆ ಪಪ್ಪಾಯ, ಅಂಜೂರ, ಕಲ್ಲಂಗಡಿ ಹಣ್ಣುಗಳು ಕೊಳೆತು ಮಣ್ಣು ಸೇರುತ್ತಿವೆ.

ಕೊರೊನಾ ಸೈಡ್‌ ಎಫೆಕ್ಟ್‌ : ಹೆಚ್ಚುತ್ತಿದೆ ಮನೋವ್ಯಾಧಿ, ಬೇಕಿದೆ ಕೌನ್ಸೆಲಿಂಗ್‌


ನೆರವಿಗೆ ಧಾವಿಸಲು ಒತ್ತಾಯ:
ಉತ್ತಮ ಇಳುವರಿಯ ಕನಸಲ್ಲಿಗೊಬ್ಬರ ಸೇರಿ ನಾನಾ ಕ್ರಮಗಳನ್ನು ಅನುಸರಿಸುವ ಮೂಲಕ ಬೆಳೆ ಬೆಳೆಯಲಾಗಿದೆ. ಆದರೆ ಕೊರೊನಾ ಸೋಂಕಿನಿಂದ ಮಾರುಕಟ್ಟೆಯೇ ಸ್ತಬ್ಧವಾಗಿದೆ. ಸಂಕಷ್ಟ ಅನುಭವಿಸುತ್ತಿರುವ ತಮ್ಮ ನೆರವಿಗೆ ರಾಜ್ಯ ಸರಕಾರ ಧಾವಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

ಕೊರೊನಾ ವೈರಸ್ ಲೈವ್ ಅಪ್ಡೇಟ್ಸ್: ದೇಶದಲ್ಲಿ ಸಾವಿರ ದಾಟಿದ ಸೋಂಕಿತರು!

ಕಳೆದ ಜುಲೈ, ಆಗಸ್ಟ್‌ನಲ್ಲಿಬೆಳೆದ ಪಪ್ಪಾಯ ಇಳುವರಿ ಬಂದಿದೆ. ಆದರೆ, ಕೊರೊನಾ ವೈರಸ್‌ನಿಂದಾಗಿ ಮಾರುಕಟ್ಟೆ ಸೌಲಭ್ಯವಿಲ್ಲದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪಪ್ಪಾಯ ಬೆಳೆ ಬೆಳೆಯಲು ಪ್ರತಿ ಎಕರೆಗೆ 2.50ಲಕ್ಷ ರೂ. ವ್ಯಯಿಸಲಾಗಿದೆ. ಈಗ ಬೆಳೆ ಇದ್ದರೂ ಹಣ ಕೈಸೇರದಂತಾಗಿದೆ. ಸರಕಾರ ಈ ಬಗ್ಗೆ ಗಮಹರಿಸಿ ರೈತರಿಗೆ ಮಾರುಕಟ್ಟೆ ವ್ಯವಸ್ಥೆ, ಸಾಗಣೆಗೆ ವಾಹನ ಸೌಲಭ್ಯ ಕಲ್ಪಿಸಬೇಕು.
- ಶ್ರೀನಿವಾಸ, ರೈತ, ಕುರುಗೋಡು

ಸಾವನ್ನೇ ಗೆದ್ದು ಬೀಗಿದ ಸಂಭ್ರಮ : ಈ ಕತೆ ಕೇಳಿದರೆ ತುಂಬುತ್ತದೆ ಹೃದಯ

ಹಣ್ಣಿನ ಬೆಳೆಗಳನ್ನು ಜಿಲ್ಲಾಡಳಿತ ನಿಗದಿಪಡಿಸಿದ ಸ್ಥಳಗಲ್ಲಿಮಾರಾಟ ಮಾಡಲು ಹಾಗೂ ವಾಹನ ಸೌಲಭ್ಯಕ್ಕಾಗಿ ಆಯಾ ತಾಲೂಕಿನ ತಹಸೀಲ್ದಾರ್‌ ಅವರ ಅನುಮತಿ ಪಡೆಯಬಹುದಾಗಿದೆ. ಮೆಣಸಿನಕಾಯಿ ದಾಸ್ತಾನಿಗೆ ರೈತರು ಕೋಲ್ಡ್‌ ಸ್ಟೋರೆಜ್‌ ಸದುಪಯೋಗ ಪಡೆದುಕೊಳ್ಳಬೇಕು.

- ಎಸ್‌.ಪಿ.ಬೋಗಿ, ಡಿಡಿ, ತೋಟಗಾರಿಕೆ ಇಲಾಖೆ, ಬಳ್ಳಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ