ಆ್ಯಪ್ನಗರ

ಬಳ್ಳಾರಿಯಲ್ಲಿ ತಗ್ಗದ ಕೊರೊನಾ ಅಬ್ಬರ..! ಒಂದೇ ದಿನ 681 ಪಾಸಿಟಿವ್‌ ಕೇಸ್‌, 8 ಜನ ಸಾವು

ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದೆ. ಸದ್ಯಕ್ಕೆ ಸೋಂಕಿನ ತೀವ್ರತೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಜಿಲ್ಲೆಯಲ್ಲಿ ಕಾಣುತ್ತಿಲ್ಲ. ಒಂದೇ ದಿನ 681 ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿವೆ. 629 ಜನ ಚೇತರಿಸಿಕೊಂಡಿರುವುದು ಸಮಾಧಾನ ತಂದಿದೆ.

Vijaya Karnataka Web 19 Aug 2020, 4:54 pm
ಬಳ್ಳಾರಿ: ಗಣಿ ನಾಡಿನಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಬುಧವಾರ ಮತ್ತೆ 681 ಹೊಸ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದು, 8 ಜನ ಸೋಂಕಿಗೆ ಬಲಿಯಾಗಿರುವುದು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ. ಆದರೆ, ಬುಧವಾರ 629 ಜನ ಚೇತರಿಸಿಕೊಂಡಿರುವುದು ಜನಕ್ಕೆ ತುಸು ಸಮಾಧಾನ ತಂದಿದೆ.
Vijaya Karnataka Web coronavirus in bellary 681 new positive cases reported in last 24 hours
ಬಳ್ಳಾರಿಯಲ್ಲಿ ತಗ್ಗದ ಕೊರೊನಾ ಅಬ್ಬರ..! ಒಂದೇ ದಿನ 681 ಪಾಸಿಟಿವ್‌ ಕೇಸ್‌, 8 ಜನ ಸಾವು


ಹೊಸ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,753ಕ್ಕೆ ಏರಿದೆ. ಇದುವರೆಗೂ ಬಳ್ಳಾರಿಯಲ್ಲಿ ಕೊರೊನಾ ವೈರಸ್‌ ಕಾರಣದಿಂದ ಮೃತಪಟ್ಟವರ ಸಂಖ್ಯೆ 187ಕ್ಕೆ ಹೆಚ್ಚಿದೆ. ಇನ್ನೂ 5,475 ಪ್ರಕರಣಗಳು ಜಿಲ್ಲೆಯಾದ್ಯಂತ ಸಕ್ರಿಯವಾಗಿವೆ. ಇದುವರೆಗೂ 10,091 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬುಧವಾರ ಬಳ್ಳಾರಿ ತಾಲೂಕಿನಲ್ಲಿ 323 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದರೆ, ಸಂಡೂರಿನಲ್ಲಿ 70, ಸಿರುಗುಪ್ಪ 54, ಕೂಡ್ಲಿಗಿ 11, ಹೂವಿನ ಹಡಗಲಿ 44, ಹೊಸಪೇಟೆ 125, ಹಗರಿಬೊಮ್ಮನಹಳ್ಳಿ 18, ಹರಪನಹಳ್ಳಿ 29 ಕೇಸ್‌ಗಳು ಪತ್ತೆಯಾಗಿವೆ. ಇನ್ನು, ಅಂತರ್ರಾಜ್ಯದ 1, ಅಂತರ್‌ಜಿಲ್ಲೆಯ 6 ಸೋಂಕಿತರು ಕಂಡುಬಂದಿದ್ದಾರೆ.

ಕೊರೊನಾಗಿಂತಲೂ ಹಸಿವು ಕ್ರೂರಿ..! ಐಸೋಲೇಷನ್‌ನಲ್ಲಿದ್ದ ವೃದ್ಧ ಹೆಚ್ಚು ಮಾತ್ರೆ ಸೇವಿಸಿ ಸಾವು..!

ರಾಜ್ಯದಲ್ಲಿ ಬೆಂಗಳೂರು ನಂತರ ಅತಿಹೆಚ್ಚು ಸೋಂಕಿತರನ್ನು ಬಳ್ಳಾರಿ ಹೊಂದಿದೆ. ಕೇವಲ ಸೋಂಕಷ್ಟೇ ಅಲ್ಲದೇ ಸಾವಿನ ಸಂಖ್ಯೆಯೂ ಕೂಡ ಹೆಚ್ಚಿರುವುದು ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದಿರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.

ಗಣಿ ಜಿಲ್ಲೆಯಲ್ಲಿ 14 ಸಾವಿರ ಗಡಿ ದಾಟಿದ ಕೊರೊನಾ..! 323 ಹೊಸ ಕೇಸ್‌; 704 ಜನ ಗುಣಮುಖ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ