ಹಗರಿಬೊಮ್ಮನಹಳ್ಳಿ (ಬಳ್ಳಾರಿ): ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಕೇವಲ ಸಾವು-ನೋವುಗಳು ಕೇಳಿ ಬರುವುದು, 'ಪಾಸಿಟಿವ್' ಎನ್ನುತ್ತಿದ್ದಂತೆಯೇ ಬೆಚ್ಚಿ ಬೀಳುವುದು ಕೇಳಿದ್ದೇವೆ. ಆದರೆ, ಇದಕ್ಕೆ ತದ್ವಿರುದ್ಧವಾದ ಸ್ವಾರಸ್ಯಕರ ಸಂಗತಿ ಹಗರಿಬೊಮ್ಮನಹಳ್ಳಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಗುರುವಾರ ನಡೆದಿದೆ. 'ಓ.. ವೆರಿ ಗುಡ್..! ಪಾಸಿಟಿವ್ ಬಂದಿದೆ.. ರೆಗ್ಯುಲರ್ ಆಗಿ ಚೆಕಪ್ ಮಾಡಿಸಿಕೊಳ್ಳಿ. ಒಳ್ಳೆಯದಾಗಲಿ..' ಎಂದು ವೈದ್ಯಾಧಿಕಾರಿ ಹೇಳುತ್ತಿದ್ದಂತೆಯೇ, ಇತ್ತ ಪಾಸಿಟಿವ್ ಎಂಬ ಶಬ್ದ ಕೇಳಿದೊಡನೆನೇ ರಿಪೋರ್ಟ್ ತಂದಾತನ ಕಣ್ಣಲ್ಲಿ ನೀರು ಬರಲಾರಂಭಿಸಿತು.
ಪಕ್ಕದಲ್ಲಿದ್ದವರೂ ಸ್ವಲ್ಪ ದೂರ ಸರಿದು ನಿಂತರು..! ಟೆಸ್ಟಿಂಗ್ ರಿಪೋರ್ಟ್ ಹಿಡಿದುಕೊಂಡಾತ 'ಏನ್ ಸಾರ್, ಪಾಸಿಟಿವ್ ಅಂತೀರಿ, ಒಳ್ಳೆಯದಾಗ್ಲಿ ಅಂತೀರಿ ಹೆಂಗೆ ಸಾರ್..?' ಎಂದು ಗೋಳಾಡಲಾರಂಭಿಸಿದ. ಅಳುವಿಗೆ ಆತನ ಪತ್ನಿಯೂ ಸಾಥ್ ನೀಡಿದರು.
ಆಗ ಪಾಸಿಟಿವ್ ಎಂಬ ರಿಪೋರ್ಟ್ಅನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದನ್ನು ಅರಿತ ವೈದ್ಯರು, ತಕ್ಷಣವೇ ಎಚ್ಚೆತ್ತುಕೊಂಡರು. 'ಅಲ್ರೀ, ನೀವು ತಂದೆಯಾಗ್ತಿದ್ದೀರಿ, ನಿಮ್ಮ ಮನೆಯವರ ಪ್ರೆಗ್ನೆನ್ಸಿ ರಿಪೋರ್ಟ್ ಪಾಸಿಟಿವ್ ಬಂದಿದೆ. ಖುಷಿ ಪಡೋದು ಬಿಟ್ಟು ಅಳ್ತೀರಲ್ರಿ' ಎಂದು ಸಮಾಧಾನ ಪಡಿಸಿದರು.
ಆಗ, ಅಳುತ್ತಿದ್ದ ದಂಪತಿ ಮರುಕ್ಷಣವೇ ಪರಸ್ಪರ ಖುಷಿಯಿಂದ ಕಣ್ಣೀರು ಒರೆಸಿಕೊಂಡರು. ತುಟಿಯಂಚಿನಲ್ಲಿ ನಗೆ ಬೀರಿ ವೈದ್ಯರಿಗೆ ಕೈ ಮುಗಿದರು. 'ಸಾರ್, ಮದುವೆಯಾಗಿ 3 ವರ್ಷದ ಮೇಲೆ ಮಕ್ಕಳಾಗ್ತಿದೆ. ಪಾಸಿಟಿವ್ ಅಂದ ಕೂಡ್ಲೇ ಇದೇನಾಯ್ತುಪ್ಪಾ ಅಂತಾ ಚಿಂತೆಯಾಯ್ತು' ಎಂದು ತಮ್ಮ ಆತಂಕದ ಕ್ಷಣಗಳನ್ನು ಬಿಚ್ಚಿಟ್ಟು, ಖುಷಿಯಿಂದಲೇ ಹಿಂತಿರುಗಿದರು.