ಆ್ಯಪ್ನಗರ

ನಾಲ್ಕೈದು ಲಕ್ಷ ರೂ.ಗಳ ವಿದ್ಯುತ್‌ ಬಿಲ್‌ ನೋಡಿ ಹೌಹಾರಿದ ಬಳ್ಳಾರಿ ಜನತೆ!

ಸಾಮಾನ್ಯವಾಗಿ 400-500 ರೂ.ಗಳ ವಿದ್ಯುತ್‌ ಬಿಲ್‌ ನೋಡಿದ್ದ ಗ್ರಾಹಕರಿಗೆ 4-5 ಲಕ್ಷ ರೂ.ಗಳ ಬಿಲ್‌ ತೋರಿಸಿ ಬಳ್ಳಾರಿಯ ಸಿರುಗುಪ್ಪದ ಗ್ರಾಹಕರಿಗೆ ಜೆಸ್ಕಾಂ ಶಾಕ್‌ ನೀಡಿದೆ. ಕರೆಂಟ್‌ ಬಳಕೆಗೆ ಹಿಂದೇಟು ಹಾಕುವಂತೆ ಮಾಡಿದೆ.

Vijaya Karnataka Web 24 Jan 2020, 11:40 am
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ಸಾಮಾನ್ಯವಾಗಿ ಬರುತ್ತಿದ್ದ ನಾಲ್ಕೈದು ನೂರು ರೂ. ವಿದ್ಯುತ್ ಬಿಲ್ ನಾಲ್ಕೈದು ಲಕ್ಷಗಳಲ್ಲಿ ಬಂದಿದ್ದು ಗ್ರಾಹಕರು ಶಾಕ್‌ಗೆ ಒಳಗಾಗಿದ್ದಾರೆ. ಇದು ನಮ್ಮ ಮನೆಯ ವಿದ್ಯುತ್‌ ಬಿಲ್‌ ಹೌದೋ ಅಲ್ಲವೋ ಎಂದು ನಾಲ್ಕೈದು ಬಾರಿ ತಿರುಗಿ ಮುರುಗಿ ನೋಡಿದ್ದಾರೆ. ಇಷ್ಟು ಬಂದಿದ್ದಾದರೂ ಹೇಗೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಈ ವಿದ್ಯುತ್‌ ಸಹವಾಸವೇ ಬೇಡವೆಂದು, ಕರೆಂಟ್‌ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ.
Vijaya Karnataka Web Electricity Bill


ಸಿರುಗುಪ್ಪದ ವಿದ್ಯುತ್ ಗ್ರಾಹಕರಿಗೆ ಸಾಮಾನ್ಯವಾಗಿ ತಿಂಗಳಿಗೆ 400-500 ರೂ. ಬರುತ್ತಿತ್ತು. ಇದೀಗ ಜೆಸ್ಕಾಂ ಕೊಟ್ಟ ವಿದ್ಯುತ್‌ ಬಿಲ್‌ನಲ್ಲಿ 5,78, 888 ರೂ., ಮತ್ತು 4,51,765 ರೂ. ಇದೆ. ಸಿರುಗುಪ್ಪದ ನಾನಾ ಕಡೆ ಇದೇ ರೀತಿಯಲ್ಲಿ ಬಿಲ್ ಬಂದಿರೋ ಕಾರಣಕ್ಕೆ ಜನ ಕಂಗಾಲಾಗಿದ್ದಾರೆ.

ಒಂದೆಡೆ ವಿದ್ಯುತ್‌ ಬಿಲ್ ನೋಡಿ ಗ್ರಾಹಕರು ಕಂಗಾಲಾಗಿದ್ದರೆ, ನಿಗದಿತ ಅವಧಿಯೊಳಗೆ ಬಿಲ್ ಪಾವತಿ ಮಾಡಲು ಜೆಸ್ಕಾಂ ಅಧಿಕಾರಿಗಳ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ವಿದ್ಯುತ್‌ ಇಲಾಖೆಯ ತಾಂತ್ರಿಕ ದೋಷದಿಂದ 400-500 ರೂ.ಗಳ ಬಿಲ್‌ 4-5 ಲಕ್ಷ ಬಿಲ್‌ಗಳಾಗಿ ಪರಿವರ್ತನೆಗೊಂಡಿವೆ ಎನ್ನಲಾಗಿದೆ. ಲಕ್ಷ ರೂ.ಗಳಲ್ಲಿ ಬಂದ ಬಿಲ್‌ ಬಗ್ಗೆ ಜೆಸ್ಕಾಂಗೆ ಗ್ರಾಹಕರು ದೂರು ನೀಡಿದ ಹಿನ್ನೆಲೆ ಲೋಪ ಸರಿಪಡಿಸಲು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ವರ್ಷಕ್ಕೆ ಲಕ್ಷ ರೂ. ವಿದ್ಯುತ್‌ ಬಿಲ್‌ ಬರುತ್ತಿದೆಯೇ? ಹಾಗಿದ್ದರೆ ಸಿಗದು ಸರಳ ಐಟಿಆರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ