ಆ್ಯಪ್ನಗರ

ದಾಖಲೆ ಅಂಚೆ ಮತದಾನ

ಪ್ರತಿಯೊಬ್ಬ ಸರಕಾರಿ ನೌಕರರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸರಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ತಾಲೂಕಿನಲ್ಲಿ ಅಂಚೆ ಮತದಾನದಲ್ಲಿ ದಾಖಲೆಯಾಗಿದೆ.

Vijaya Karnataka 12 May 2018, 5:00 am
ಸಿರುಗುಪ್ಪ : ಪ್ರತಿಯೊಬ್ಬ ಸರಕಾರಿ ನೌಕರರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸರಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ತಾಲೂಕಿನಲ್ಲಿ ಅಂಚೆ ಮತದಾನದಲ್ಲಿ ದಾಖಲೆಯಾಗಿದೆ.
Vijaya Karnataka Web document post voting
ದಾಖಲೆ ಅಂಚೆ ಮತದಾನ


ತಾಲೂಕಿನಲ್ಲಿ 1231 ನೌಕರರರು ಇದ್ದಾರೆ. ಈ ಪೈಕಿ 966 ಸಿಬ್ಬಂದಿಗೆ ಈಗಾಗಲೇ ಚುನಾವಣೆ ವಿಭಾಗದಿಂದ ಅಂಚೆ ಮತದಾನದ ಅರ್ಜಿಗಳನ್ನು ಹಂಚಿಕೆ ಮಾಡಲಾಗಿದೆ. ಗುರುವಾರ ಅಂತ್ಯದ ಹೊತ್ತಿಗೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಮತದಾನ ಪ್ರಮಾಣ 500ರ ಗಡಿ ದಾಟಿದೆ. ಪ್ರತಿ ಬಾರಿ ಚುನಾವಣೆಯಲ್ಲಿ ಅಂಚೆ ಮತದಾನಕ್ಕೆ ಹೆಚ್ಚಿನ ಆದ್ಯತೆ ಕಂಡುಬರುತ್ತಿರಲಿಲ್ಲ. 300ರ ಗಡಿ ದಾಟುವುದೇ ಕಷ್ಟವಾಗಿತ್ತು. ಈ ಸಲ ಹೆಚ್ಚಿನ ಪ್ರಮಾಣದಲ್ಲಿ ಮತದಾನ ದಾಖಲಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಮತದಾರರು ಮತದಾನಕ್ಕೆ ಹೆಚ್ಚಿನ ಮಹತ್ವ ನೀಡಲಾರಂಭಿಸಿದ್ದಾರೆಂಬ ಮಾತು ಕೇಳಿಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ