ಆ್ಯಪ್ನಗರ

ನಾಲ್ಕು ಪಾದ, ಮೂರು ಕಾಲಿನ ಮಗು ಜನನ

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ರಾತ್ರಿ ಮಹಿಳೆಯೊಬ್ಬರು, ನಾಲ್ಕು ಪಾದ, ಮೂರು ಕಾಲುಗಳುಳ್ಳ ಗಂಡು ಮಗುವಿಗೆ ಜನ್ಮನೀಡಿದ್ದಾರೆ.

Vijaya Karnataka 27 Jun 2018, 12:00 am
ಕಂಪ್ಲಿ (ಬಳ್ಳಾರಿ): ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ರಾತ್ರಿ ಮಹಿಳೆಯೊಬ್ಬರು, ನಾಲ್ಕು ಪಾದ, ಮೂರು ಕಾಲುಗಳುಳ್ಳ ಗಂಡು ಮಗುವಿಗೆ ಜನ್ಮನೀಡಿದ್ದಾರೆ.
Vijaya Karnataka Web BLR-26KMP2


ಈ ಮಹಿಳೆಗೆ ಇದು ಮೊದಲ ಹೆರಿಗೆಯಾಗಿದೆ. ಮಗು 3.400ಕಿ.ಗ್ರಾಂ. ತೂಕವಿದ್ದು ಆರೋಗ್ಯ ಉತ್ತಮವಾಗಿದೆ. ಮಗುವಿನ ತಲೆ, ಬಾಯಿ, ಕಣ್ಣು, ಕತ್ತು, ಎಡಗಾಲು, ಕೈ ಕಾಲು ಬೆರಳು ಸೇರಿ ಎಲ್ಲ ಅಂಗಾಂಗಗಳು ಸಾಮಾನ್ಯವಾಗಿವೆ. ಆದರೆ, ಬಲಗಾಲು ಮಾತ್ರ ಸೊಟ್ಟಗಿದ್ದು, ಅದರ ಪಕ್ಕದಲ್ಲೇ ಇನ್ನೊಂದು ಕಾಲು ಬೆಳೆದಿದೆ. ಈ ಕಾಲಿಗೆ ಎರಡು ಪಾದಗಳಿವೆ.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಮೋಹನ್ ಪ್ರತಿಕ್ರಿಯಿಸಿ, ‘‘ಸಾಮಾನ್ಯವಾಗಿ ಸಂಬಂಧ (ಕಳ್ಳುಬಳ್ಳಿ)ದಲ್ಲಿ ಮದುವೆಯಾದರೆ ಇಂತಹ ಮಕ್ಕಳು ಜನಿಸುವ ಸಂಭವ ಹೆಚ್ಚು. ಮಗುವಿನ ಆರೋಗ್ಯ ಉತ್ತಮವಾಗಿದೆ. ಮಗುವಿಗೆ ಚಿಕಿತ್ಸೆ ಕೊಡಿಸಿದರೆ ಸೊಟ್ಟಗಿನ ಕಾಲು ಸರಿಪಡಿಸಬಹುದಾಗಿದೆ. ಈ ಬಗ್ಗೆ ಮೂಳೆ ತಜ್ಞರ ನೆರವು ಪಡೆಯಬೇಕಿದೆ’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ