ಆ್ಯಪ್ನಗರ

ನಕಲಿ ಚಿನ್ನ ಮಾರಾಟದ ಶಂಕೆ: ಕಾಲ್ ಟ್ರ್ಯಾಕಿಂಗ್‌ ಮೂಲಕ ಸಿನಿಮೀಯ ಶೈಲಿಯಲ್ಲಿಆರೋಪಿಗಳ ಬಂಧನ

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಸೇರಿದಂತೆ ನಾನಾ ಪ್ರಕರಣಗಳಲ್ಲಿ ಬಾಗಿಯಾಗಿದ್ದರೆನ್ನಲಾಗಿದೆ. ತಪ್ಪಿಸಿಕೊಳ್ಳಲು ಮತ್ತೆ ಯತ್ನಿಸಿದಾಗ ಪೊಲೀಸರ ನೆರವಿಗೆ ಗ್ರಾಮಸ್ಥರು ಧಾವಿಸಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Vijaya Karnataka Web 8 May 2022, 7:52 pm
ಹೂವಿನಹಡಗಲಿ: ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನ ಸೇರಿದಂತೆ ನಾನಾ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Vijaya Karnataka Web ಪೊಲೀಸ್‌
ಪೊಲೀಸ್‌


ಹರಪನಹಳ್ಳಿ ಹಾಗೂ ರಾಣೆಬೆನ್ನೂರು ತಾಲೂಕುಗಳ ನಾಲ್ವರು ಆರೋಪಿಗಳನ್ನು ಹೂವಿನಹಡಗಲಿ ತಾಲೂಕಿನ ಉತ್ತಂಗಿ ಬಳಿ ತ್ಯಾಮಗೊಂಡ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹರಪನಹಳ್ಳಿ ತಾಲೂಕಿನ ಎರಡೆತ್ತಿನಹಳ್ಳಿಯ ದುರುಗಪ್ಪ, ಬಸವರಾಜ, ಪುರುಷೋತ್ತಮ ಹಾಗೂ ರಾಣೆಬೆನ್ನೂರು ತಾಲೂಕಿನ ನಲವಾಗಲು ಗ್ರಾಮದ ವೀರೇಶ ಬಂಧಿತರು. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಸೇರಿದಂತೆ ನಾನಾ ಪ್ರಕರಣಗಳಲ್ಲಿ ಬಾಗಿಯಾಗಿದ್ದರೆನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆ : ಗಣಿಜಿಲ್ಲೆ ಬಳ್ಳಾರಿಗೆ ಸಿಗಲಿದೆಯೇ ಡಿಸಿಎಂ, ಸಚಿವ ಸ್ಥಾನ?

ಪೊಲೀಸರು ಕೆಲ ದಿನಗಳಿಂದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಆರೋಪಿಗಳ ಕಾಲ್‌ ಟ್ರ್ಯಾಕಿಂಗ್‌ ಮೂಲಕ ಪತ್ತೆ ಹಚ್ಚುತ್ತಾ ಭಾನುವಾರ ಹರಪನಹಳ್ಳಿಗೆ ಬಂದಿದ್ದಾರೆ. ಈ ವೇಳೆ ಮೊಬೈಲ್‌ನಲ್ಲಿ ಆರೋಪಿಗಳ ಸ್ಥಳ ಪತ್ತೆಯಾಗಿದೆ. ಆರೋಪಿಗಳು ನಕಲಿ ಚಿನ್ನ ಮಾರಾಟ ಮಾಡುತ್ತಿದ್ದರೆನ್ನಲಾಗಿದ್ದು, ಆರಂಭದಲ್ಲಿ ಗಿರಾಕಿ ಹುಡುಕಿ ಹಗರಿಬೊಮ್ಮನ ಹಳ್ಳಿ ಕಡೆ ಧಾವಿಸಿದ್ದಾರೆ. ಗಿರಾಕಿ ಆ ಸ್ಥಳದಲ್ಲಿ ಸಿಗದೇ ಇರುವುದರಿಂದ ಪುನಃ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಕಡೆ ಬಂದಿದ್ದಾರೆ.

ಟಿವಿಯಲ್ಲಿ ಕಾಣಿಸಿಕೊಳ್ಳಲು ಮನೆಬಿಟ್ಟ 4 ಬಾಲಕಿಯರು; ಚಾಲಕನ ಸಮಯ ಪ್ರಜ್ಞೆಯಿಂದ ಪೋಷಕರ ಮಡಿಲು ಸೇರಿದ್ರು

ಮಾರ್ಗ ಮಧ್ಯೆ ತ್ಯಾಮಗೊಂಡ್ಲ ಪೊಲೀಸರ ಎದುರಿಗೇ ಬಂದಿದ್ದು ಕಾರು ಸಿನಿಮೀಯ ರೀತಿಯಲ್ಲಿ ಡಿಕ್ಕಿ ಹೊಡೆದಿದೆ. ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಹೂವಿನ ಹಡಗಲಿ ಕಡೆ ಹೋಗುವಾಗ ದಾರಿ ತಪ್ಪಿ ಉತ್ತಂಗಿಯ ಗ್ರಾಮ ಪಂಚಾಯಿತಿ ಬಳಿ ಹಳ್ಳದ ಹತ್ತಿರ ಕಾರು ಕಲ್ಲಿಗೆ ಬಡಿದು ಸಿಕ್ಕಿ ಹಾಕಿಕೊಂಡಿದೆ. ತಪ್ಪಿಸಿಕೊಳ್ಳಲು ಮತ್ತೆ ಯತ್ನಿಸಿದಾಗ ಪೊಲೀಸರ ನೆರವಿಗೆ ಗ್ರಾಮಸ್ಥರು ಧಾವಿಸಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪರಾರಿಯಾಗಿದ್ದ ಕೈದಿ ಬಂಧನ

ಬಳ್ಳಾರಿ: ಜಿಲ್ಲಾ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಕೈದಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕೊಪ್ಪಳ ನಿವಾಸಿ ಚಂದ್ರಪ್ಪ (21) ಬಂಧಿತ. ಮೇ 5 ರಂದು ಕೊಪ್ಪಳ ಕಾರಾಗೃಹದಿಂದ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಆರೋಗ್ಯದಲ್ಲಿಏರುಪೇರು ಕಾಣಿಸಿಕೊಂಡು ಪರಿಣಾಮ ಚಿಕಿತ್ಸೆಗಾಗಿ ನಗರದ ಟಿ.ಬಿ.ಸ್ಯಾನಿಟೋರಿಯಂ ಗೆ ಕರೆದು ಹೋಗಲಾಗಿತ್ತು. ನಂತರ ಶೌಚಾಲಯಕ್ಕೆ ಹೋಗುತ್ತೀನಿ ಎಂದು ತಪ್ಪಿಸಿಕೊಂಡಿದ್ದ. ಆರೋಪಿಯನ್ನು ತಾಲೂಕಿನ ಕುಡಿತಿನಿಯ ಹತ್ತಿರದ ಪೊಲೀಸ್‌ ಠಾಣೆ ಎದುರು ಇರುವ ದರ್ಗಾ ಹತ್ತಿರದಲ್ಲಿ ಬಂಧಿಸಲಾಗಿದೆ. ಕೌಲ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ