ಆ್ಯಪ್ನಗರ

ಬೇಡ ಜಂಗಮ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಧರಣಿ

ತಾಲೂಕಿನ ಬೇಡ ಜಂಗಮರಿಗೆ ಕೂಡಲೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಡಾ.ಅಂಬೇಡ್ಕರ್‌ ಬೇಡಜಂಗಮ ಪ.ಜಾತಿ ರಕ್ಷ ಣಾ ವೇದಿಕೆ ಪದಾಧಿಕಾರಿಗಳು ತಹಸಿಲ್‌ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.

Vijaya Karnataka 28 Sep 2018, 5:00 am
ಹಗರಿಬೊಮ್ಮನಹಳ್ಳಿ : ತಾಲೂಕಿನ ಬೇಡ ಜಂಗಮರಿಗೆ ಕೂಡಲೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಡಾ.ಅಂಬೇಡ್ಕರ್‌ ಬೇಡಜಂಗಮ ಪ.ಜಾತಿ ರಕ್ಷ ಣಾ ವೇದಿಕೆ ಪದಾಧಿಕಾರಿಗಳು ತಹಸಿಲ್‌ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.
Vijaya Karnataka Web BLR-BLY26HBH2


ವೇದಿಕೆ ರಾಜ್ಯಾಧ್ಯಕ್ಷ ಡಾ.ಎಂ.ಪಿ.ದಾರಕೇಶ್ವರಯ್ಯ ಮಾತನಾಡಿ, ಕಳೆದ ವರ್ಷದಿಂದಲೂ ರಾಜ್ಯದಲ್ಲಿ ಬೇಡ ಜಂಗಮ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಈಗಾಗಲೆ ಸಾವಿರಾರು ಜನರಿಗೆ ಪ್ರಮಾಣ ಪತ್ರ ನೀಡಲಾಗಿದೆ. ಆದರೆ, ತಾಲೂಕಿನಲ್ಲಿ ತಹಸೀಲ್ದಾರ್‌ ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿರುವುದು ಸಮುದಾಯವನ್ನು ತುಳಿಯುವ ಹುನ್ನಾರವಾಗಿದೆ. ವೇದಿಕೆಯಿಂದ ಶಿಪಾರಸು ಮಾಡಲಾಗುವವರಿಗೆ ತಕ್ಷ ಣವೇ ಜಾತಿ ಪ್ರಮಾಣ ಪತ್ರ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು. ಸಮುದಾಯಕ್ಕೆ ಶಿಕ್ಷ ಣ, ಆರೋಗ್ಯ, ಉದ್ಯೋಗ ಸೇರಿ ನಾನಾ ಸೌಲಭ್ಯ ಕಲ್ಪಿಸಲು ಪೂರಕವಾಗಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿದರು. ಪುರಸಭೆ ಸದಸ್ಯ ಡಾ.ಎ.ಎಂ.ಎ.ಸುರೇಶ್‌ಕುಮಾರ್‌, ರಾಜ್ಯ ಉಚ್ಛನ್ಯಾಯಾಲಯದ ಆದೇಶವನ್ನು ಅಧಿಕಾರಿಗಳು ಉಲ್ಲಂಘಿಸಿ, ಸಮುದಾಯಕ್ಕೆ ಅನ್ಯಾಯವೆಸಗುತ್ತಿದ್ದಾರೆ ಎಂದು ಸಿಡಿಮಿಡಿಗೊಂಡರು. ವೇದಿಕೆಯ ಮುಖಂಡರಾದಶ್ರೀನಿವಾಸ, ಶಶಿಧರ, ಟಿ.ಎಂ.ಮಹೇಶ್ವರಯ್ಯ, ಮಂಜುನಾಥ, ಎಸ್‌.ಕೆ.ಎಂ.ಪ್ರಶಾಂತ, ಎಸ್‌.ಎಂ.ಪ್ರಕಾಶ್‌, ಜಗದೀಶ್ವಯ್ಯ, ಜಿ.ಎಂ. ಮಹೇಶ್ವರಯ್ಯ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ