ಆ್ಯಪ್ನಗರ

ಹಂಪಿ ಕನ್ನಡ ವಿವಿ: ಪ್ರೊ.ಸ.ಚಿ.ರಮೇಶ ಕುಲಪತಿ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ.ಸ.ಚಿ.ರಮೇಶ್‌ ಅವರನ್ನು ನೇಮಿಸಿ, ರಾಜ್ಯಪಾಲರು, ಫೆ.20ರಂದು ಆದೇಶಿಸಿದ್ದಾರೆ.

Vijaya Karnataka 22 Feb 2019, 5:09 pm
ಹೊಸಪೇಟೆ : ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ.ಸ.ಚಿ.ರಮೇಶ್‌ ಅವರನ್ನು ನೇಮಿಸಿ, ರಾಜ್ಯಪಾಲರು, ಫೆ.20ರಂದು ಆದೇಶಿಸಿದ್ದಾರೆ.
Vijaya Karnataka Web hampi kannada university prof ramesh chancellor
ಹಂಪಿ ಕನ್ನಡ ವಿವಿ: ಪ್ರೊ.ಸ.ಚಿ.ರಮೇಶ ಕುಲಪತಿ


ಸೆಕ್ಷ ನ್‌ 13(1) ಪ್ರಕಾರ ಕರ್ನಾಟಕ ವಿಶ್ವವಿದ್ಯಾಲಯದ ಕಾಯಿದೆ-1991ರ ಅನ್ವಯ ಪ್ರೊ.ಸ.ಚಿ.ರಮೇಶ ಅವರನ್ನು ಮೂರು ವರ್ಷಗಳ ಅವಧಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರೊ.ಸ.ಚಿ.ರಮೇಶ ಅವರು, ಹಂಪಿ ಕನ್ನಡ ವಿವಿ ಜಾನಪದ ವಿಭಾಗದ ಮುಖ್ಯಸ್ಥ ಮತ್ತು ಸಮಾಜ ವಿಜ್ಞಾನ ನಿಕಾಯದ ಡೀನ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಹಂಪಿ ಕನ್ನಡ ವಿವಿ ಕುಲಪತಿ ಆಯ್ಕೆಗೆ ಸಂಬಂಧಿಸಿದಂತೆ ಶೋಧನಾ ಸಮಿತಿಯು ಮೂವರ ಹೆಸರನ್ನು ರಾಜ್ಯ ಸರಕಾರದ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿತ್ತು. ಆ ಪಟ್ಟಿಯಲ್ಲಿ ಪ್ರೊ.ಸ.ಚಿ.ರಮೇಶ್‌ ಅವರ ಹೆಸರನ್ನು ರಾಜ್ಯಪಾಲರು ಅಂತಿಮಗೊಳಿಸಿದ್ದಾರೆ.

ಹಿಂದಿನ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರ ಅವಧಿ ಮೂರು ಬಾರಿ ವಿಸ್ತರಣೆಯಾಗಿತ್ತು. ಮೊದಲ ಬಾರಿ 2018 ಸೆ.8ರಿಂದ ಜ.8ರವರೆಗೆ, ಎರಡನೇ ಸಲ ಜ.8ರಿಂದ ಫೆ.8ರವಗೆ ಹಾಗೂ ಮೂರನೇ ಬಾರಿ ಫೆ.8ರಿಂದ ಒಂದು ತಿಂಗಳವರೆಗೆ ವಿಸ್ತರಣೆಯಾಗಿತ್ತು. ಡಾ.ಮಲ್ಲಿಕಾ ಘಂಟಿ ಅವರ ಒಂದು ತಿಂಗಳ ಅವಧಿ ಪೂರ್ಣವಾಗುವ ಮುನ್ನವೇ ಪ್ರೊ.ಸ.ಚಿ.ರಮೇಶ್‌ ಅವರನ್ನು ಕುಲಪತಿಗಳನ್ನಾಗಿ ರಾಜ್ಯಪಾಲರು ನೇಮಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ