ಆ್ಯಪ್ನಗರ

ಬಳ್ಳಾರಿ ಜೈಲಿಗೆ ಡಿಜೆ ಹಳ್ಳಿ ಗಲಭೆ ಆರೋಪಿಗಳು ಶಿಫ್ಟ್

ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ 80ಕ್ಕೂ ಹೆಚ್ಚು ಆರೋಪಿಗಳನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ ಮಾಡಲಾಗಿದೆ.

Vijaya Karnataka Web 14 Aug 2020, 10:03 am
ಬಳ್ಳಾರಿ: ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ 80ಕ್ಕೂ ಹೆಚ್ಚು ಆರೋಪಿಗಳನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಶುಕ್ರವಾರ ಕರೆತರಲಾಗಿದೆ.
Vijaya Karnataka Web ballari central jail
ಬಳ್ಳಾರಿ ಜೈಲು ಮುಂಭಾಗ ಆರೋಪಿಗಳನ್ನು ಕರೆತಂದ ಬಸ್


ಬೆಂಗಳೂರಿನಿಂದ ಮೂರು ಕೆಎಸ್ ಆರ್ ಟಿಸಿ ಬಸ್ ಹಾಗೂ ಎರಡು ಕೆಎಸ್ ಆರ್ ಪಿ ವಾಹನಗಳಲ್ಲಿ 81 ಜನ ಆರೋಪಿಗಳನ್ನು ಬೆಳಗಿನ ಜಾವ ಪೊಲೀಸ್ ಬಿಗಿ ಭದ್ರತೆಯಲ್ಲಿ ಸುರಕ್ಷಿತವಾಗಿ ಕೇಂದ್ರ ಕಾರಗೃಹಕ್ಕೆ ಕರೆತರಲಾಗಿದೆ. ಬಳ್ಳಾರಿ ಜೈಲಿಗೆ ಕರೆತರುತ್ತಿದ್ದಂತೆ ಆರೋಪಿಗಳು ಜೈಲಿನ ಆವರಣದಲ್ಲಿ ಮೊಬೈಲ್ ನೀಡುವಂತೆ ಮಾಧ್ಯಮದವರು ಸೇರಿದಂತೆ ಕೆಲ ಪೊಲೀಸರಿಗೆ ಒತ್ತಾಯ ಮಾಡಿದರು.

ದಯವಿಟ್ಟು ಮೊಬೈಲ್ ಕೊಡಿ, ಮನೆಗೆ ಪೋನ್ ಮಾಡಬೇಕಿದೆ. ಮನೆಯಲ್ಲಿ ನಮಗಾಗಿ ಕಾಯ್ತಿರುತ್ತಾರೆ. ನಮ್ಮನ್ನು ಬಳ್ಳಾರಿಗೆ ಕರೆದುಕೊಂಡು ಬಂದಿರೋದು ಅವರಿಗೆ ಗೊತ್ತಿಲ್ಲ. ಬಳ್ಳಾರಿ ಜೈಲಿಗೆ ಬಂದಿದ್ದೇವೆ ಎಂದಷ್ಟೇ ಹೇಳುತ್ತೇವೆ. ಬೇಕಾದ್ರೇ ಸ್ಪೀಕರ್ ಆನ್ ಮಾಡ್ತೇವೆ ನೀವು ಕೇಳಿಸಿಕೊಳ್ಳಿ ಎಂದು ಮೊಬೈಲ್ ಗಾಗಿ ಪೀಡಿಸಿದರು‌. ಬಳಿಕ ಪೊಲೀಸರ ಮಧ್ಯ ಪ್ರವೇಶಿಸಿ ಯಾವುದೇ ಕಾರಣಕ್ಕೂ ಮೊಬೈಲ್ ಕೊಡಲು ಅವಕಾಶವಿಲ್ಲ ಎಂದು ತಿಳಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ