ಆ್ಯಪ್ನಗರ

ದಾಖಲೆ ಬಹಿರಂಗಕ್ಕೆ ಗೃಹಸಚಿವರಿಗೆ ದಿನದ ಗಡುವು

ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯೊಂದಿಗೆ ಬಿಜೆಪಿ ಗೌಪ್ಯ ಸಂಬಂಧ ಹೊಂದಿದೆ ಎಂಬ ಗೃಹಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಖಂಡಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷಬಿ.ಎಸ್.ಯಡಿಯೂರಪ್ಪ, ಪಿಎಫ್‌ಐ ಸಂಬಂಧ ಸಾಬೀತುಪಡಿಸುವ ಅಗತ್ಯ ದಾಖಲೆ ಬಹಿರಂಗಪಡಿಸಲು 24 ತಾಸು ಗಡುವು ನೀಡಿದ್ದಾರೆ.

Vijaya Karnataka 6 Jan 2018, 8:25 am
ಬಳ್ಳಾರಿ: ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯೊಂದಿಗೆ ಬಿಜೆಪಿ ಗೌಪ್ಯ ಸಂಬಂಧ ಹೊಂದಿದೆ ಎಂಬ ಗೃಹಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಖಂಡಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷಬಿ.ಎಸ್.ಯಡಿಯೂರಪ್ಪ, ಪಿಎಫ್‌ಐ ಸಂಬಂಧ ಸಾಬೀತುಪಡಿಸುವ ಅಗತ್ಯ ದಾಖಲೆ ಬಹಿರಂಗಪಡಿಸಲು 24 ತಾಸು ಗಡುವು ನೀಡಿದ್ದಾರೆ.
Vijaya Karnataka Web deadline for record exposure
ದಾಖಲೆ ಬಹಿರಂಗಕ್ಕೆ ಗೃಹಸಚಿವರಿಗೆ ದಿನದ ಗಡುವು


ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಈ ಕುರಿತು ತನಿಖೆ ನಡೆಸುವ ಅಧಿಕಾರ ಸಚಿವರಿಗೆ ಇದೆ. ಪಿಎಫ್‌ಐ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು’’ ಎಂದ ಅವರು, ‘‘ದೀಪಕ್ ಶರ್ಮಾ ಅವರ ಶವದ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸುವುದು ಬಿಟ್ಟು ಮೆರವಣಿಗೆಯನ್ನೇ ತಡೆದಿರುವುದು ಸರಿಯಲ್ಲ. ಕಳೆದ ಮೂರು ವರ್ಷಗಳಿಂದ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆ ನಿರಂತರವಾಗಿದೆ. ಈ ಮೂಲಕ ಕಾರ್ಯಕರ್ತರು ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸಿಎಂ ಸಿದ್ದರಾಮಯ್ಯ ಅವರು, ಜಾತಿಯ ವಿಷಬೀಜ ಬಿತ್ತುತ್ತಿದ್ದಾರೆ’’ ಎಂದು ಆರೋಪಿಸಿದರು.

‘‘ದೀಪಕ್ ಸೇರಿ ಇತರ ಕಾರ್ಯಕರ್ತರ ಹತ್ಯೆ ಖಂಡಿಸಿ, ಜ.7ರಂದು ಬೆಂಗಳೂರಿನಲ್ಲಿ ಮೌನಪ್ರತಿಭಟನೆ ನಡೆಸಲಾಗುತ್ತದೆ. ನಂತರ ಒಂದೆರಡು ದಿನಗಳಲ್ಲಿ ಮಂಗಳೂರಿಗೆ ತೆರಳಿ, ದೀಪಕ್ ಕುಟುಂಬದವರಿಗೆ ಸಾಂತ್ವನ ಹೇಳಲಾಗುವುದು’’ ಎಂದರು.

ಅಮಿತ್ ಷಾ, ಮೋದಿ ರಾಜ್ಯ ಭೇಟಿ: ‘‘ಜ.10ರಂದು ಚಿತ್ರದುರ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭಾಗವಹಿಸಲಿದ್ದರೆ, ಜ.28ರಂದು ನಡೆಯುವ ‘ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ’ಯ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ’’ ಎಂದು ತಿಳಿಸಿದರು.

ಹೇಳಿಕೆ ತಿರುಚುವುದು ಅಕ್ಷಮ್ಯ: ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಪೇಸ್‌ಬುಕ್‌ನಲ್ಲಿ ಅಮಿತ್ ಷಾ ಅವರ ‘‘ಜಾತಿ ಗೊಂದಲ ಸೃಷಿಸಿ’’ ಎಂಬ ಹೇಳಿಕೆಗೆ ಸಂಬಂಧಿಸಿ ಪ್ರಸ್ತಾಪಿಸಿರುವ ವಿಷಯ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಬಿ.ಎಸ್.ಯಡಿಯೂರಪ್ಪ, ‘‘ರಾಷ್ಟ್ರೀಯ ಅಧ್ಯಕ್ಷರು ಅಂತಹ ಹೇಳಿಕೆ ನೀಡುವುದಿಲ್ಲ. ಹೇಳಿಕೆಯನ್ನು ತಿರುಚಿ ಪ್ರಕಟಿಸಲಾಗಿದೆ. ಹೀಗೆ ತಿರುಚಿ ಯಾರೇ ಹೇಳಿದರೂ ಅದು ಅಕ್ಷಮ್ಯ ಅಪರಾಧ. ಈ ರೀತಿ ಹೇಳಿಕೆ ನೀಡಬಾರದು ಎಂದು ಸಂಸದರಿಗೆ ಎಚ್ಚರಿಕೆ ನೀಡಲಾಗಿದೆ’’ ಎಂದರು.

‘‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ ಅವರು, ಗೋವಾ ರಾಜ್ಯದ ಕಾಂಗ್ರೆಸ್ ಮುಖಂಡರಿಗೆ ಛೀಮಾರಿ ಹಾಕಿ, ಬುದ್ಧಿ ಹೇಳುವುದು ಬಿಟ್ಟು ವೃಥಾ ಆರೋಪ ಮಾಡುತ್ತಾರೆ’’ ಎಂದು ಟೀಕಿಸಿದ ಅವರು, ‘‘ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವರ್ಷ 45,547 ನಾನಾ ಪ್ರಕರಣಗಳು ನಡೆದರೆ, ಮುಂಬಯಿಯಲ್ಲಿ 3900 ಪ್ರಕರಣಗಳು ದಾಖಲಾಗಿವೆ’’ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಶಾಸಕರಾದ ಸುರೇಶ್‌ಬಾಬು, ಬಿಜೆಪಿ ಮುಖಂಡರಾದ ರವಿಕುಮಾರ್, ಜಿ.ಸೋಮಶೇಖರ್ ರೆಡ್ಡಿ, ಚೆನ್ನಬಸವನಗೌಡ, ಡಾ.ಮಹಿಪಾಲ್, ಕೆ.ಎ.ರಾಮಲಿಂಗಪ್ಪ, ಗೋನಾಳ್ ರಾಜಶೇಖರ್‌ಗೌಡ, ಕೆ.ಬಸವರಾಜ್, ಗುತ್ತಿಗನೂರು ವಿರೂಪಾಕ್ಷಗೌಡ ಸೇರಿ ಇತರರಿದ್ದರು.

...............

*ಜನಾರ್ದನರೆಡ್ಡಿ ಪಕ್ಷದಲ್ಲಿ ಸಕ್ರಿಯರಾಗಿಲ್ಲ

‘‘ಜಿ.ಜನಾರ್ದನ ರೆಡ್ಡಿಯವರು ಬಿಜೆಪಿಗೆ ಮರಳುತ್ತಾರೆಯೇ?’’ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಎಸ್.ಯಡಿಯೂರಪ್ಪ, ‘‘ಆ ವಿಷಯ ನಮ್ಮ ಮುಂದೆ ಪ್ರಸ್ತಾಪವಿಲ್ಲ. ಅದು ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು. ಅವರು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ’’ ಎಂದು ಚುಟುಕಾಗಿ ಉತ್ತರಿಸಿದರು.

............

ಕಾಂಗ್ರೆಸ್‌ನಂತೆ ಕವರ್‌ನಲ್ಲಿ ಪಟ್ಟಿ ಮಾಡಿಕೊಂಡು ಬಂದು ಟಿಕೆಟ್ ಹಂಚಿಕೆಮಾಡುವ ಸಂಸ್ಕೃತಿ ನಮ್ಮದಲ್ಲ.

-ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷರು, ಬಿಜೆಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ