ಆ್ಯಪ್ನಗರ

ಲಂಚಕ್ಕೆ ಬೇಡಿಕೆ: ಸಂಚಾರಿ ಪೇದೆ ಬಂಧನ

ಎಲ್ಲ ದಾಖಲೆಗಳಿದ್ದರೂ ಮಹಾರಾಷ್ಟ್ರ ಮೂಲದ ಲಾರಿ ಚಾಲಕನಿಗೆ ಲಂಚದ ಬೇಡಿಕೆ ಇಟ್ಟಿದ್ದ ಇಲ್ಲಿನ ಸಂಚಾರಿ ಪೊಲೀಸ್ ಪೇದೆ ಕೃಷ್ಣ ಅವರನ್ನು ಎಸಿಬಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

vijay karantaka 23 Feb 2018, 7:49 am
ಬಳ್ಳಾರಿ; ಎಲ್ಲ ದಾಖಲೆಗಳಿದ್ದರೂ ಮಹಾರಾಷ್ಟ್ರ ಮೂಲದ ಲಾರಿ ಚಾಲಕನಿಗೆ ಲಂಚದ ಬೇಡಿಕೆ ಇಟ್ಟಿದ್ದ ಇಲ್ಲಿನ ಸಂಚಾರಿ ಪೊಲೀಸ್ ಪೇದೆ ಕೃಷ್ಣ ಅವರನ್ನು ಎಸಿಬಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
Vijaya Karnataka Web demand for bribes traffic arrest
ಲಂಚಕ್ಕೆ ಬೇಡಿಕೆ: ಸಂಚಾರಿ ಪೇದೆ ಬಂಧನ


ಬುಧವಾರ ಸಂಜೆ, ಈ ಲಾರಿಯನ್ನು ಪೇದೆ ಕೃಷ್ಣ ಪರಿಶೀಲಿಸಿದ್ದರು. ಎಲ್ಲ ದಾಖಲೆಗಳಿದ್ದರೂ 8 ಸಾವಿರ ರೂ. ಲಂಚ ಕೊಡುವಂತೆ ಪಟ್ಟುಹಿಡಿದಿದ್ದರು. ಈ ಕುರಿತು ಲಾರಿ ಚಾಲಕ ಪರಮೇಶ್ವರ್ ಅವರು ಎಸಿಬಿಗೆ ದೂರು ನೀಡಿದ್ದರು. ದೂರು ಆಧರಿಸಿ, ಎಸಿಬಿ ಡಿವೈಎಸ್ಪಿ ಅರುಣ್‌ಕುಮಾರ್ ಕೋಳೂರು ನೇತೃತ್ವದ ತಂಡ, ನಿಗದಿತ ಸ್ಥಳದ ಮೇಲೆ ಗುರುವಾರ ದಾಳಿ ನಡೆಸಿತು. ಲಾರಿ ಚಾಲಕನಿಂದ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಪೇದೆಯನ್ನು ವಶಕ್ಕೆ ಪಡೆಯಿತು. ಬಂಧಿತ ಪೇದೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ